ಗಬ್ಬೆದ್ದು ನಾರುತ್ತಿರುವ ಬಸ್ ನಿಲ್ದಾಣದ ಸುಲಭ ಶೌಚಾಲಯದ ಆವರಣ
Team Udayavani, Dec 14, 2021, 2:38 PM IST
ದಾಂಡೇಲಿ: ಅದು ಇತ್ತೀಚಿನ ಕೆಲ ವರ್ಷಗಳ ಈಚೆಗೆ ನಿರ್ಮಿಸಿದ ಸುಲಭ ಶೌಚಾಲಯ. ಆದರೇನೂ ನಿರ್ಮಿಸಿ, ಅದರ ಗುತ್ತಿಗೆ ಹಣ ಪಡೆದು ಸ್ವಲ್ಪ ಸಮಯದಲ್ಲೆ ತ್ಯಾಜ್ಯ ಸರಬರಾಜು ಮಾಡುವ ಪೈಪ್ ಗಳು ಜಾಮ್ ಆಗಿ ತ್ಯಾಜ್ಯ ನೀರು ಹೊರಗಡೆ ಹರಿದು ಬರುವಂತಾಗಿದೆ.
ಹೊರಗಡೆಯಿಂದ ಸೂಪರ್ ಎನ್ನುವಂತಹ ಸುಲಭ ಶೌಚಾಲಯ. ಆದರೇನು? ಅಜ್ಜಿಗೆ ಮಧುಮಗಳಂತೆ ಶೃಂಗಾರ ಮಾಡಿದ ಸ್ಥಿತಿ ಇಲ್ಲಿನದು. ಶೌಚಾಲಯದ ತ್ಯಾಜ್ಯ ಸರಬರಾಜು ಆಗುವ ಪೈಪ್ ಜಾಮ್ ಆಗಿ ತ್ಯಾಜ್ಯ ಹೊರಗಡೆ ಬರುತ್ತಿರುವುದರಿಂದ ಶೌಚಾಲಯದ ಸುತ್ತಮುತ್ತಲು ಗಬ್ಬೆದ್ದು ನಾರುವ ಸ್ಥಿತಿಯಿದೆ. ಇದರ ಹತ್ತಿರದಲ್ಲೆ ವಿವಿಧ ಮಳಿಗೆಗಳು, ನಗರ ಸಭೆಯ ಮಳಿಗೆಗಳು ಇವೆ. ಇಲ್ಲಿಯ ಅಸ್ವಚ್ಚತೆ ಅವರಿಗೆಲ್ಲಾ ರೋಗ ಭಯವನ್ನು ಕಾಡುವಂತಾಗಿದೆ.
ಸಾರಿಗೆ ಘಟಕದವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ದುರಸ್ತಿ ಮಾಡುವುದರ ಮೂಲಕ ಸುಲಭ ಶೌಚಾಲಯವನ್ನು ಸ್ವಚ್ಚ ಶೌಚಾಲಯವನ್ನಾಗಿ ಪರಿವರ್ತಸಬೇಕಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.