ದಶಕದ ನಂತರ ನಡೆದಿದೆ ಚರಂಡಿ ದುರಸ್ತಿ!

ಹತ್ತು ವರ್ಷಗಳ ಹಿಂದೆಯೇ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

Team Udayavani, Dec 13, 2021, 6:03 PM IST

ದಶಕದ ನಂತರ ನಡೆದಿದೆ ಚರಂಡಿ ದುರಸ್ತಿ!

ವಾಡಿ: ಕೋಟಿ ರೂ. ಖರ್ಚಿನಲ್ಲಿ ನಿರ್ಮಿಸಿ ವರ್ಷ ಕಳೆಯುವ ಮುನ್ನವೇ ಮುಗುಚಿಬಿದ್ದಿದ್ದ ನಗರದ ದೊಡ್ಡ ಚರಂಡಿಯೊಂದರ ದುರಸ್ತಿ ಕಾರ್ಯ ಬರೋಬ್ಬರಿ ಹತ್ತು ವರ್ಷಗಳ ನಂತರ ನಡೆಯುತ್ತಿದೆ! ಇದು ಅ ಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸ್ಥಳೀಯರ ಸಹನೆಗೆ ಹಿಡಿದ  ಕೈಗಕನ್ನಡಿಯಾಗಿದೆ.

ಪಟ್ಟಣದ ಪುರಸಭೆ ವ್ಯಾಪ್ತಿಯ ಶ್ರೀನಿವಾಸಗುಡಿ ವೃತ್ತದಿಂದ ರೆಸ್ಟ್‌ಕ್ಯಾಂಪ್‌ ತಾಂಡಾ ವರೆಗಿನ ಮುಖ್ಯರಸ್ತೆ ಬದಿಯ ದೊಡ್ಡ ಚರಂಡಿ ಅಭಿವೃದ್ಧಿಗೆ ಅಂದಿನ ಚಿತ್ತಾಪುರ ಶಾಸಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಉಪ ಚುನಾವಣೆಯಲ್ಲಿ ಗೆದ್ದು 2010ರಲ್ಲಿ ಶಾಸಕರಾಗಿದ್ದ ಬಿಜೆಪಿಯ ವಾಲ್ಮೀಕಿ ನಾಯಕ ಅವಧಿಯಲ್ಲಿ ಆರು ಅಡಿ ಆಳದ, ನಾಲ್ಕು ಅಡಿ ಅಗಲದ ಸುಮಾರು ಐದು ನೂರು ಮೀಟರ್‌ ಉದ್ದದ ದೊಡ್ಡ ಚರಂಡಿ ನಿರ್ಮಿಸಲಾಗಿತ್ತು. ಕಳಪೆ ಕಾಮಗಾರಿಗೆ ಸಾಕ್ಷಿ ಎಂಬಂತೆ ಮೆಥೋಡಿಸ್ಟ್‌ ಚರ್ಚ್‌ ಮಾರ್ಗದಲ್ಲಿ ಅರವತ್ತು ಅಡಿ ಉದ್ದಷ್ಟು ಚರಂಡಿ ನಿರ್ಮಿಸಿದ ವರ್ಷದಲ್ಲೇ ಮುಗುಚಿ ಬಿದ್ದಿತ್ತು. ಜನರು ಎಷ್ಟೇ ಮನವಿ ಸಲ್ಲಿಸಿದರೂ ಪುರಸಭೆ ಅಧಿ ಕಾರಿಗಳು ಮೌನಕ್ಕೆ ಶರಣಾಗಿದ್ದರು. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸ್ಥಳೀಯ ನಾಗರಿಕರ ಸಹನೆಗೆ ಇದು ನಿಚ್ಚಳ ಕನ್ನಡಿಯಾಗಿತ್ತು.

ಪುರಸಭೆ ಅಧಿಕಾರಿಗಳು ಮತ್ತು ಚುನಾಯಿತ ವಾರ್ಡ್‌ ಸದಸ್ಯರು ಮನಸ್ಸು ಮಾಡಿದ್ದರೆ, ಬಿದ್ದ ಚರಂಡಿಯನ್ನು ತಿಂಗಳಲ್ಲೇ ದುರಸ್ತಿ ಕೈಗೆತ್ತಿಕೊಂಡು ಜನರಿಗೆ ನೆಮ್ಮದಿ ಒದಗಿಸಬಹುದಾಗಿತ್ತು. ಇಚ್ಛಾಶಕ್ತಿಯ ಕೊರತೆಯಿಂದಾಗಿ ದಶಕಗಳ ನಿರ್ಲಕ್ಷ್ಯ ಮುಂದುವರಿದು ಏಳು ಜನ ಮುಖ್ಯಾಧಿಕಾರಿಗಳು ಬದಲಾದ ಬಳಿಕ ಇದೀಗ ಚರಂಡಿ ದುರಸ್ತಿಗೆ ಪುರಸಭೆ ಆಡಳಿತ ಮುಂದಾಗಿದೆ. ಕೋಟಿ ರೂ. ಅನುದಾನದ ಈ ಮುಖ್ಯ ಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ
ಎಂದು ಹಿಂದಿನ ಕರವೇ ಅಧ್ಯಕ್ಷ ಸಿದ್ದು ಪಂಚಾಳ ಅವರು ಹತ್ತು ವರ್ಷಗಳ ಹಿಂದೆಯೇ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಲೋಕಾಯುಕ್ತ ಅಭಿಯಂತರರು ಬಂದು ಚರಂಡಿ ಪರಿಶೀಲನೆ ನಡೆಸಿ ಹೋದರೇ ವಿನಃ ಯಾರ ವಿರುದ್ಧವೂ ಕ್ರಮಕೈಗೊಳ್ಳಲಿಲ್ಲ. ಎಸ್‌ಯುಸಿಐ ಪಕ್ಷದ ಮುಖಂಡರು ಸಲ್ಲಿಸಿದ ಮನವಿಗೆ ಮತ್ತು ಪುರಸಭೆ ವಿರೋಧ ಪಕ್ಷದ ನಾಯಕ ಭೀಮಶಾ ಜಿರೊಳ್ಳಿ ಅವರು ನೀಡಿದ ರಸ್ತೆತಡೆ ಹೋರಾಟದ ಎಚ್ಚರಿಕೆಗೆ ಮಣಿದ ಪುರಸಭೆ ಆಡಳಿತವು 2010ರಲ್ಲಿ ಬಿದ್ದ ಚರಂಡಿಯನ್ನು 2021ರಲ್ಲಿ ದುರಸ್ತಿಗೆ ಮುಂದಾಗಿದೆ.

ಟಾಪ್ ನ್ಯೂಸ್

5-belagavi

KSDL ಲಾಭಾಂಶ ₹108 ಕೋಟಿ ಸರ್ಕಾರಕ್ಕೆ ಹಸ್ತಾಂತರ

Food

2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

Priyana-Bag-Poli

Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!

Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ

Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ  ಅಂತ್ಯ!

Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!

14

ಸಾಕಿದ ನಾಯಿಗಾಗಿ ಬಾಯ್‌ ಫ್ರೆಂಡ್‌ ಜತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sharana-Patil

Covid Scam: ಕೋವಿಡ್‌ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌

All set for the Indian Cultural Festival

Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Collection of donations in the name of Sri Siddalinga of Siddaganga Math: Old students upset

ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ

Togari completely destroyed by neti disease

Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

5-belagavi

KSDL ಲಾಭಾಂಶ ₹108 ಕೋಟಿ ಸರ್ಕಾರಕ್ಕೆ ಹಸ್ತಾಂತರ

Food

2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?

4-panaji

Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

Priyana-Bag-Poli

Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.