ಲಿಂ. ಪಟ್ಟದ್ದೇವರ ಜೀವನ ಅನುಕರಣೀಯ
Team Udayavani, Dec 14, 2021, 11:34 AM IST
ಕಮಲನಗರ: ಸೋಹಂ ಎಂದೆನಿಸದೇ ದಾಸೋಹಂ ಎಂದಿನಸಯ್ನಾ ಎಂಬ ಶರಣರ ವಾಣಿಯಂತೆ ನಾವೆಲ್ಲರೂ ಹೆಜ್ಜೆ ಹಾಕಬೇಕು. ಕೇವಲ ತೋರಿಕೆಗಾಗಿ ದಾಸೋಹ ಸೇವೆ ಮಾಡದೇ ಅಂತರಂಗದ ಆತ್ಮ ಶಾಂತಿಗಾಗಿ ದಾಸೋಹ ಮಾಡಬೇಕು. ಈ ಮೂಲಕ ಹಸಿದವರ ಹಸಿವು ನೀಗಿಸುವ ಕೆಲಸ ನಿರಂತರ ಜೀವಿತಾವಧಿವರೆಗೂ ಮಾಡಬೇಕು ಎಂದು ಸೋನಾಳ ವಿರಕ್ತ ಮಠದ ಚನ್ನವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದ ಶಾಖಾ ಮಠದಲ್ಲಿ ಲಿಂ. ಡಾ| ಚನ್ನಬಸವ ಪಟ್ಟದ್ದೇವರ 132ನೇ ಜಯಂತಿ ನಿಮಿತ್ತ ಹೊರಡುವ ಬಸವಜ್ಯೋತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ, ಧರ್ಮ ರಹಿತ ಸಮಾಜ ನಿರ್ಮಾಣಕ್ಕಾಗಿ 12ನೇ ಶತಮಾನ ದಲ್ಲಿ ನಡೆದ ವೈಚಾರಿಕ ಕ್ರಾಂತಿಯನ್ನು 21ನೇ ಶತಮಾನ ದಲ್ಲಿ ಮುಂದುವರಿಸಿದ ಲಿಂ. ಪಟ್ಟದ್ದೇವರ ಜೀವನ ಅನುಕರಣೀಯ ಎಂದರು.
ಬುಡಾ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಉರ್ದು-ಮರಾಠಿ ಭಾಷೆಗಳ ಪ್ರಾಬಲ್ಯಕ್ಕೆ ಸಿಲುಕಿದ ಗಡಿಭಾಗದ ಕನ್ನಡಕ್ಕೆ ಮರುಜೀವ ತುಂಬಿದವರು ಲಿಂ. ಪಟ್ಟದ್ದೇವರು ಎಂದು ಸ್ಮರಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಪಟ್ಟದ್ದೇವರ ಆದರ್ಶಮಯ ಜೀವನ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದರು.
ಈ ವೇಳೆ ಮುಖಂಡರಾದ ಪ್ರಕಾಶ ಟೊಣ್ಣೆ, ಸಾಗರ ಖಂಡ್ರೆ, ಗ್ರಾಪಂ ಅಧ್ಯಕ್ಷ ಶಿವಕುಮಾರ ಝುಲ್ಪೆ, ಮಲ್ಲಮ್ಮ ಪಾಟೀಲ, ಪಿಎಸ್‌ಐ ನಂದಿನಿ, ಎಸ್.ಎನ್. ಶಿವಣಕರ, ಸಿದ್ಧಯ್ಯ ಕೌಡಿಮಠ, ಕಲ್ಯಾಣರಾವ್ ಬಿರಾದಾರ, ಪ್ರಕಾಶ ಸೊಲ್ಲಾಪುರೆ, ಸಂಜೀವಕುಮಾರ ಜುಮ್ಮಾ, ಸೂರ್ಯಕಾಂತ ಮಹಾಜನ, ಸಂಗಮೇಶ ಗುಮ್ಮೆ, ಸಂಗಮೇಶ ಮದಕಟ್ಟಿ ಇತರರಿದ್ದರು. ಪ್ರಭು ಕಳಸೆ ಸ್ವಾಗತಿಸಿದರು. ಪ್ರಭುರಾವ್ ಬಿರಾದಾರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.