ಎಚ್.ಡಿ. ದೇವೇಗೌಡರ ಆತ್ಮ ಚರಿತ್ರೆ ಬಿಡುಗಡೆ
Team Udayavani, Dec 14, 2021, 11:50 AM IST
ಬೆಂಗಳೂರು: ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಜೀವನ ಚರಿತ್ರೆ ಫುರೋಸ್ ಇನ್ ಎ ಫೀಲ್ಡ್: ದಿ. ಅನ್‌ಎಕ್ಸ್‌ಪ್ಲೋರ್ಡ್ ಲೈಫ್ ಆಫ್ ಎಚ್.ಡಿ. ದೇವೇಗೌಡ’ ಸೋಮವಾರ ನವದೆಹಲಿಯಲ್ಲಿ ಬಿಡುಗಡೆಗೊಂಡಿತು.
ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಬರೆದಿರುವ ಈ ಕೃತಿಯನ್ನು ಹಿರಿಯ ನ್ಯಾಯವಾದಿ ಫಾಲಿ ಎಸ್. ನಾರಿಮನ್ ಬಿಡುಗಡೆಗೊಳಿಸಿದರು. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಮೊದಲ ಕೃತಿಯನ್ನು ಎಚ್.ಡಿ. ದೇವೇಗೌಡರಿಗೆ ನೀಡಿದರು.
ದೇವೇಗೌಡ “ರಾಜಕೀಯ ಜೀವಿ’: ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್, “ದೇವೇಗೌಡ ಒಬ್ಬ ರಾಜಕೀಯ ಜೀವಿ. ಅವರ ಕವಲ 2 ವರ್ಷ ಸಿಎಂ, ಒಂದೂವರೆ ವರ್ಷ ಪ್ರಧಾನಮಂತ್ರಿ ಆಗಿದ್ದರು. ಆದರೆ, 60 ವರ್ಷಗಳ ಕಾಲ ರಾಜಕೀಯದಲ್ಲಿದ್ದಾರೆ. ದೇವೇ ಗೌಡರು ಉಸಿರಾಡಿದ್ದು, ಜೀವಿಸಿದ್ದು ಕರ್ನಾಟಕದ ರಾಜಕಾರಣವನ್ನು.
ಆದರೆ, ತಮ್ಮ ಅಸಮಾನ್ಯ ನಿಲುವು-ನಿರ್ಧಾರಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಭಾರತದಲ್ಲಿ ರಾಜಕೀಯ ಆತ್ಮ ಚರಿತ್ರೆಗಳನ್ನು ಬರೆಯುವುದು ಬಹಳ ಕಷ್ಟ. ಅದರಲ್ಲೂ ನಮ್ಮ ಮಧ್ಯೆಯೇ ಇರುವವರ ಆತ್ಮ ಚರಿತ್ರೆ ಬರೆಯುವುದಂತೂ ಅದಕ್ಕಿಂತಲೂ ಕಷ್ಟದ ಕೆಲಸ ಎಂದರು.
ನಾನು ಅತ್ಯಂತ ಗೌರವಿಸುವ ವ್ಯಕ್ತಿ: ಸಿಪಿಎಂ ಮುಖಂಡ ಸಿತಾರಾಂ ಯೆಚೂರಿ ಮಾತನಾಡಿ, ನಾನು ಹುಟ್ಟಿದ ವರ್ಷದಲ್ಲಿ ದೇವೇಗೌಡರು ಆದಾಗಲೇ ಸಕ್ರೀಯ ರಾಜಕಾರಣದಲ್ಲಿ ಇದ್ದರು. ಗೌಹಾಟಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು ದೇವೇಗೌಡರು, ಆದರೆ, ಇಂದು ಅದು ಯಾರಿಗೂ ನೆನಪಿಲ್ಲ. ಸೇತುವೆ ಉದ್ಘಾಟನೆಗೂ ದೇವೇಗೌಡರನ್ನು ಕರೆದಂತಿಲ್ಲ.
ಈಶಾನ್ಯ ರಾಜ್ಯಗಳಿಗೆ ಶೇ.10ರಷ್ಟು ಬಜೆಟ್ ಹೆಚ್ಚಿಸಿದ್ದು ದೇವೇಗೌಡರು ಎಂದರು. ಜಮ್ಮುಕಾಶ್ಮೀರದ ಉರಿ-2ನೇ ಜಲವಿದ್ಯುತ್ ಯೋಜನೆ ಉದ್ಘಾಟನೆ, ಆಗಿನ ಕಾಶ್ಮೀರದ ಸ್ಥಿತಿ ನೆನಪಿಸಿಕೊಂಡು ಗದ್ಗದಿತ ರಾದ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್, ಅಂದು ಕಾಶ್ಮೀರ ಸ್ಥಿತಿ ನೋಡಿದರೆ ಪ್ರಧಾನಿಗಳು ಬರುತ್ತಾರೆ ಎಂಬ ಖಾತರಿ ಇರಲಿಲ್ಲ.
ಆದರೆ, ದೇವೇಗೌಡರು ಬಂದು ಯೋಜನೆ ಉದ್ಘಾಟಿಸಿದರು. ನಮಗೆ ದಿಟ್ಟ ಪ್ರಧಾನಿ ಬೇಕು. ಪ್ರತಿ ಚುನಾವಣೆ ನಂತರ ಭಾರತ ವಿಭಜನೆಯಾಗುತ್ತಲೇ ಹೋಗುತ್ತಿದೆ. ಭಾರತೀಯರು ಬಲಿಷ್ಠರಾದರೆ, ಭಾರತ ಬಲಿಷ್ಠವಾಗುತ್ತದೆ ಎಂದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಕುಟುಂಬದ ಸದಸ್ಯರು, ಆಪ್ತರು, ರಾಜಕೀಯ ಒಡನಾಡಿಗಳು, ಹಿರಿಯ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.