ಬನ್ನಂಜೆಯವರ ಕೃತಿಗಳು ಅಧ್ಯಯನ ವಿಷಯಗಳಾಗಲಿ: ವಿದ್ಯಾಭೂಷಣ
Team Udayavani, Dec 14, 2021, 5:20 AM IST
ಬೆಂಗಳೂರು: ಬನ್ನಂಜೆ ಗೋವಿಂದಾಚಾರ್ಯರು ಭಗವಂತನನ್ನು ಅರಿತುಕೊಳ್ಳಲು ಅಕ್ಷರದ ಮೊರೆ ಹೋಗಿ ದ್ದರು. ಜನರು ಬನ್ನಂಜೆ ಯವರ ಕೃತಿಗಳನ್ನು ಅಧ್ಯಯನ ವಿಷಯಗಳಾಗಿ ಆಯ್ಕೆ ಮಾಡಿ ಕೊಳ್ಳುವ ಮೂಲಕ ಚಿರಸ್ಮರಣೀಯ ವಾಗಿಸಬೇಕಿದೆ ಎಂದು ಖ್ಯಾತ ಸಂಗೀತಕಾರ ವಿದ್ಯಾಭೂಷಣ ಅವರು ಹೇಳಿದರು.
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ನಗರದಲ್ಲಿ ಆಯೋ ಜಿಸಿದ್ದ ಆಚಾರ್ಯರ ಆರಾಧನೆ-1 ಮತ್ತು ಬನ್ನಂಜೆ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದರು.
ಭಂಡಾರಕೇರಿ ಮಠದ ವಿಧ್ಯೇಶ ತೀರ್ಥ ಸ್ವಾಮೀಜಿ ಮಾತನಾಡಿ, ಭಾರತದ ಜ್ಞಾನ ಪರಂಪರೆಯ ಶ್ರೇಷ್ಠ ವಿದ್ವಾಂಸ ವೇದವ್ಯಾಸರ ಹೆಸರಿನಲ್ಲಿ ದೇಶದಲ್ಲಿ ಯಾವುದೇ ವಿಶ್ವವಿದ್ಯಾನಿಲಯ ಇಲ್ಲದಿರುವುದು ದುರಂತ. ಆದ್ದರಿಂದ ವೇದವ್ಯಾಸರ ಜಯಂತಿ ಆಚರಿಸುವ ಜತೆಗೆ ವೇದವ್ಯಾಸ ಹೆಸರಿನ ವಿಶ್ವ ವಿದ್ಯಾನಿಲಯ ನಿರ್ಮಿ ಸಬೇಕಿದೆ ಎಂದರು.
ಇದನ್ನೂ ಓದಿ:ತಿರುಪತಿಯಿಂದ ತಿರುಮಲಕ್ಕೆ ಮತ್ತೊಂದು ರಸ್ತೆ
ಬನ್ನಂಜೆ ಪ್ರಶಸ್ತಿ
ಬನ್ನಂಜೆ ಪ್ರತಿಷ್ಠಾನವು ಸಂಸ್ಕೃತ ಭಾಷೆಯ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಬನ್ನಂಜೆ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಸಂಸ್ಕೃತಕ್ಕಾಗಿ ದುಡಿದ, ಮುಂದೆಯೂ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಿರುವ 40ರಿಂದ 50 ವರ್ಷದವರಿಗೆ ಪ್ರಶಸ್ತಿ ನೀಡುತ್ತಿದ್ದೇವೆ ಪ್ರತಿಷ್ಠಾನದ ಅಧ್ಯಕ್ಷ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಹೇಳಿದರು.
ಅಂತಾರಾಷ್ಟ್ರೀಯ ಸಂಸ್ಕೃತ ವಿದ್ವಾಂಸ ಎಚ್.ವಿ. ನಾಗರಾಜ ರಾವ್ ಅವರಿಗೆ 2020ರ ಸಾಲಿನ ಮತ್ತು ನಾಗಪುರದ ಕವಿಕುಲಗುರು ಕಾಳಿದಾಸ ವಿಶ್ವವಿದ್ಯಾಲಯದ ಕುಲಪತಿ ಡಾ| ಶ್ರೀನಿವಾಸ ವರಖೇಡಿ ಅವರಿಗೆ 2021ರ ಸಾಲಿನ ಬನ್ನಂಜೆ ಪುರಸ್ಕಾರ ಪ್ರದಾನ ಮಾಡಲಾಯಿತು. ಬನ್ನಂಜೆ ಗೋವಿಂದಾಚಾರ್ಯರ ವೆಬ್‌ಸೈಟ್‌ಗಳಿಗೆ ಚಾಲನೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.