ಬೆಳಗಾವಿಯ ಸೋಲಿಗೆ ತನಿಖೆ ಮಾಡುತ್ತೇವೆ..: ಬಿ.ಎಸ್. ಯಡಿಯೂರಪ್ಪ
Team Udayavani, Dec 16, 2021, 6:38 AM IST
ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 11 ಸ್ಥಾನಗಳು ಲಭ್ಯವಾಗಿವೆ. ಈ ಬಗ್ಗೆ ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೈಸೂರು ಮತ್ತು ಬೆಳಗಾವಿಯಲ್ಲಿ ಪಕ್ಷ ಸೋಲುಂಡಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಫಲಿತಾಂಶ ಸಮಾಧಾನ ತಂದಿದೆಯಾ?
ಕನಿಷ್ಠ 15 ಕ್ಷೇತ್ರ ಗೆಲ್ಲುವ ವಿಶ್ವಾಸ ಇತ್ತು. ಅದರೆ ಮೈಸೂರಿನಲ್ಲಿ ಸೋಲಾಯಿತು. ಬೆಳಗಾವಿಯಲ್ಲಿಯೂ ನಮ್ಮ ಆಭ್ಯರ್ಥಿ ಸೋಲು ಕಂಡಿದ್ದಾರೆ.
ನಿರೀಕ್ಷಿತ ಕ್ಷೇತ್ರಗಳಲ್ಲಿ ಸೋಲಿಗೆ ಯಾರು ಕಾರಣ ?
ಮೈಸೂರಿನಲ್ಲಿ ಎಲ್ಲ ಪ್ರಯತ್ನಗಳ ಹೊರತಾ ಗಿಯೂ ಹಿನ್ನಡೆಯಾಯಿತು. ಬಹಳ ನೋವಿನ ವಿಷಯವೆಂದರೆ ಬೆಳಗಾವಿಯಲ್ಲಿ ನಾವು ಎಂಎಲ್‌ಎಗಳು, ಮಂತ್ರಿಗಳು, ಎಂಪಿಗಳು ಇದ್ದರೂ ಹಿನ್ನಡೆ ಆಗಿ ರುವುದು. ಪಕ್ಷದ ಅಭ್ಯರ್ಥಿ ಕವಟಗಿಮಠ ಅವರಿಗೆ ಸೋಲು ಅಯಿತೆಂದರೆ ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಯಾರು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ ಅವರ ಮೇಲೆ ಪಕ್ಷದ ನಾಯಕರು ಕ್ರಮ ಕೈಗೊಳ್ಳುವ ಕುರಿತು ತೀರ್ಮಾನ ಮಾಡುತ್ತೇವೆ.
ಜಾರಕಿಹೊಳಿ ಸಹೋದರರು ನಿಮ್ಮ ಪಕ್ಷದ ಶಾಸಕರಾಗಿದ್ದಾರೆ. ಅವರು ತಮ್ಮ ಸಹೋದರನ ಪರ ಕೆಲಸ ಮಾಡಿದ್ದಾರೆ ಅನಿಸುತ್ತಿದೆಯಾ?
ಸಹಜವಾಗಿ ಎಲ್ಲರಿಗೂ ಹಾಗೇ ಅನಿಸುತ್ತದೆ. ಲಖನ್ ಜಾರಕಿಹೊಳಿ ಅಭ್ಯರ್ಥಿಯಾದಾಗಲೇ ಈ ರೀತಿಯ ಆತಂಕ ಇತ್ತು. ಆದರೂ ನಾವು ಪಕ್ಷದ ಆಭ್ಯರ್ಥಿಯನ್ನು ಗೆಲ್ಲಿಸಿ ಕೊಂಡು ಬರಲು ಅವಕಾಶ ಇತ್ತು. ಆದರೂ ಯಾಕೆ ಹಿನ್ನಡೆಯಾಯಿತು ಅಂತ ತಿಳಿದುಕೊಳ್ಳುತ್ತೇವೆ.
ಜೆಡಿಎಸ್ ಸಹಕಾರ ಮುಂದೆಯೂ ಕೇಳುವಿರಾ?
ಜೆಡಿಎಸ್ ಆಭ್ಯರ್ಥಿ ಇಲ್ಲದ ಕಡೆ ಸಹಕಾರ ನೀಡುವಂತೆ ವೈಯಕ್ತಿಕವಾಗಿ ಕೇಳಿದ್ದೆ, ಬೆಂಬಲ ಕೊಟ್ಟಿಲ್ಲ ಎನ್ನಲಾರೆ. ಕೆಲವು ಕಡೆಗಳಲ್ಲಿ ಬೆಂಬಲಿಸಿರಬಹುದು. ಹಿಂದೆಯೂ ಸಹಕಾರ ಕೇಳಿದ್ದೆವು. ಮುಂದೆ ಕೇಳುವ ಬಗ್ಗೆ ಈಗಲೇ ಏನು ಹೇಳಲಾರೆ. ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ.
ಲಖನ್ ಬೆಂಬಲ ನೀಡಿದರೆ ಸಭಾಪತಿ ಸ್ಥಾನ ಪಡೆಯುತ್ತೀರಾ?
ಈ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ.
ಸಂಪುಟ ವಿಸ್ತರಣೆ ಮಾಡ ಬೇಕೆಂಬ ಬೇಡಿಕೆ ಬಗ್ಗೆ?
ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ಮನಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಜತೆಗೆ ಕೇಂದ್ರದ ನಾಯಕರ ಜತೆಗೂ ಸಮಾಲೋಚನೆ ಮಾಡಬೇಕಾಗುತ್ತದೆ. ಖಾಲಿ ಇರುವ ಸ್ಥಾನಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕು.
ಕಾಂಗ್ರೆಸ್‌ನವರು ಶೇ. 40 ಸರಕಾರ ಆಂತ ಆರೋಪಿಸುತ್ತಿದ್ದಾರೆ?
ಭ್ರಷ್ಟಾಚಾರ ಇಲ್ಲವೇ ಇಲ್ಲ ಎನ್ನಲಾರೆ. ತಡೆಯುವ ಬಗ್ಗೆ ಏನು ಮಾಡಬೇಕೋ ಆದನ್ನು ಮಾಡಬೇಕು. ಶೇ. 5 ಇದೆಯೋ, ಶೇ. 10 ಇದೆಯೋ ಗೊತ್ತಿಲ್ಲ. ಭ್ರಷ್ಟಾಚಾರ ಇಲ್ಲದೇ ಅಭಿವೃದ್ಧಿ ಕಾಮಗಾರಿಗಳಿಗೆ ಗಮನ ಕೊಡುವ ಕೆಲಸ ಆಗಬೇಕು. ಶೇ. 40, 50 ಪರ್ಸೆಂಟ್ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ.
ವಿಜಯೇಂದ್ರರಿಗೆ ಮಂತ್ರಿ ಮಾಡಬೇಕೆಂಬ ಬೇಡಿಕೆ ?
ಈ ವಿಚಾರದಲ್ಲಿ ಒತ್ತಡ ಹೇರುವುದಿಲ್ಲ. ಮುಖ್ಯಮಂತ್ರಿ ಹಾಗೂ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ.
ಚುನಾವಣೆ ಬಳಿಕ ರಾಜ್ಯ ಪ್ರವಾಸ ಮಾಡುವೆ ಎಂದಿದ್ದಿರಿ; ಯಾವಾಗ ಮಾಡುತ್ತೀರಿ ?
ಒಂದು ತಿಂಗಳು ಎಲ್ಲೂ ಹೋಗುವುದಿಲ್ಲ. ಅಧಿವೇಶನ ಮುಗಿದ ಮೇಲೆ ಒಂದು ವಾರ ಬೇರೆಕಡೆ ಹೋಗುತ್ತಿದ್ದೇನೆ.
ಬಳಿಕ ಪ್ರತೀ ಜಿಲ್ಲೆಗೆ ತೆರಳಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಪ್ರವಾಸ ಮಾಡುತ್ತೇನೆ.
ಮುಂದಿನ ಚುನಾ ವಣೆಯಲ್ಲಿ 140 ಸ್ಥಾನ ನಾವು ಗೆಲ್ಲಲೇ ಬೇಕು. ಕಾರ್ಯ ಕರ್ತರಲ್ಲಿ ವಿಶ್ವಾಸ ಮೂಡಿಸುವ ಕೆಲಸ
ಮಾಡುತ್ತೇನೆ.
- ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.