![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Dec 16, 2021, 10:04 AM IST
ಬೆಂಗಳೂರು: ಬಸ್‌ನಲ್ಲಿ ಬಿಟ್ಟುಹೋದ ಸುಮಾರು ಎರಡು ಲಕ್ಷ ಬೆಲೆಬಾಳುವ ನಗದು,ಚಿನ್ನಾಭರಣಗಳನ್ನುಸಂಬಂಧಪಟ್ಟ ಪ್ರಯಾಣಿಕರಿಗೆ ಹಿಂತಿರುಗಿಸುವ ಮೂಲಕ ಕೆಎಸ್‌ಆರ್‌ಟಿಸಿ ನಿರ್ವಾಹಕ ಸಿ.ಎಂ. ಲಿಂಗೇಶ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಡಿ. 9ರಂದು ಬೆಂಗಳೂರು- ಕುಂದಾ ಪುರ ಮಾರ್ಗದ ಬಸ್ (ಬಸ್ ಸಂಖ್ಯೆ ಕೆಎ 57 ಎಫ್ 2885)ನಲ್ಲಿ ಪ್ರಯಾಣಿಕರು ಬಸ್‌ನಲ್ಲೇ ತಮ್ಮ ಬ್ಯಾಗ್ ಅನ್ನು ಮರೆತು ಇಳಿದಿದ್ದಾರೆ. ನಂತರ ಆ ಬ್ಯಾಗ್ ಅನ್ನು ಗಮನಿಸಿದ ಬಸ್ ನಿರ್ವಾಹಕ ಲಿಂಗೇಶ್, ಪ್ರಯಾಣಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ:- ಕರ್ತವ್ಯದಲ್ಲಿದ್ದ ಎ.ಎಸ್.ಐ ಹೃದಯಘಾತದಿಂದ ಸಾವು
ಆಮೇಲೆ ಕುಂದಾಪುರ ಘಟಕ ವ್ಯವಸ್ಥಾಪಕರ ಸಮ್ಮುಖದಲ್ಲಿ ಪ್ರಯಾಣಿಕರಿಗೆ ಹಿಂತಿರುಗಿಸದ್ದಾರೆ. ಈ ಬ್ಯಾಗ್‌ನಲ್ಲಿ ಮೊಬೈಲ್, ನಗದು, ಚಿನ್ನಾಭರಣ ಸೇರಿ ಸುಮಾರು ಎರಡು ಲಕ್ಷ ಬೆಲೆಬಾಳುವ ವಸ್ತುಗಳು ಇದ್ದವು. ನಿರ್ವಾ ಹಕರ ಈ ಪ್ರಾಮಾಣಿಕತೆಗೆಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.