ಬೆಮೆಲ್‌ನಿಂದ ಬಲಶಾಲಿ ವಾಹನಗಳ ಪ್ರದರ್ಶನ
Team Udayavani, Dec 14, 2021, 1:32 PM IST
ಮೈಸೂರು: ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ (ಬೆಮೆಲ್) ಆವರಣದಲ್ಲಿ ಗಣಿ ಮತ್ತು ಸೇನೆಯಲ್ಲಿ ಬಳಕೆಯಾಗುವ ವಾಹನಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಾರ್ಖಾನೆ ಆವರಣದಲ್ಲಿ ಸೋಮವಾರ ಅಜಾದ್ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಆರಂಭಗೊಂಡ ಪ್ರದರ್ಶನದಲ್ಲಿ ಸೇನೆ ಮತ್ತು ಗಣಿಗಳಲ್ಲಿ ಬಳಸಲಾಗುವ ವಾಹನಗಳು ಗಮನ ಸೆಳೆದವು.
ಪ್ರದರ್ಶನದಲ್ಲಿ ಬಲಶಾಲಿ ಟ್ರಕ್‌ಗಳ ಕಾರ್ಯಾಚರಣೆ, ಗಣಿಯಲ್ಲಿ ಏಳುವ ದೂಳಿಗೆ ನೀರನ್ನು ಚಿಮುಕಿಸುವ ವಾಟರ್ ಸ್ಪ್ರಿಂಕ್ಲರ್ ವಾಹನ ಎಲ್ಲರ ಗಮನ ಸೆಳೆಯಿತು.ನಗರದ ವಿವಿಧ ಶಾಲಾ -ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಖಾನೆ ಆವರಣಕ್ಕೆ ಭೇಟಿ ನೀಡಿ, ದೇಶಕ್ಕೆ ಶಕ್ತಿ ತುಂಬುತ್ತಿರುವ ಬೆಮೆಲ್‌ನ ಸಾಮರ್ಥಯವನ್ನು ನಿಬ್ಬೇರಾಗಿ ಕಣ್ತುಂಬಿಕೊಂಡರು.
ಇದನ್ನೂ ಓದಿ;- ಪರಿಷತ್ ಫೈಟ್: ಶಿವಮೊಗ್ಗ, ಬಳ್ಳಾರಿಯಲ್ಲಿ ಅರಳಿದ ಕಮಲ, ರಾಯಚೂರಿನಲ್ಲಿ ಕಾಂಗ್ರೆಸ್ ಗೆಲುವು
ಬೆಮೆಲ್‌ನ ತಂತ್ರಜ್ಞರು ಟ್ರಕ್‌ಗಳ ಕಾರ್ಯಾಚರಣೆ ವಿಶೇಷಗಳನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆರಂಭಗೊಂಡಿರುವ ಈ ಪ್ರದರ್ಶನ ಡಿ.19 ವರೆಗೆ ನಡೆಯಲಿದೆ. ಈ ವೇಳೆ ಮಾತನಾಡಿದ ಬೆಮೆಲ್ ಮೈಸೂರು ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್. ರಾಧಾಕೃಷ್ಣ 1984ರಿಂದ ಮೈಸೂರು ಘಟಕವು ಸೇನೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಗಣಿಗಳಿಗೆ ಅತ್ಯಾಧುನಿಕ ಟ್ರಕ್‌ಗಳನ್ನು ತಯಾರಿಸುತ್ತಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Putin: ರಷ್ಯಾ ಅಧ್ಯಕ್ಷ ಪುಟಿನ್ ಮುಂದಿನ ವರ್ಷ ಭಾರತಕ್ಕೆ ಭೇಟಿ ಸಾಧ್ಯತೆ
Congress: ಸಂಪುಟದಲ್ಲಿ ನಮಗೂ ಅವಕಾಶ ಕೊಡಿ: ಇಬ್ಬರು ಕಾಂಗ್ರೆಸ್ ಶಾಸಕರ ಪಟ್ಟು
IPL 2025: ಗಾವಸ್ಕರ್ ಹೇಳಿಕೆಯನ್ನು ಅಲ್ಲಗಳೆದ ರಿಷಭ್ ಪಂತ್
Copper: ಕಾಂಗೋದಲ್ಲಿ ಕುಸಿದ ಪರ್ವತ: ಸಾವಿರಾರು ಟನ್ ತಾಮ್ರ ಪ್ರತ್ಯಕ್ಷ!
Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.