![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Dec 16, 2021, 8:44 PM IST
ವಾಡಿ (ಚಿತ್ತಾಪುರ): ಒಂದೆಡೆ ಮೊಟ್ಟೆ ವಿರೋಧಿಸಿ ಹೋರಾಟ ನಡೆಯುತ್ತಿದೆ. ಇನ್ನೊಂದೆಡೆ ಮಕ್ಕಳು ಶಾಲೆಯಲ್ಲಿ ಮೊಟ್ಟೆ ಮತ್ತು ಹಣ್ಣು ಹಂಚಿ ತಿನ್ನುತ್ತಿದ್ದಾರೆ. ಒಬ್ಬ ವಿದ್ಯಾರ್ಥಿನಿ ಕೈಯಲ್ಲಿ ಮೊಟ್ಟೆ ಹಿಡಿದು ಕುಳಿತರೆ, ಇನ್ನೋರ್ವ ವಿದ್ಯಾರ್ಥಿನಿ ಬಾಳೆಹಣ್ಣು ಹಿಡಿದುಕೊಂಡು ಬಿಸಿಯೂಟವನ್ನು ಒಂದೇ ತಟ್ಟೆಯಲ್ಲಿ ತಿನ್ನುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದ ಸರಕಾರಿ ಹಿರಿಯರ ಪ್ರಾಥಮಿಕ ಶಾಲೆಯಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ವಿದ್ಯಾರ್ಥಿಗಳಿಬ್ಬರು ಪರಸ್ಪರ ಮುಖಾಮುಖಿಯಾಗಿ ಕುಳಿತು ಬಿಸಿಯೂಟ ಸವೆಯುತ್ತಿದ್ದ ಅಪರೂಪದ ದೃಶ್ಯ ಉದಯವಾಣಿ ಕಣ್ಣಿಗೆ ಬಿದ್ದಿದೆ. ಶಾಲೆಯ 8 ನೇ ತರಗತಿಯ ಮಹೆರಾಬೇಗಂ ಮತ್ತು ಭಾಗ್ಯ ಈ ಸೌಹಾರ್ದತೆ ಮೆರೆದ ಮಕ್ಕಳು. ನಮ್ಮಿಬ್ಬರ ಆಹಾರದ ರುಚಿ ಭಿನ್ನವಾಗಿರಬಹುದು ಆದರೆ ನಮ್ಮ ಸ್ನೇಹ ಸೌಹಾರ್ದತೆ ರಕ್ತ ಸಂಬಂದಕಿಂತಲೂ ಮಿಗಿಲಾಗಿದೆ. ನಾವು ಜತೆಗೂಡಿಯೇ ಮೊಟ್ಟೆ ಹಣ್ಣು ಸೇವಿಸುತ್ತೇವೆ. ಇದರಿಂದ ನಮಗೇನೂ ಮುಜುಗರವಿಲ್ಲ. ಮೊಟ್ಟೆ ಕೈಬಿಡಬೇಡಿ. ಹಣ್ಣು ಕೂಡ ನಿಲ್ಲಿಸಬೇಡಿ. ಆಯ್ಕೆ ನಮಗೆ ಬಿಡಿ ಎನ್ನುತ್ತಾರೆ ಮುಗ್ದ ಮಕ್ಕಳು.
ಮೊಟ್ಟೆ ಮತ್ತು ಹಣ್ಣು ವಿತರಣೆ ಯೋಜನೆ ಆರಂಭವಾದ ಗಳಿಗೆಯಿಂದ ಶಾಲೆಯಲ್ಲಿ ಶೇ.10 ದಾಖಲಾತಿ ಹೆಚ್ಚಿದೆ. ಶಾಲೆಗೆ ಬಿಟ್ಟ ವಲಸೆ ಕುಟುಂಬಗಳ ಮಕ್ಕಳೂ ತರಗತಿಗೆ ಹಾಜರಾಗುತ್ತಿದ್ದಾರೆ.-ಭೋಜಪ್ಪ ಜೇವೂರ ,ಮುಖ್ಯ ಶಿಕ್ಷಕ ಕೊಂಚೂರು ಶಾಲೆ
–ವರದಿ: ಮಡಿವಾಳಪ್ಪ ಹೇರೂರ
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.