ಹನುಮ ಜಯಂತಿ ಮೆರವಣಿಗೆಗೆ ಅಡ್ಡಿ ಇಲ್ಲ; ಕೋವಿಡ್ ಮಾರ್ಗಸೂಚಿ ಪಾಲಿಸಿ: ಎಸ್.ಪಿ. ಚೇತನ್


Team Udayavani, Dec 15, 2021, 3:14 PM IST

ಹನುಮ ಜಯಂತಿ ಮೆರವಣಿಗೆಗೆ ಅಡ್ಡಿ ಇಲ್ಲ; ಕೋವಿಡ್ ಮಾರ್ಗಸೂಚಿ ಪಾಲಿಸಿ: ಎಸ್.ಪಿ. ಚೇತನ್

ಹುಣಸೂರು: ಹನುಮ ಜಯಂತಿ ಮೆರವಣಿಗೆಗೆ ಪೊಲೀಸ್ ಇಲಾಖೆ ಸಹಕಾರ ನೀಡಲಿದೆ ಆದರೆ ರಾಜ್ಯದ ಹಲವೆಡೆ ಕೊವಿಡ್-19 ಮೂರನೇ ಅಲೆ ಆರಂಭವಾಗಿರುವ  ಹಿನ್ನೆಲೆಯಲ್ಲಿ  ಜಿಲ್ಲಾಡಳಿತದೊಂದಿಗೆ ಚರ್ಚಿಸಿದ ನಂತರವೇ ಮೆರವಣಿಗೆ ಆಯೋಜಿಸುವುದು ಸೂಕ್ತವೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್ ಸೂಚಿಸಿದರು.

ನಗರ ಪೊಲೀಸ್ ಠಾಣೆಯಲ್ಲಿ ಡಿ.18ರ ಹನುಮಜಯಂತಿ ಮೆರವಣಿಗಗೆ ಸಂಬಂಧ ಆಯೋಜಿಸಿದ್ದ ಶಾಂತಿ ಸಭೆಯ ಭಾಗವಹಿಸಿ ಮುಖಂಡರು ಮತ್ತು ಹನುಮಮ್ತೋತ್ಸವ ಸಮಿತಿಯವರಿಂದ ಮಾಹಿತಿಗಳನ್ನು ಪಡೆದನಂತರ  ಮಾತನಾಡಿದ ಅವರು, ಕೋವಿಡ್ ಮಹಾಮಾರಿಯ ಮೊದಲ ಮತ್ತುಎರಡನೆಅಲೆಯಿಲ್ಲಿ ಸಾಕಷ್ಟು ಜೀವ ಹಾನಿಯಾಗಿರುವ ಭಯದ ನಡುವೆ ಇದೀಗ ಮೂರನೆ (ಒಮಿಕ್ರಾನ್) ಅಲೆಯನ್ನು ಎದುರಿಸಬೆಕಾದ ಪರಿಸ್ಥಿತಿ ಇದ್ದು, ಇದಕ್ಕಾಗಿ ಎಲ್ಲರೂ ಎಚ್ಚರಿಕೆವಹಿಸಬೇಕಾಗಿದ್ದು, ಅಚರಣೆಗಳನ್ನು ಜಾತಿ ದರ್ಮಗಳನ್ನು ಬಿಟ್ಟು ಕೊವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಅಚರಿಸಬೆಕಿದೆ.  ಈ ಬಗ್ಗೆ ಸದ್ಯದಲ್ಲೆ ತಹಶೀಲ್ದಾರ್ ಮತ್ತು ಉಪವಿಭಾಗಧಿಕಾರಿಗಳನ್ನು ಒಟ್ಟಿಗೆ ಸಭೆಕರೆದು ಶಾಂತಿಯುತವಾಗಿ ಅಚರಣೆ ಮಾಡಲು ಕ್ರಮ ಕೈಗೋಳ್ಳೊಣ ಎಂದರು.

ತಾಲೂಕಿನ ಜನರ ಆರೋಗ್ಯ ಮತ್ತು ಶಾಂತಿ ವಾತವರಣ ಕಂಡುಕೋಳ್ಳಬೇಕು ಇದಕ್ಕಾಗಿ ಸರ್ವರೂ ಸಹಕರಿಸಿ ಕಾನೂನು ಪಾಲನೆ ಮಾಡೋಣ, ಇಂದಿನ  ಸಭೆಯ ಅಭಿಪ್ರಾಯ, ಸಲಹೆಗಳನ್ನು ಜಿಲ್ಲಾಡಳಿತ ಹಾಗೂ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತರಲಾಗುವುದು. ತಾಲೂಕಿನ ಜನರ ಆರೋಗ್ಯದ ಹೀಗಾಗಿ ಎಲ್ಲರೂ ಸಹಕಾರ ನೀಡಬೇಕೆಂದರು.

ಈ ವೇಳೆ ಹನುಮ ಜಯಂತಿ ಸಮಿತಿ ಅಧ್ಯಕ್ಷ ವಿ.ಎನ್.ದಾಸ್ ಮಾತನಾಡಿ ಹನುಮ ಜಯಂತಿಗೆ ಎಲ್ಲಾ ಕಡೆ ಅವಕಾಶ ನೀಡುತ್ತೀರಾ, ಹುಣಸೂರಿನಲ್ಲಿ ಮಾತ್ರ ನಿರ್ಬಂಧವೆನನ್ನುತ್ತೀರಾ, ಡಿ.16 ರಿಂದ 18 ರವರೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮ, 18 ರ ಮೆರವಣಿಗೆಗೆ ಕೋವಿಡ್ ನಿಯಮ ಅನುಸರಿಸುವ ಮೂಲಕ ಸರಳವಾಗಿಯೇ ಜಯಂತಿ ಆಚರಣೆ ಮಾಡುತ್ತೇವೆ, ಆದರೆ ತೆರವಾಗಿರುವ ರಸ್ತೆಗಳಲ್ಲಿ ಮೆರವಣಿಗೆ ನಡೆಸಲು ಅವಕಾಶ ನೀಡಬೇಕೆಂದರು.

ವಕೀಲ, ಸಮಿತಿ ಗೌರವಾಧ್ಯಕ್ಷ ಯೋಗಾನಂದಕುಮಾರ್ ಹಾಗೂ ದಸಂಸ ಮುಖಂಡ ನಿಂಗರಾಜಮಲ್ಲಾಡಿ ಮಾತನಾಡಿ, ಈ ಹಿಂದೆ ನಡೆದ ಕಹಿ ಘಟನೆಯಿಂದ ಎಲ್ಲರೂ ನೊಂದಿದ್ದಾರೆ, ಸಾಕಷ್ಟು ತಿಳುವಳಿಕೆ ನೀಡಲಾಗಿದೆ. ತಾಲೂಕಿಗಂಟಿರುವ ಕಳಂಕ ತೊಡೆದುಕೊಳ್ಳಲು ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮೆರವಣಿಗೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಗಡಿ ಭಾಗ ಎಚ್ಚರ ಅಗತ್ಯ: ಅಡಿಷನಲ್ ಎಸ್.ಪಿ. ಆರ್.ಶಿವಕುಮಾರ್ ಮಾತನಾಡಿ ಕೊಡಗು ಮತ್ತು ಕೇರಳ ಅಂತರರಾಜ್ಯ ಗಡಿಭಾಗಗಳಿಗೆ ನಾವು ಅಂಟಿಕೊಂಡಿದ್ದೇವೆ. ಕೊರೊನಾ ಹಿನ್ನೆಲೆಯಲ್ಲಿ ಅದಕ್ಕೂ ಹೆಚ್ಚು ಗಮನ ಹರಿಸಿ ಜಾಗೃತರಾಗಬೆಕಾಗಿದೆ. ಅದರ ನಡುವೆಯು ನಮ್ಮ ಅಚರಣೆಗಳನ್ನು ಮರೆಯುವಂತ್ತಿಲ್ಲ ಅದ್ದೂರಿಯಲ್ಲದಿದ್ದರೂ ಸರಳವಾಗಿಯಾದರೂ ಅಚರಿಸಲು ಮುಂದಾಗೋಣ ಎಲ್ಲರೂ ಸಹಕರಿಸುವಂತೆ ಕೋರಿದರು.

ರಾಜಕಾರಣಿಗಳ ಮೆರವಣಿಗೆಯಾಗಬಾರದು: ಸತ್ಯಪ್ಪ ಮಾತನಾಡಿ ಮೆರವಣಿಗೆಯಲ್ಲಿ ಸಂಸದರು ಸೇರಿದಂತೆ ರಾಜಕೀಯ ನಾಯಕರ ವಾಹನ ಏರಿ ಮೆರವಣಿಗೆ ನಡೆಸದಂತೆ ಮಾಡಿದ ಮನವಿಗೆ ಸಭೆಯಲ್ಲಿದ್ದವರು ಜಯಂತಿ ಬಗ್ಗೆ ಮಾತನಾಡಿ ವಿಷಯ ವರ್ಗಾಯಿಸದಂತೆ ಸೂಚಿಸಿದರು.

ಹುಣಸೂರು ಪಬ್ಲಿಕ್ ಪೀಸ್ ಕಮಿಟಿಯ ಉಪಾಧ್ಯಕ್ಷ ಎಚ್.ಎಂ.ಫಲಜುಲ್ಲಾ, ನಗರಸಭಾ ಸದಸ್ಯ ಮಹಮದ್ ಯೂನಸ್, ಮಾಜಿ ಸದಸ್ಯ ಮಜಾಜ್ ಅಹಮದ್ ಮಾತನಾಡಿ ಬಜಾರ್ ರಸ್ತೆ ಮತ್ತು ಜೆ.ಎಲ್.ಬಿರಸ್ತೆಯಲ್ಲಿ ದಶಕಗಳಿಂದ ಎಲ್ಲಾ ಮೆರವಣಿಗೆ ತೆರಳುತ್ತಿತ್ತು. 6 ವರ್ಷಗಳಿಂದ ನಿಂತು ಹೋಗಿದ್ದು, ತಮಗೂ ನೋವಿದೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸುವಂತೆ ಈಗಾಗಲೇ ಮಸೀದಿ ಮುಖ್ಯಸ್ಥರು, ವಿವಿಧ ಸಂಘಟನೆಗಳು ವರಿಗೆ ಸೂಚಿಸಲಾಗಿದೆ ಹೀಗಾಗಿ ಎಲ್ಲಾ ಮೆರವಣಿಗೆಗೂ ಅವಕಾಶ ಮಾಡಿಕೊಡಬೇಕೆಂದರು. ಎಸ್.ಡಿ.ಪಿ.ಐ ತಾಲೂಕು ಅಧ್ಯಕ್ಷ ತಬ್ರೇಜ್ ಮಾತನಾಡಿ ನಾವು ಭರವಸೆ ನೀಡುತ್ತೇವೆ ಆದರೆ ಯುವಕರನ್ನು ನಿಯಂತ್ರಿಸುವರ‍್ಯಾರು, ಕೆಲ ಘಟನೆಯಿಂದ ನಿರ್ಬಂಧ ವಿಧಿಸಿರುವುದು ಸರಿಯಾದ ಕ್ರಮವಾಗಿದ್ದು, ಇದೇ ರೀತಿ ಮುಂದುವರೆಸಬೇಕೆಂದು ಮನವಿ ಮಾಡಿದರು.

ಎಚ್ಚರ ವಹಿಸಿ: ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸುದ್ದಿ ಹರಡಿದಲ್ಲಿ ಕಾನೂನುತನ್ನದೇ ಆದ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಮುಖಂಡರು ಯುವಕರಿಗೆ ತಿಳಿ ಹೇಳಬೇಕು, ಪೋಷಕರು ಎಚ್ಚರವಹಿಸಬೇಕೆಂದು ಎಸ್.ಪಿ.ಚೇತನ್ ಎಚ್ಚರಿಸಿದರು.

ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಎಚ್.ವೈ.ಮಹದೇವ್. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅನಿಲ್, ತಾಲೂಕು ಅಧ್ಯಕ್ಷ ಗಿರೀಶ್, ನಗರಸಭೆ ಸದಸ್ಯ ಕೃಷ್ಣರಾಜಗುಪ್ತ, ಹುಣಸೂರು ಪಬ್ಲಿಕ್ ಪೀಸ್ ಕಮಿಟಿಯ ಅಧ್ಯಕ್ಷ ಸೈಯದ್ ಅಹಮದ್ ಷಾ, ಕಾರ್ಯದರ್ಶಿ ಮಿಜಾಮಿಲ್ ಖಾನ್, ಮಸೀದಿ ಅಧ್ಯಕ್ಷ ಅಮೀರ್ ಪಾಷಾ, ಮುಖಂಡರಾದ ಗಜೇಂದ್ರ, ಮಾಜಿ ಸದಸ್ಯ ಅಯೂಬ್ ಖಾನ್, ಅಡಿಷನಲ್ ಎಸ್.ಪಿ. ಆರ್.ಶಿವಕುಮಾರ್, ಡಿವೈಎಸ್‌ಪಿ ರವಿಪ್ರಸಾದ್, ಇನ್ಸ್ಪೆಕ್ಟರ್‌ಗಳಾದ ಸಿ.ವಿ.ರವಿ.ಚಿಕ್ಕಸ್ವಾಮಿ, ಸಬ್ ಇನ್ಸ್ಪೆಕ್ಟರ್  ಪಂಚಾಕ್ಷರಿಸ್ವಾಮಿ ಪ್ರಭಾರ ಪಿ.ಎಸ್.ಐ ಶಾಂತಕುಮಾರಿ,  ನಗರಸಭಾ ಮ್ಯಾನೇಜರ್‌ಡಿಸೋಜ, ಸೇರಿದಂತೆ ಅನೇಕ ಮುಖಂಡರಿದ್ದರು.

ಟಾಪ್ ನ್ಯೂಸ್

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

DK-Suresh

By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Waqf

Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.