ವಿದ್ಯಾರ್ಥಿನಿಲಯದಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ
Team Udayavani, Dec 13, 2021, 5:40 PM IST
ಪಾವಗಡ: ಶ್ರೀಮತಿ ವೈ.ಇ.ರಂಗಯ್ಯ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಅವರಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸ್ವತ್ಛತೆ ಮರೀಚಿಕೆಯಾಗಿದ್ದು, ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟಿದೆ ಎಂದು ಕಾಲೇಜಿನ ವಿದ್ಯಾರ್ಥಿಗಳು ಆರೋಪಿಸಿದರು.
ಕಾಲೇಜ್ ಆವರಣದಲ್ಲಿರುವ ವಸತಿ ನಿಲಯ ವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿದ್ದು, ವಸತಿ ಕಟ್ಟಡ ಸ್ವತ್ಛತೆಗೆ ರಾಜ್ಯ ಸರ್ಕಾರ ಹಣ ನೀಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವಿದ್ಯಾರ್ಥಿಗಳು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿದ್ದ ವಸತಿ ನಿಲಯದಲ್ಲಿ 160 ವಿದ್ಯಾರ್ಥಿಗಳಿದ್ದು, ಇಲ್ಲಿ ಮೇನು ಪ್ರಕಾರ ವಿದ್ಯಾರ್ಥಿಗಳಿಗೆ ಊಟ ನೀಡುತ್ತಿಲ್ಲ, ಗುಣ ಮಟ್ಟದ ಆಹಾರ ನೀಡುವುದಿಲ್ಲ, ಇಲ್ಲಿನ ವಸತಿ ನಿಲಯದಲ್ಲಿ ಸೀನಿಯರ್ ಮತ್ತು ಜೂನಿಯರ್ಗೆ ಊಟ ನೀಡುವಾಗ ತಾರತಮ್ಯ ಮಾಡಲಾಗುತ್ತಿದೆ. ಸಿನಿಯರ್ಸ್ ಗೆ ಹೊಟ್ಟೆ ತುಂಬಾ ಊಟ, ಜೂನಿಯರ್ ಮತ್ತೆ ಅನ್ನ ಕೇಳಿದರೆ ಗದರಿಸುವ ಪರಿಸ್ಥಿತಿ ಇದ್ದು, ಉಟದ ಸಮಯದಲ್ಲಿ ನಿಲಯ ಪಾಲಕರು ಇರುವುದಿಲ್ಲ.
ಇದನ್ನೂ ಓದಿ:- ಹಳ್ಳಿಯಲ್ಲಿಯೇ ಪ್ರಗತಿ ಹೊಂದುವ ಮಂತ್ರವನ್ನು ಗ್ರಾಮಸ್ಥರಿಗೆ ನೀಡಬೇಕು: ರಾಜೇಂದ್ರ ಅರ್ಲೆಕರ್
ಊಟ ಬಂದರು ಯಾರನ್ನು ಕೇಳುವ ಪರಿಸ್ಥಿತಿಯಿಲ್ಲ ಎಂದು ದೂರಿದರು. ವಸತಿ ನಿಲಯದ ಅಡುಗೆ ಕೋಣೆ ಜೇನು ಸಾಕಾಣಿಕ ಘಟಕದಂತಿದೆ. ಅಡುಗೆ ಕೋಣೆಯಲ್ಲಿ ಸೊಳ್ಳೆಗಳಿವೆ, ಸ್ವತ್ಛತೆ ಮರೀಚಿಕೆಯಾಗಿದೆ. ಅಡುಗೆ ಕೋಣೆ ದುರ್ನಾತ ಬೀರುತ್ತಿದೆ. ವಸತಿ ನಿಲಯದ ಕಟ್ಟಡದ ಸುತ್ತಲೂ ಮಲಮೂತ್ರ ವಿಸರ್ಜನೆ ಮಾಡಿರುವುದರಿಂದ ವಸತಿ ಕಟ್ಟಡವೇ ಸಾಂಕ್ರಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ.
ವಸತಿ ನಿಲಯದ ಕಟ್ಟಡದಲ್ಲಿ ರಾಶಿ ರಾಶಿ ಕಸ, ತರಕಾರಿಯಲ್ಲಿ ಸೊಳ್ಳೆಗಳ ದಂಡು, ಅಡುಗೆ ಕೋಣೆಯಲ್ಲಿನ ಕಸ ವಾರವಾದರೂ, ಹೊರಗೆ ಚೆಲ್ಲದ ಪರಿಣಾಮ ಅಡುಗೆ ತುಂಬಾ ಸೊಳ್ಳೆಗಳು ರಾಶಿ ರಾಶಿ ಇವೆ. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸನಾಯ್ಕ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವುದೇ ಇಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕು ಕೇಂದ್ರದ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ವಿದ್ಯಾರ್ಥಿಗಳ ಒತ್ತಾಯವಾಗಿದೆ.
“ಸರ್ಕಾರದಿಂದ ಅನುದಾನ ಸಕಾಲದಲ್ಲಿ ಬಿಡುಗಡೆಯಾಗುತ್ತಿಲ್ಲ. ವಸತಿ ನಿಲಯ ನಡೆಸಲು ಕೂಡ ಸಕಾಲದಲ್ಲಿ ಅನುದಾನ ನೀಡುತ್ತಿಲ್ಲ. ಸ್ವಂತ ಹಣದಲ್ಲಿ ವಸತಿ ನಿಲಯ ನಡೆಸಲಾಗುತ್ತಿದೆ. ಅಡುಗೆ ಸಹಾಯಕರು ಹೇಳಿದ ಮಾತೇ ಕೇಳಲ್ಲ.” ●ಅಶ್ವತ್ಥಪ್ಪ, ನಿಲಯ ಪಾಲಕರು
“ಎರಡು, ಮೂರು ಬಾರಿ ಭೇಟಿ ನೀಡಿದ್ದೆ. ಆಗ ಸ್ವತ್ಛತೆಯಿಂದ ಕೂಡಿತ್ತು. ಇತ್ತೀಚೆಗೆ ಭೇಟಿ ನೀಡಿಲ್ಲ. ಪರಿಶೀಲನೆ ಮಾಡುತ್ತೇನೆ.” ●ಶ್ರೀನಿವಾಸ ನಾಯ್ಕ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪಾವಗಡ
“ವಸತಿ ನಿಲಯದಲ್ಲಿ ಮೇನು ಪ್ರಕಾರ ಊಟ ಇಲ್ಲ. ಕೇಳಿದರೆ ದೌರ್ಜನ್ಯ ಮಾಡುತ್ತಾರೆ. ಊಟ ಕಡಿಮೆ ಬಂದರು ಕೇಳುವಂತಿಲ್ಲ. ಊಟದ ಸಮಯದಲ್ಲಿ ನಿಲಯ ಪಾಲಕರೆ ಇರುವುದಿಲ್ಲ. ಯಾರನ್ನು ಕೇಳಬೇಕು.” ●ಹೆಸರು ಹೇಳದ ವಿದ್ಯಾರ್ಥಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.