ನಾನು ಬ್ರಾಹ್ಮಣ ಕುಟುಂಬದವಳೇ, ಪ್ರಮಾಣಪತ್ರದ ಅಗತ್ಯವಿಲ್ಲ: ಮಮತಾ ಬ್ಯಾನರ್ಜಿ
Team Udayavani, Dec 15, 2021, 2:51 PM IST
ಪಣಜಿ: ಉತ್ತರಪ್ರದೇಶದ ಲಖಿಂಪುರದ ಹಿಂಸಾಚಾರ ಪ್ರಕರಣ ಅತ್ಯಂತ ಖೇದಕರ ಸಂಗತಿಯಾಗಿದೆ. ವಾಹನಕ್ಕೆ ರೈತರು ಸಿಲುಕಿರುವ ಇಡೀ ಘಟನೆ ನೋವಿನ ಸಂಗತಿ ಎಂದು ಎಸ್‍ಐಟಿ ಒಪ್ಪಿಕೊಂಡಿದೆ. ಇದು ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪಣಜಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಲಖಿಂಪುರದ ಹಿಂಸಾಚಾರ ಪ್ರಕರಣದ ಹೊಣೆ ಹೊತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು, ಇಷ್ಟೇ ಅಲ್ಲದೆಯೇ ಕೇಂದ್ರ ಗೃಹಮಂತ್ರಿಗಳು ಕೂಡ ರಾಜೀನಾಮೆ ನೀಡಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳು ಶಾಂತವಾಗಿರುವುದು ಇನ್ನು ಹೆಚ್ಚಿನ ಅನುಮಾನ ಮೂಡಿಸಿದೆ. ಗೋವಾದ ಮೇಲೆ ದೆಹಲಿಯ ದಾದಾಗಿರಿ ನಡೆಯುವುದಿಲ್ಲ ಎಂದು ಹೇಳಿದರು.
ನಾನು ಒಬ್ಬ ಬ್ರಾಹ್ಮಣ ಕುಟುಂಬದವಳೇ ಆಗಿದ್ದೇನೆ. ನನಗೆ ಬಿಜೆಪಿಯ ಪ್ರಮಾಣಪತ್ರದ ಅಗತ್ಯವಿಲ್ಲ. ಚುನಾವಣೆ ಬಂದ ಕೂಡಲೆ ಬಿಜೆಪಿಯವರು ದೇವಸ್ಥಾನಕ್ಕೆ ತೆರಳುತ್ತಾರೆ. ಗೋವಾದಲ್ಲಿ ಎಂಜಿಪಿ ಬೆಂಬಲದೊಂದಿಗೆ ಟಿಎಂಸಿ ಸರ್ಕಾರ ರಚನೆ ಮಾಡಲಿದೆ. ಯಾರು ಅವರೊಂದಿಗೆ ಹೋಗಬೇಕೆಂದಿದ್ದೀರೊ ಅವರು ಹೋಗಬಹುದು ಎಂದು ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Cricket; ವೇಗಿ ಸಿದ್ದಾರ್ಥ್ ಕೌಲ್ ನಿವೃತ್ತಿ
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.