‘ಮಾಫಿಯಾ’ ಅಡ್ಡದಲ್ಲಿ ದೇವರಾಜ್- ಪ್ರಜ್ವಲ್ ದೇವರಾಜ್
Team Udayavani, Dec 14, 2021, 1:18 PM IST
ನಟ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಮಾಫಿಯಾ’ ಚಿತ್ರ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಶ್ರೀನಿವಾಸ್ ನಿರ್ಮಿಸಿದ್ದ ಪೊಲೀಸ್ ಕಂಟ್ರೋಲ್ ರೂಂನ ಸೆಟ್‌ನಲ್ಲಿ ನಡೆಯುತ್ತಿದೆ. ನಟ ಪ್ರಜ್ವಲ್ ದೇವರಾಜ್, ಹಿರಿಯ ನಟ ದೇವರಾಜ್ ಹಾಗೂ ಸಾಧುಕೋಕಿಲ ಮೊದಲಾದ ಕಲಾವಿದರು ಪಾಲ್ಗೊಂಡಿದ್ದ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಯಿತು.
ಬಹಳ ಸಮಯದ ನಂತರ ನಟ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಒಂದೇ ಚಿತ್ರದಲ್ಲಿ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಇದೇ ವೇಳೆ ಮಾಧ್ಯಮಗಳ ಮುಂದೆ ಮುಂದೆ ಬಂದಿದ್ದ ಡೈನಾಮಿಕ್ ಹೀರೋ ದೇವರಾಜ್ ಮತ್ತು ಪುತ್ರ ಪ್ರಜ್ವಲ್ ದೇವರಾಜ್, “ಮಾಫಿಯಾ’ ಚಿತ್ರೀಕರಣದ ಅನುಭವಗಳ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು.
ಮೊದಲು ಮಾತಿಗಿಳಿದ ದೇವರಾಜ್, “ನಾನು ನನ್ನ ಮಗ ಪ್ರಜ್ವಲ್ ಇಬ್ಬರು “ಮಾಫಿಯಾ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇವೆ. ಇನ್ನೊಂದು ಖುಷಿಯ ವಿಷಯವೆಂದರೆ, ನಾವಿಬ್ಬರೂ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ. ನಿರ್ದೇಶಕ ಲೋಹಿತ್ ತುಂಬ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪೊಲೀಸ್ ಸ್ಟೋರಿಯಿದ್ದರೂ, ಅದನ್ನು ಬೇರೆ ಥರದಲ್ಲಿ ಸ್ಕ್ರೀನ್ ಮೇಲೆ ಹೇಳುತ್ತಿದ್ದಾರೆ. ಸಿನಿಮಾ ತುಂಬ ಚೆನ್ನಾಗಿ ಮೂಡಿಬರುತ್ತಿದೆ. ನಮ್ಮಿಬ್ಬರ ಕೆಮಿಸ್ಟ್ರಿ ಸ್ಕ್ರೀನ್ ಮೇಲೆ ಹೇಗೆ ಬರುತ್ತದೆ ಎಂಬ ಕುತೂಹಲ, ನಿರೀಕ್ಷೆ ನನಗೂ ಇದೆ’ ಎಂದರು.
ಇದನ್ನೂ ಓದಿ:ಮಗಳ ಬರ್ತ್ ಡೇ ನೆಪವೊಡ್ಡಿ ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಹಿಂದೆ ಸರಿದ ವಿರಾಟ್
ಬಳಿಕ ಮಾತನಾಡಿದ ನಟ ಪ್ರಜ್ವಲ್ ದೇವರಾಜ್, “ನನ್ನ ಅಪ್ಪನ ಜೊತೆ ಕೆಲಸ ಮಾಡುತ್ತಿರುವುದು ತುಂಬ ಖುಷಿ ಕೊಡುತ್ತಿದೆ. ಈ ಹಿಂದೆ “ಅರ್ಜುನ’ ಸಿನಿಮಾದಲ್ಲಿ ಇಬ್ಬರು ವಿರುದ್ಧ ಪಾತ್ರಗಳಲ್ಲಿ ನಟಿಸಿದ್ದೆವು. ಆದರೆ ಇದರಲ್ಲಿ ಇಬ್ಬರು ಪೊಲೀಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಅವರು ಸೀನಿಯರ್ ಆಫೀಸರ್. ನಾನು ಜ್ಯೂನಿಯರ್ ಆಫೀಸರ್. ಕಂಟ್ರೋಲ್ ರೂಂನ ಈ ಸೆಟ್ ತುಂಬ ಚೆನ್ನಾಗಿ ಮಾಡಿದ್ದಾರೆ. ನಮ್ಮಿಬ್ಬರಿಗೂ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ’ ಎಂದರು.
ಚಿತ್ರೀಕರಣದ ವೇಳೆ ಹಾಜರಿದ್ದ ನಟ ಸಾಧುಕೋಕಿಲ, “ಮೊದಲ ದಿನದಿಂದಲೂ ನಾನು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ. ಶೂಟಿಂಗ್ ನೋಡಿದ್ರೆ, ಯಾರು ಹೊಸಬರು ಅನಿಸುವುದಿಲ್ಲ. ಎಲ್ಲರು ಎಕ್ಸ್‌ಪರ್ಟ್ ಗಳಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಚಿತ್ರತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ನಿರ್ದೇಶಕ ಲೋಹಿತ್, ನಿರ್ಮಾಪಕ ಕುಮಾರ್ ಚಿತ್ರೀಕರಣ ಸಾಗುತ್ತಿರುವ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.