ಸಮರ ಚಿತ್ರಕಥಾ
Team Udayavani, Dec 17, 2021, 6:30 AM IST
ಪ್ರವಾಹದ ಬಾಂಬ್‌ಗೆ ಆಟಿಕೆಗಳಂತೆ ತೇಲಿದೆವು! :
1971ರಲ್ಲಿ ಪಾಕಿಸ್ಥಾನವು ಬಡ ಬಾಂಗ್ಲಾದ ಮೇಲೆರಗಿ ಬಂದಾಗ, ನಾನು ಮೇಜರ್ ಹುದ್ದೆಯಲ್ಲಿದ್ದೆ. ಅವತ್ತು ಡಿಸೆಂಬರ್ 1. ಯುದ್ಧದ ಮುನ್ಸೂಚನೆ ಸಿಕ್ಕ ಕೂಡಲೇ ನಾನಿದ್ದ ಕುಮಾನ್ 12 ಯುನಿಟ್‌ನಿಂದ ಸುಮಾರು 500 ಕಿ.ಮೀ. ದೂರದ ಭಾರತ- ಬಾಂಗ್ಲಾ ಗಡಿಗೆ ಸ್ಥಳಾಂತರ ಆಗಬೇಕಾಯಿತು. ಎಲ್ಲದಕ್ಕೂ ಮೊದಲು ಅಖೌರಾ ಸನಿಹದ ಬ್ರೋಕನ್ ಬ್ರಿಡ್ಜ್ ಪ್ರದೇಶದ ಮೇಲೆ ಆಕ್ರಮಣಕ್ಕೆ ಸಜ್ಜಾಗಬೇಕಾಗಿತ್ತು.
ಆದರೆ ಡಿ.2ರ ರಾತ್ರಿ ನಾವು ಉಹಿಸಿರದ ಘಟನೆ ನಡೆದಿತ್ತು. ಯಾರಿಗೂ ಕಿಂಚಿತ್ತೂ ಅರಿವಿಗೆ ಬಾರದಂತೆ ಪಾಕ್ ಸೇನೆ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿತು. ಸಾಲದ್ದಕ್ಕೆ, ಅಣೆಕಟ್ಟೆಯ ದ್ವಾರಗಳನ್ನು ತೆರೆದು, ಪ್ರವಾಹದ ಬಾಂಬ್ ಅನ್ನು ಛೂ ಬಿಟ್ಟಿತು. ನಮ್ಮವರು ಆಟಿಕೆಗಳಂತೆ ನಮ್ಮ ಕಣ್ಣೆದುರೇ ತೇಲಿಕೊಂಡು ಹೋಗುತ್ತಿದ್ದರು. ನಾನು ಧೈರ್ಯ ಮಾಡಿ ಅದೇ ನಾಲೆಯಲ್ಲಿ 2-3 ಕಿ.ಮೀ.ಗಳವರೆಗೆ ಚಲಿಸಿ, ಒಂದು ಬಿದಿರಿನ ಸೇತುವೆ ದಾಟಿ, ದೂರದಲ್ಲಿ ನಿಂತಿದ್ದ ನನ್ನ ತುಕಡಿಯನ್ನು ಸೇರಿದ್ದೆ.
60ರಷ್ಟು ಸಂಖ್ಯಾಬಲ ಹೊಂದಿದ್ದ ನಾವು ಮುಂದಿನ ಹೆಜ್ಜೆ ಬಗ್ಗೆ ಚರ್ಚಿಸುತ್ತಿರುವಾಗಲೇ, ನಮ್ಮ ಮಧ್ಯೆ ಹಠಾತ್ತನೆ ಒಂದು ಬಾಂಬ್ ಬಂದು ಬಿತ್ತು. ದೇವರ ಕೃಪೆಯಿಂದ ಅದು ಸಿಡಿಯದೆ, ಅಲ್ಲೇ ನಿಷ್ಕ್ರಿಯವಾಯಿತು. ಸನಿಹವಿದ್ದ ನಾಗರಿಕರನ್ನು ರಕ್ಷಿಸುತ್ತಾ ನಾವು ಅತ್ಯಂತ ಜಾಗರೂಕತೆಯಿಂದ ಶತ್ರುಗಳು ಸ್ಫೋಟಕಗಳನ್ನು ಅಡಗಿಸಿಟ್ಟಿದ್ದ ಮೈನ್‌ಫೀಲ್ಡ್‌ನಲ್ಲಿ ಮುಂದೆ ಸಾಗಿದೆವು. ಹಾಗೆ ನೋಡಿದರೆ ಆ ಹೊತ್ತಿಗೆ ನಮ್ಮ ತುಕಡಿಯಲ್ಲಿನ ಸೈನಿಕರ ಸಂಖ್ಯೆ ತೀರಾ ಕಡಿಮೆ. ಆದರೂ ಶತ್ರುಗಳ ಮಶೀನ್ ಗನ್‌ಗಳನ್ನು ಲೆಕ್ಕಿಸದೆ, ಪ್ರತ್ಯುತ್ತರ ನೀಡಿದ್ದೆವು.
ಸತತ ಐದು ತಾಸುಗಳ ಕಾದಾಟದ ಆ ಕ್ಷಣ ಇನ್ನೂ ನನಗೆ ನೆನಪಿದೆ. ಗ್ರೆನೇಡ್‌ಗಳನ್ನು ಸಿಡಿಸುತ್ತಿದ್ದ ಬಂಕರ್‌ಗಳ ಹೊಡೆದಾಟ ಅಬ್ಬಬ್ಟಾ! 1000 ಸೈನಿಕರ ಒಂದು ಬೆಟಾಲಿಯನ್ ಮಾಡಬಹುದಾದ ಕೆಲಸವನ್ನು ನಮ್ಮ ಚಿಕ್ಕ ತಂಡ ಡಿ.3ರ ಬೆಳಗ್ಗೆ ಪೂರ್ಣಗೊಳಿಸಿದ್ದರ ಬಗ್ಗೆ ಈಗಲೂ ನನಗೆ ಹೆಮ್ಮೆಯಿದೆ.
ಬಳಿಕ ಡಿ.6-7ರಂದು 40 ಕಿಲೋ ಭಾರದ ಶಸ್ತ್ರಾಸ್ತ್ರಗಳನ್ನು ಬೆನ್ನ ಮೇಲೆ ಹೇರಿಕೊಂಡು ಕೋಮಿಲ್ಲಾ , ಆಕ್ಸಿಸ್, ದೌಡ್ಕಂಡಿ ಪ್ರದೇಶ, ಮೇಘನಾ ನದಿಗಳನ್ನು ದಾಟಿ ಸುದೀರ್ಘ 40 ಕಿ.ಮೀ. ಪಯಣಿಸಿ, ಢಾಕಾ ಮುಟ್ಟಿದೆವು. ಪ್ರಮುಖ ಬಂದರು ಪ್ರದೇಶವಾಗಿದ್ದ ದೌಡ್ಕಂಡಿಯನ್ನು ವಶಕ್ಕೆ ತೆಗೆದುಕೊಂಡೆವು. ಡಿ.16ರ ವೇಳೆಗೆ ಪಾಕ್‌ನ 93,000 ಸೈನಿಕರನ್ನು ಯುದ್ಧ ಕೈದಿಗಳನ್ನಾಗಿಸುವಲ್ಲಿ ಕೊನೆಗೂ ಸಫಲರಾದೆವು.
–ಮೇಜರ್ ಜನರಲ್ ಕೆ.ಪಿ. ನಂಜಪ್ಪ, ಮಡಿಕೇರಿ
.
ಜೀವ ಉಳಿಸುವ ಪುಣ್ಯದ ಕೆಲಸ :
ನಾನು ಭಾರತಪಾಕಿಸ್ಥಾನ ಯುದ್ಧದ ವೇಳೆ ವೈದ್ಯಕೀಯ ಸಹಾಯಕನಾಗಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ಸೇನೆಯ ಒಂದಿಷ್ಟು ಸಿಬಂದಿ ಗಾಯಾಳುಗಳನ್ನು ನಾವಿದ್ದ ಬೊಗ್ರಾ ಕ್ಯಾಂಪ್‌ಗೆ ಕರೆದುಕೊಂಡು ಬರುತ್ತಿದ್ದರು. ಆಗ ನಾವು ತತ್‌ಕ್ಷಣ ಪ್ರಥಮ ಚಿಕಿತ್ಸೆ ನೀಡಿ ತಂಡದ ವೈದ್ಯರ ಸಲಹೆ ಮೇರೆಗೆ ಇಂಜಕ್ಷನ್, ಸಲಾಯಿನ್, ಬ್ಯಾಂಡೇಜ್ ಹಚ್ಚುತ್ತಿದ್ದೆವು. ಯುದ್ಧ ದಲ್ಲಿ ಗಾಯಗೊಂಡ ಸೈನಿಕರಷ್ಟೇ ಅಲ್ಲ, ವೈರಿಗಳ ದಾಳಿಯಿಂದ ಕಟ್ಟಡಗಳು ಕುಸಿದು ಗಾಯಗೊಂಡ ವೈರಿಗಳಿಂದ ದೌರ್ಜನ್ಯ, ಹಲ್ಲೆಗೊಳಗಾದ ಸಾವಿ ರಾರು ಜನರಿಗೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವ ಕಾರ್ಯ ಮಾಡಿದೆವು. ಜೀವಗಳನ್ನು ಉಳಿಸುವ ಪುಣ್ಯದ ಕೆಲಸ ಮಾಡುವ ಅವಕಾಶ ದೊರಕಿತು. -ಎಂ.ಎಂ. ಕಮ್ಮಾರ್, ಮಾಜಿ ಯೋಧ, ದಾವಣಗೆರೆ
.
ಯುದ್ಧ ವಿಮಾನಗಳ ಮಾಹಿತಿ ನೀಡುತ್ತಿದ್ದೆ :
ನಾನು ವಾಯುಪಡೆಯಲ್ಲಿದ್ದು ಭಾರತ-ಪಾಕಿಸ್ಥಾನ ಯುದ್ಧ ಸಂದರ್ಭದಲ್ಲಿ ವೈರಿ ರಾಷ್ಟ್ರಗಳ ಕಡೆಯಿಂದ ಬರುವ ಯುದ್ಧ ವಿಮಾನಗಳ ಮಾಹಿತಿಯನ್ನು ಭಾರತೀಯ ಸೇನೆಗೆ ರವಾನಿಸುವ ಕಾರ್ಯ ದಲ್ಲಿ ತೊಡಗಿಕೊಂಡಿದ್ದೆ. ಆಗ ಪಾಕಿಸ್ಥಾನದಲ್ಲಿ ಸೈಬರ್ ಜೆಟ್, ಮಿರೆಜ್ ಹಾಗೂ ಸ್ಟಾರ್ ಫೈಟರ್‌ಗಳೆಂಬ ಯುದ್ಧ ವಿಮಾನಗಳಿದ್ದವು. ಬಾಲಾಕೋಟ್ ಹತ್ತಿರದ ಬೇರೆ ಬೇರೆ ಬೆಟ್ಟ ಗುಡ್ಡಗಳಲ್ಲಿನ ಗುಪ್ತ ಸ್ಥಳದಲ್ಲಿ ಅಡಗಿ ಕುಳಿತು ಯಾವ ನಮೂನೆಯ ವಿಮಾನ, ಎಷ್ಟು ವೇಗದಲ್ಲಿ, ಯಾವ ದಿಕ್ಕಿನೆಡೆಗೆ ಬರುತ್ತಿದೆ ಎಂಬ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಕಳುಹಿಸುತ್ತಿದ್ದೆವು. ಯುದ್ಧ ಸಂದರ್ಭದಲ್ಲಿ ಪಾಕಿಸ್ಥಾನದಿಂದ ಬರು ತ್ತಿರುವ ಯುದ್ಧವಿಮಾನಗಳ ಮಾಹಿತಿ ನೀಡಿದ್ದೆ. ಅದು ನಿಗದಿತ ಸ್ಥಳ ತಲುಪಲು ಮೂರುವರೆ ನಿಮಿಷ ಬೇಕಿತ್ತು. ಮಾಹಿತಿ ಆಧರಿಸಿ ನಮ್ಮ ಯೋಧರು ವೈರಿಗಳ ಎರಡು ವಿಮಾನಗಳನ್ನು ಹೊಡೆದುರುಳಿಸಿದರು. – ಮನೋಹರ ಎಸ್. ಮಹೇಂದ್ರಕರ್, ಮಾಜಿ ಯೋಧ, ದಾವಣಗೆರೆ
(ನಿರೂಪಣೆ: ವಾಣಿ ಭಟ್ಟ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.