ಕುಣಿಗಲ್ ನಲ್ಲಿ ನಡೆಯುವ ಗಣಿಗಾರಿಕೆ ದಂಧೆ ಬಳ್ಳಾರಿಯನ್ನೂ ಮೀರಿಸುವಂತಿದೆ :ದ್ವಾರಕಾನಾಥ್ ಕಳವಳ
Team Udayavani, Dec 14, 2021, 7:49 PM IST
ಕುಣಿಗಲ್ : ತಾಲೂಕಿನ ಕಸಬಾ ಹೋಬಳಿ ಹಂಗರಹಳ್ಳಿ, ತರಿಕೆರೆ, ಹಂದಲಕುಪ್ಪೆ ಗ್ರಾಮಗಳ ಕಲ್ಲು ಗಣಿಗಾರಿಕೆ ದಂಧೆ, ಬಳ್ಳಾರಿ ಮೈನಿಂಗ್ ಮಾಫಿಯಾವನ್ನೂ ಮೀರಿಸುತ್ತಿರುವಂತಿದೆ ಎಂದು ಕಳವಳ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ, ಹೈಕೋರ್ಟ್ ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕಾನಾಥ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡುವುದ್ದಾಗಿ ಅವರು ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಹಂಗರಹಳ್ಳಿ ಸರ್ವೆ 46, ಹಂದಲಕುಪ್ಪೆ ಸರ್ವೆ ನಂ 1, ತರೀಕರೆ ಸರ್ವೆ ನಂ 80 ಹಾಗೂ 81 ರಲ್ಲಿ ನಡೆಯುತ್ತಿರುವ ಎಂಟು ಗಣಿಗಾರಿಕೆ ಪ್ರದೇಶಕ್ಕೆ ಮಂಗಳವಾರ ಬೇಟಿ ನೀಡಿ ಪರಿಶೀಲಿಸಿದ ಡಾ.ಸಿ.ಎಸ್.ದ್ವಾರಕಾನಾಥ್ ಇಲ್ಲಿನ ಪರಿಸ್ಥಿಯನ್ನು ನೋಡಿ ಅಧಿಕಾರಿಗಳು ತಾಲೂಕಿನಲ್ಲಿ ಇದ್ದಾರೋ, ಇಲ್ವೋ ಎಂದು ಪ್ರಶ್ನಿಸಿದರು, ಇಷ್ಟೇಲ್ಲಾ ಅಕ್ರಮಗಳು ನಡೆಯುತ್ತಿದ್ದರು ಏಕೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಕಲ್ಲುಗಣಿಕಾರಿಕೆಗೆ ಭೂಮಿ ಮಟ್ಟದದಿಂದ ಎತ್ತರದಲ್ಲಿ ಇದ್ದ ಬಂಡೆಯನ್ನು ಈಗ 150, 160 ಅಡಿ ಪಾತಾಳ ಮಟ್ಟದ ಅಳಕ್ಕೆ ಕೊರೆದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಡಾ.ಸಿ.ಎಸ್.ದ್ವಾರಕನಾಥ್ ಅವರೇ ಕ್ಷಣಕಾಲ ಅವಕ್ಕಾದರು. ಇದನ್ನು ನೋಡಿಕೊಂಡು ಅಧಿಕಾರಿಗಳು ಸುಮ್ಮನೇ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಜೀವನಕ್ಕೆ ಮಾರಕ : ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಡಾ.ಸಿ.ಎಸ್.ದ್ವಾರಕಾನಾಥ್ ಕಾನೂನುಗಳನ್ನು ಗಾಳಿಗೆ ತೂರಿ ನಿಯಮ ಬಾಹಿರವಾಗಿ ಕಲ್ಲುಗಣಿಗಾರಿಕೆಯಿಂದ ಅಕ್ಕಪಕ್ಕದಲ್ಲಿರುವ ಕಾಡುಗೊಲ್ಲ ಬುಡಕಟ್ಟು ಜನಾಂಗ, ಲಂಬಾಣಿ ತಾಂಡ ಹಾಗೂ ಪರಿಶಿಷ್ಟ ಜನಾಂಗದ ಕಾಲೋನಿಗಳಲ್ಲಿನ ಮನೆಗಳು ಬಿರುಕು ಬಿಟ್ಟು ತೊಂದರೆಯಾಗಿದೆ ಎಂಬ ದೂರಿನ ಹಿನ್ನಲ್ಲೆಯಲ್ಲಿ ಇಂದು ಬೇಟಿ ನೀಡಿ ಪರಿಶೀಲಿಸಿದ್ದೇನೆ, ಕಲ್ಲುಗಣಿಗಾರಿಕೆಯಿಂದ ಬರುವ ದೂಳು ಮನುಷ್ಯನಿಗೆ ಮಾತ್ರವಲ್ಲದೇ ಪ್ರಾಣಿ ಸಂಕುಲಕ್ಕೆ ಮಾರಕವಾದ ರೋಗ ಹರಡುತ್ತವೆ.
ಮೊದಲೇ ಇಲ್ಲಿ ಹಿಂದು ವರ್ಗಗಳ ಬುಡಕಟ್ಟು ಜನಾಂಗಗಳೇ ಹೆಚ್ಚು ವಾಸುತ್ತಿರುವುದರಿಂದ ಆರ್ಥಿಕವಾಗಿ ಹಿಂದಿಳಿದಿರುವ ಇವರಿಗೆ ಆರೋಗ್ಯ ತೋರಿಸಿಕೊಳ್ಳುವ ಶಕ್ತಿ ಇಲ್ಲ ಜೊತೆಗೆ ಇವರ ಜೀವನಾಡಿಯಾಗಿರುವ ಕುರಿ ಸಾಕಾಣಿಕೆಯ ಮೇಲೆ ಪರಿಣಾ ಬಿದ್ದು ಕಳೆದ ಒಂದು ತಿಂಗಳಿಂದ ಇಚೇಗೆ 20 ಕುರಿಗಳು ಸಾವನಪ್ಪಿವೆ ಇದರಿಂದ ಇಲ್ಲಿನ ಜನರ ಜೀವನ ಅಕ್ಷರ ಸತ್ಯ ನರಕವಾಗಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : ರಾಜ್ಯದಲ್ಲಿಂದು 327 ಕೋವಿಡ್ ಪಾಸಿಟಿವ್ ಪತ್ತೆ: 7 ಸಾವು
ಅಡಳಿತ ನಡೆಸುವ ವಿಧಾನಸೌದದಿಂದ ಕೇವಲ 80 ಕಿ.ಮೀ ಸಮೀಪದಲ್ಲೇ ಇಷ್ಟೋಂದು ಮಾನವ ಹಕ್ಕು ಉಲ್ಲಂಘನೆಯಾಗಿ ಜನ ಜೀವನ ಅಸ್ಥವ್ಯಸ್ಥವಾಗಿದ್ದರು ಆಡಳಿತ ನಡೆಸುವವರು ಇಲ್ಲವೇ ಅಧಿಕಾರಿ ಶಾಹಿಗಳು ಗಮನ ಹರಿಸದೇ ಇರುವುದು ಇಲ್ಲಿನ ಜನರ ದುರ್ದೇವವಾಗಿದೆ ಎಂದು ತಿಳಿಸಿದರು.
ಇಲ್ಲಿನ ಗಣಿಕಾರಿಗೆಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಎಲ್ಲಾ ನ್ಯೂನ್ಯತೆಗಳನ್ನು ಪಟ್ಟಿ ಮಾಡಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದೇನೆ. ನಾನೂ ಅಲ್ಲೇ ಕುಳಿತು ಕೇವಲ ಪೇಪರ್ ನಲ್ಲಿ ಮಾತ್ರ ನೋಡಿದರೇ ಇಲ್ಲಿ ಭೀಕರತೆ ನನಗೆ ಅರ್ಥವಾಗುತ್ತಿರಲಿಲ್ಲ ಈಗ ನನಗೆ ಸಂಪೂರ್ಣ ಅರ್ಥವಾಗಿದೆ. ಮಾನವ ಹಕ್ಕು ಆಯೋಗ ಸೇರಿದಂತೆ ಸರಕಾರದ ಗಮನ ಸೆಳೆಯುವ ಕೆಲಸ ಮಾಡುವ ಜೊತೆಗೆ ಅಲೆಮಾರಿ ಹಾಗೂ ಅದಿವಾಸಿ ಜನಾಂಗಕ್ಕೆ ಆಗುತ್ತಿರುವ ಅನ್ಯಾಯಾವನ್ನು ಕಾನೂನು ಪ್ರಕಾರ ನ್ಯಾಯಾಲಯದಲ್ಲಿಯೂ ಹೋರಾಟ ನಡೆಸುತ್ತೇನೆ. ಸಾಧ್ಯವಾದರೇ ವಿರೋಧ ಪಕ್ಷದ ನಾಯಕರ ಗಮನಕ್ಕೆ ಪರಿಸ್ಥಿತಿ ವಿವರಿಸಿ ಸದನ ಸಮಿತಿಯಿಂದ ತನಿಖೆ ನಡೆಸುವ ನಿಟ್ಟಿನಲ್ಲಿಯೂ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಕುರಿಗಾಹಿಯ ಕಷ್ಟ ಕೇಳಿದರು:
ಕಲ್ಲುಗಣಿಕಾರಿಕೆ ಸ್ಥಳ ಪರಿಶೀಲನೆ ನಡೆಸಿ ಬರುತ್ತಿದ್ದ ಡಾ.ಸಿ.ಆರ್.ದ್ವಾರಕನಾಥ್ ಅವರಿಗೆ ಕುರಿಗಾಹಿ ಜಯಮ್ಮ ಅಡ್ಡಲಾಗಿ ಸಿಕ್ಕರು. ಎಷ್ಟು ಕುರಿ ಜಯಮ್ಮ ಎಂದು ಕೇಳಿದಾಗ ಸಾರ್ 80 ಕುರಿ ಇದ್ದವು ಈಗ ಕಲ್ಲುಗಣಿಕಾರಿಕೆಯಿಂದ ದೂಳು ಹಾಗೂ ಕಲುಷಿತು ನೀರು ಕುಡಿದ 20 ಕುರಿ ಒಂದು ತಿಂಗಳಲ್ಲಿ ಸತ್ತು ಹೋಗಿವೆ ಎಂದು ಕಷ್ಟ ಹೇಳಿಕೊಂಡ ಮಹಿಳೆಗೆ ಆಯೋಗದ ಮಾಜಿ ಅಧ್ಯಕ್ಷರು ಸಮಾಧಾನ ಹೇಳಿ ಒಳ್ಳೆ ಕಾಲ ಬರುತ್ತದೆ ಎಂದು ತಿಳಿಸಿದರು.
ಪುರಸಭಾ ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್, ಕಾಡುಗೊಲ್ಲ ಆಶ್ಮತೆ ಹೋರಾಟ ಸಮಿತಿ ರಾಜ್ಯ ಸಂಚಾಲಕ ಜಿ.ಕೆ.ನಾಗಣ್ಣ, ಗ್ರಾಮದ ಮುಖಂಡ ಧನಂಜಯ್ಯ, ರಾಜಣ್ಣ, ಮಾರೇಗೌಡ, ಜಯಮ್ಮ, ಶಂಕರ್ ನಾಯ್ಕ್, ಶಿವಕುಮಾರ್ ನಾಯ್ಕ್, ನವೀನ, ದೊಡ್ಡಯ್ಯ ಮುಂತಾದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.