ಶಿರಸಿ: ಜಲಾಯನ ಪ್ರದೇಶಕ್ಕೆ ಸೇರುವ ಕೋಳಿ ಫಾರಂನ ಗಲೀಜು ನೀರು: ಸಾರ್ವಜನಿಕರ ಆಕ್ರೋಶ
Team Udayavani, Dec 15, 2021, 3:30 PM IST
ಶಿರಸಿ: ಇಲ್ಲಿನ ಹುಲೇಕಲ್ ರಸ್ತೆಯ ಹುತಗಾರ ಬಳಿಯ ಕೋಳಿ ಫಾರಂನ ಗಲೀಜು ನೀರು ಲೊಕೋಪಯೋಗಿ ಇಲಾಖೆ ನೂತನವಾಗಿ ನಿರ್ಮಾಣ ಮಾಡಿದ ಗಟಾರಕ್ಕೆ ಬಿಡುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಗಲೀಜು ನೇರವಾಗಿ ಕೆಂಗ್ರೆ ಜಲಾಯನ ಪ್ರದೇಶಕ್ಕೆ ಸೇರಲಿದೆ. ಕೆಂಗ್ರೆಯಿಂದ ಶಿರಸಿಗೆ ಕುಡಿಯುವ ನೀರೂ ಕೂಡ ಪೂರೈಕೆ ಆಗಲಿದೆ. ಸಮೀಪ ಸರಕಾರಿ ಶಾಲೆಗಳಿದ್ದು, ಅದರ ಕುಡಿಯುವ ನೀರಿನ ಬಾವಿಗೂ ಸೇರುವ ಆತಂಕ ನಿರ್ಮಾಣ ಆಗಿದೆ.
ಕಳೆದ ಹಲವು ವರ್ಷಗಳಿಂದ ಕೋಳಿ ಫಾರಂನಿಂದ ವಾಸನೆ ಬರುತ್ತಿದ್ದು, ಸುತ್ತಲಿನ ನಿವಾಸಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.
ಈಗಾಗಲೇ ನಿವಾಸಿಗಳು ತಹಸೀಲ್ದಾರರಿಗೆ, ಗ್ರಾಮ ಪಂಚಾಯತಕೆ ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ ಎಂದು ಅಸಮಧಾನ ವ್ಯಕ್ತವಾಗಿದೆ.
ಸಂಬಂಧಪಟ್ಟ ಇಲಾಖೆ, ಹುತಗಾರ ಪಂಚಾಯತ ಕ್ರಮ ಕೈಗೊಳ್ಳದೇ ಹೋದರೆ ಪ್ರತಿಭಟನೆ ನಡೆಸುವದಾಗಿ ಅಸಮಧಾನಿತ ನಾಗರೀಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.