ಮಹಾಕಾಳೇಶ್ವರ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನ: ಮುಸ್ಲಿಂ ಯುವಕನ ಬಂಧನ
ಹಿಂದೂ ಸ್ನೇಹಿತೆಯೊಂದಿಗೆ ನಕಲಿ ಐಡಿ ಮಾಡಿ ತೆರಳಿದ್ದ ಬೆಂಗಳೂರಿನ ಯುವಕ
Team Udayavani, Dec 16, 2021, 12:06 PM IST
ಉಜ್ಜಯಿನಿ/ಬೆಂಗಳೂರು: ದೇಶದ 12 ಜ್ಯೋತಿರ್ ಲಿಂಗ ಗಳಲ್ಲಿ ಒಂದಾದ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಬೇರೊಬ್ಬ ವ್ಯಕ್ತಿಯ ಗುರುತಿನ ಚೀಟಿ ಬಳಸಿ ಪ್ರವೇಶಿಸಲು ಯತ್ನಿಸಿದ 24 ವರ್ಷದ ಮುಸ್ಲಿಂ ಯುವಕನನ್ನು ಪೊಲೀಸರು ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ನಸುಕಿನ ವೇಳೆ ಈ ಘಟನೆ ನಡೆದಿದ್ದು, ಬೆಂಗಳೂರಿನ ನಿವಾಸಿ ಮೊಹಮ್ಮದ್ ಯೂನುಸ್ ಬಂಧಿತನಾಗಿದ್ದಾನೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರತಿದಿನವೂ ಮುಂಜಾನೆ 4 ಗಂಟೆಗೆ ನಡೆಯುವ ಎರಡು ಗಂಟೆಗಳ ಕಾಲ ನಡೆಯುವ ಭಸ್ಮ ಆರತಿಯ ವೇಳೆ ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಬಂಧಿಸಲಾಗಿದೆ.
ಅಭಿಷೇಕ್ ದುಬೆ ಎಂಬಾತನ ಆಧಾರ್ ಕಾರ್ಡ್ ಬಳಸಿ ವ್ಯಕ್ತಿ ಭಸ್ಮ ಆರತಿಗಾಗಿ ಪಾಸ್ ಪಡೆದಿದ್ದ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‌ಪಿ) ಪಲ್ಲವಿ ಶುಕ್ಲಾ ಹೇಳಿದ್ದಾರೆ.
ಐಡಿಯಲ್ಲಿನ ಚಿತ್ರಕ್ಕೂ ಬಂಧಿತನ ಚಹರೆಗೂ ಹೊಂದಿಕೆಯಾಗಲಿಲ್ಲ. ನಂತರ, ಭದ್ರತಾ ಸಿಬ್ಬಂದಿ ವ್ಯಕ್ತಿಯ ಬಯೋಮೆಟ್ರಿಕ್‌ಗಳನ್ನು ಸಹ ಪರಿಶೀಲಿಸಿದರು, ಅದು ಕಾರ್ಡ್‌ನಲ್ಲಿರುವವರಿಗೆ ಹೊಂದಿಕೆಯಾಗಲಿಲ್ಲ, ”ಎಂದು ಅವರು ಹೇಳಿದ್ದಾರೆ.
ಮೊಹಮ್ಮದ್ ಯೂನುಸ್ ಸ್ನೇಹಿತೆ ಖುಷ್ಬು ಯಾದವ್ ಅವರೊಂದಿಗೆ ಬಂದಿದ್ದು, ಅವರು ಯೂನುಸ್‌ಗೆ ಇನ್ನೊಬ್ಬ ವ್ಯಕ್ತಿಯ ಗುರುತಿನ ಚೀಟಿಯನ್ನು ವ್ಯವಸ್ಥೆ ಮಾಡಿದ್ದರು ಎಂದು ಶುಕ್ಲಾ ಹೇಳಿದ್ದಾರೆ.
ದೇವಸ್ಥಾನದ ಆಡಳಿತ ಸಮಿತಿಯ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 419 ಮತ್ತು 420 ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಹಾಕಾಲ್ ಪೊಲೀಸ್ ಠಾಣೆ ಪ್ರಭಾರಿ ಮುನೇಂದ್ರ ಗೌತಮ್ ಹೇಳಿದ್ದಾರೆ.
ಗೌತಮ್ ಪ್ರಕಾರ, ಆ ವ್ಯಕ್ತಿ ತನ್ನ ಮಹಿಳಾ ಸ್ನೇಹಿತೆ ಜೊತೆ ನೀಡಲು ದೇವಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.