ಆಸೀಸ್‌ ಕಿರಿಯರ ವಿಶ್ವಕಪ್‌ ತಂಡದಲ್ಲಿ ತಮಿಳುನಾಡಿನ ಎನ್‌. ರಾಧಾಕೃಷ್ಣನ್‌

ಎರಡೂ ಕೈಯಲ್ಲಿ ಬೌಲಿಂಗ್‌ ನಡೆಸುವ ವಿಶಿಷ್ಟ ಪ್ರತಿಭೆ!

Team Udayavani, Dec 16, 2021, 9:30 PM IST

ಆಸೀಸ್‌ ಕಿರಿಯರ ವಿಶ್ವಕಪ್‌ ತಂಡದಲ್ಲಿ ತಮಿಳುನಾಡಿನ ಎನ್‌. ರಾಧಾಕೃಷ್ಣನ್‌

ಸಿಡ್ನಿ: ತಮಿಳುನಾಡು ಮೂಲದ 18 ವರ್ಷದ ಕ್ರಿಕೆಟಿಗ ನಿವೇತನ್‌ ರಾಧಾಕೃಷ್ಣನ್‌ 2022ರ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಗಾಗಿ ಆಸ್ಟ್ರೇಲಿಯ ಕಿರಿಯರ ತಂಡಕ್ಕೆ ಆಯ್ಕೆಯಾಗಿದ್ದಾರೆ. ಎರಡೂ ಕೈಗಳಲ್ಲಿ ಸ್ಪಿನ್‌ ಬೌಲಿಂಗ್‌ ನಡೆಸುವುದು ಇವರ ವೈಶಿಷ್ಟ್ಯ!

ನಿವೇತನ್‌ ರಾಧಕೃಷ್ಣನ್‌ ಇದಕ್ಕೂ ಮುನ್ನ ತಮಿಳುನಾಡು ಕ್ರಿಕೆಟ್‌ ಅಸೋಸಿಯೇಷನ್‌ ಟೂರ್ನಿಗಳಲ್ಲಿ, ತಮಿಳುನಾಡು ಪ್ರೀಮಿಯರ್‌ ಲೀಗ್‌ಗಳಲ್ಲಿ ಆಡಿದ್ದರು. 2021ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ನೆಟ್‌ ಬೌಲರ್‌ ಆಗಿಯೂ ಕಾಣಿಸಿಕೊಂಡಿದ್ದರು. ಟಾಸ್ಮೇನಿಯಾದಲ್ಲಿ ಇವರ ವಾಸ.

ಬಲಗೈ ಹಾಗೂ ಎಡಗೈನಲ್ಲಿ ಆಫ್ ಸ್ಪಿನ್‌ ಮಾಡಬಲ್ಲ (ಆ್ಯಂಬಿಡೆಕ್ಸ್‌ಟ್ರಸ್‌ ಫಿಂಗರ್‌ ಸ್ಪಿನ್ನರ್‌) ಪ್ರಾವೀಣ್ಯತೆ ಹೊಂದಿರುವ ಕಾರಣ ರಾಧಕೃಷ್ಣನ್‌ ಆಸ್ಟ್ರೇಲಿಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ. ಬ್ಯಾಟ್ಸ್‌ಮನ್‌ಗೆ ತಕ್ಕಂತೆ ಎಡಗೈ ಹಾಗೂ ಬಲಗೈಯಲ್ಲಿ ಬೌಲಿಂಗ್‌ ಮಾಡುವ ಆಯ್ಕೆಯನ್ನು ಅವರು ಹೊಂದಿದ್ದಾರೆ.

ಭಾರತೀಯ ಯುವ ಸ್ಪಿನ್ನರ್‌ ಪ್ರತಿಭೆಯನ್ನು ಗುರುತಿಸಿದ “ಕ್ರಿಕೆಟ್‌ ಆಸ್ಟ್ರೇಲಿಯ’ ಅಂಡರ್‌-19 ವಿಶ್ವಕಪ್‌ ಟೂರ್ನಿಗೆ ತಮ್ಮ ತಂಡದಲ್ಲಿ ಅವಕಾಶ ಕಲ್ಪಿಸಿದೆ.

ಪ್ರಯತ್ನ ಫ‌ಲಿಸಿತು:

ಎರಡೂ ಕೈಗಳಿಂದ ಸ್ಪಿನ್‌ ಮಾಡುವ ಕೌಶಲದ ಬಗ್ಗೆ ಪ್ರತಿಕ್ರಿಯಿಸಿದ ರಾಧಕೃಷ್ಣನ್‌, “ಟಿವಿಯಲ್ಲಿ ನೋಡಿದ ಹಾಗೆ, ಚೆನ್ನೈ ಲೀಗ್‌ ಟೂರ್ನಿಗಳಲ್ಲಿ ಕಂಡಂತೆ ಎರಡೂ ಕೈಗಳಿಂದ ಬೌಲ್‌ ಮಾಡುವವರು ಯಾರೂ ನನ್ನ ಗಮನಕ್ಕೆ ಬಂದಿರಲಿಲ್ಲ. ಇಂಥ ಬೌಲರ್‌ಗಳ ಬಗ್ಗೆ ನಾನು ಕೇಳಿಯೂ ಇರಲಿಲ್ಲ. ಹೀಗಾಗಿ ನಾನೇ ಏಕೆ ಈ ರೀತಿ ಬೌಲಿಂಗ್‌ ಮಾಡಬಾರದು ಎಂದು ಅಂದುಕೊಂಡಿದ್ದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದೆ. ಇದು ಯಶಸ್ವಿಯಾಯಿತು’ ಎಂದಿದ್ದಾರೆ.

ವೈಫ‌ಲ್ಯದ ಭಯವಿಲ್ಲ:

“ವೈಫ‌ಲ್ಯದ ಬಗ್ಗೆ ನನಗೆ ಭಯ ಇಲ್ಲ. ನನ್ನ ಬಗ್ಗೆ ಜನರು ಏನು ಯೋಚಿಸುತ್ತಾರೆಂಬ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳುವವನಲ್ಲ. ಈ ರೀತಿಯ ನಿಯಂತ್ರಣಗಳಿಗೆ ಒಳಗಾದರೆ ಸಾಧನೆ ಮಾಡಲು ಸಾಧ್ಯವೇ?’ ಎಂದು ಅವರ ದಿಟ್ಟ ಪ್ರಶ್ನೆ.

2019ರಲ್ಲಿಯೇ ಆಸ್ಟ್ರೇಲಿಯದ ಅಂಡರ್‌-16 ತಂಡದಲ್ಲಿ ಸ್ಥಾನ ಪಡೆದಿದ್ದ ರಾಧಾಕೃಷ್ಣನ್‌ ಪಾಕಿಸ್ಥಾನ ವಿರುದ್ಧ ಆಡಿದ್ದರು. 5 ಪಂದ್ಯಗಳ ಸರಣಿಯಲ್ಲಿ 172 ರನ್‌ ಹಾಗೂ 8 ವಿಕೆಟ್‌ ಉರುಳಿಸಿ ಎಲ್ಲರ ಗಮನ ಸೆಳೆದಿದ್ದರು.

ಟಾಪ್ ನ್ಯೂಸ್

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.