![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 17, 2021, 7:50 AM IST
ಹೊಸದಿಲ್ಲಿ: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯುವುದಕ್ಕೆ ವಿದ್ಯಾಸಂಸ್ಥೆಗಳು ಕೌನ್ಸೆಲಿಂಗ್ ನಡೆಸುವುದು, ಮಾನಸಿಕ ಸ್ಥಿರತೆ ತರುವಂತಹ ತರಬೇತಿ ನೀಡುವುದನ್ನು ನೋಡಿರುತ್ತೀರಿ. ಆದರೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಆ ಎಲ್ಲ ಮಾರ್ಗವನ್ನು ಬಿಟ್ಟು, ಕಾಲೇಜು ಕೊಠಡಿಗಳ ಸೀಲಿಂಗ್ ಫ್ಯಾನ್ ತೆಗೆದುಹಾಕಲು ಆರಂಭಿಸಿದೆ!
ಕಾಲೇಜಿನ ಎಲ್ಲ ಕೊಠಡಿಗಳ ಸೀಲಿಂಗ್ ಫ್ಯಾನ್ ತೆಗೆದುಹಾಕಿ, ಗೋಡೆಗೆ ಅಳವಡಿಸುವಂಥ ಫ್ಯಾನ್‌ಗಳನ್ನು ಹಾಕಲು ಆದೇಶಿಸಲಾಗಿದೆ. ಹಾಗೆಯೇ ಕಾಲೇಜಿನ ಟೆರೇಸ್ ಮತ್ತು ಬಾಲ್ಕನಿಗೆ ತೆರಳದಿರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಈ ವರ್ಷ ನಾಲ್ಕು ವಿದ್ಯಾರ್ಥಿಗಳು ಹಾಗೂ ಕಳೆದ ವರ್ಷ ಇಬ್ಬರು ವಿದ್ಯಾರ್ಥಿಗಳು ಐಐಎಸ್‌ಸಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಯೋಜನವಿಲ್ಲದ್ದು ಎಂದ ವಿದ್ಯಾರ್ಥಿಗಳು: ಐಐಎಸ್‌ಸಿಯ ಈ ನಿರ್ಧಾರಕ್ಕೆ ಕಾಲೇಜಿನ ವಿದ್ಯಾರ್ಥಿಗಳೇ ಟೀಕೆ ವ್ಯಕ್ತಪಡಿಸಲಾರಂಭಿಸಿದ್ದಾರೆ. ಕಾಲೇಜಿನ ಶೇ.88 ವಿದ್ಯಾರ್ಥಿಗಳು ಸೀಲಿಂಗ್ ಫ್ಯಾನ್ ತೆಗೆಯುವುದರಿಂದ ಆತ್ಮಹತ್ಯೆ ಕಡಿಮೆಯಾಗುವು ದಿಲ್ಲ ಎಂದಿದ್ದರೆ, ಶೇ.90 ವಿದ್ಯಾರ್ಥಿಗಳು ನಮಗೆ ವಾಲ್ ಮೌಂಟೆಡ್ ಫ್ಯಾನ್ ಬೇಡ, ಸೀಲಿಂಗ್ ಫ್ಯಾನ್ ಬೇಕು ಎಂದಿದ್ದಾರೆ. ಕಾಲೇಜಿನಲ್ಲಿ ಕ್ಷೇಮ ಕೇಂದ್ರವಿದೆಯಾದರೂ ಅದರ ಬಳಕೆಯಾಗುತ್ತಲೇ ಇಲ್ಲ ಎಂದೂ ಆರೋಪಿಸಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.