ಮದುವೆ ವಯಸ್ಸು 21: ಯುವತಿಯರ ವಿವಾಹ ವಯಸ್ಸು  ಪರಿಷ್ಕರಣೆಗೆ ನಿರ್ಧಾರ


Team Udayavani, Dec 17, 2021, 7:10 AM IST

Untitled-1

ಹೊಸದಿಲ್ಲಿ: ಶೀಘ್ರವೇ ದೇಶದಲ್ಲಿ ಸ್ತ್ರೀಯರ ವಿವಾಹ ವಯಸ್ಸು ಈಗಿರುವ 18ರಿಂದ 21ಕ್ಕೆ ಪರಿಷ್ಕರಣೆ ಯಾಗಲಿದೆ. ಪುರುಷರು ಮತ್ತು ಮಹಿಳೆಯರ ವಿವಾಹ ವಯಸ್ಸನ್ನು ಸಮಾನವಾಗಿ ಇರಿಸುವ ನಿಟ್ಟಿನಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ 2006ಕ್ಕೆ ಸಂಸತ್ತಿನ ಹಾಲಿ ಅಧಿವೇಶನದಲ್ಲಿಯೇ ತಿದ್ದುಪಡಿ ಮಸೂದೆ ಮಂಡಿಸಿ, ಅನುಮೋದನೆ ಪಡೆಯಲು ಕೇಂದ್ರ ಸರಕಾರ ಮುಂದಾಗಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜತೆಗೆ ವಿಶೇಷ ವಿವಾಹ ಕಾಯ್ದೆ, ಹಿಂದೂ ವಿವಾಹ ಕಾಯ್ದೆ ಗಳಿಗೂ ತಿದ್ದುಪಡಿ ತರುವ ಸಾಧ್ಯತೆಗಳಿವೆ. ಕಳೆದ ವರ್ಷ ಸ್ವಾತಂತ್ರ್ಯ ದಿನದ ಭಾಷಣದ ವೇಳೆ ಪ್ರಧಾನಿ ಮಹಿಳೆಯರ ಮದುವೆ ವಯಸ್ಸು ಪರಿಷ್ಕರಿಸುವ ಬಗ್ಗೆ ಮಾತನಾಡಿದ್ದರು. ಸದ್ಯ ದೇಶದಲ್ಲಿ ಮಹಿಳೆಯರಿಗೆ ವಿವಾಹದ ವಯಸ್ಸು 18 ಮತ್ತು ಪುರುಷರಿಗೆ 21.

ಜಯಾ ಜೇಟ್ಲಿ ಸಮಿತಿ ಶಿಫಾರಸು

ಸಮತಾ ಪಾರ್ಟಿಯ ಮಾಜಿ ಮುಖ್ಯಸ್ಥೆ, ಲೇಖಕಿ ಜಯಾ ಜೇಟ್ಲಿ ನೇತೃತ್ವದಲ್ಲಿ ಕೇಂದ್ರ ಸರಕಾರವು ತಾಯ್ತನದ ವಯಸ್ಸು, ತಾಯಂದಿರ ಮರಣ ಪ್ರಮಾಣ ಇಳಿಕೆ, ಪೌಷ್ಟಿಕಾಂಶ ಪ್ರಮಾಣ ಹೆಚ್ಚಿಸುವುದು ಮತ್ತು ಇತರ ಅಂಶಗಳನ್ನು ಪರಿಶೀಲಿಸಲು 2020ರ ಜುಲೈಯಲ್ಲಿ ಸಮಿತಿ ರಚಿಸಿತ್ತು. ಸಮಿತಿಯ ಶಿಫಾರಸಿನ ಬಗ್ಗೆ ಮಾತನಾಡಿದ ಜಯಾ ಜೇಟಿÉ ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ 5ನೇ ಆವೃತ್ತಿಯಲ್ಲಿ ಕಂಡುಬಂದಂತೆ ಜನರಲ್ಲಿ ಮಕ್ಕಳನ್ನು ಪಡೆಯುವ (ಫ‌ರ್ಟಿಲಿಟಿ ರೇಟ್‌) ಸಾಮರ್ಥ್ಯ ಶೇ. 2.0 ಆಗಿದೆ.

ಹೀಗಾಗಿ ಜನಸಂಖ್ಯಾ ಸ್ಫೋಟದ ಪ್ರಮಾಣ ನಿಯಂತ್ರಣ ದಲ್ಲಿದೆ ಎಂದು ಭಾವಿಸಲಾಗುತ್ತಿದೆ.

ಮಹಿಳೆಯರ ಶ್ರೇಯೋಭಿವೃದ್ಧಿಗಾಗಿಯೇ ವಿವಾಹ ವಯಸ್ಸು ಪರಿಷ್ಕರಿಸಲು ಶಿಫಾರಸು ಮಾಡಲಾಗಿದೆ ಎಂದಿದ್ದಾರೆ. ಪ್ರತೀ ಕ್ಷೇತ್ರದಲ್ಲಿಯೂ ಮಹಿಳೆಗೆ ಸಮಾನ ಅವಕಾಶ ಕಲ್ಪಿಸುವ ಈ ದಿನಗಳಲ್ಲಿ ಇಂಥ ಶಿಫಾರಸಿನ ಅಗತ್ಯ ಇತ್ತು. ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಗ್ರಾಮೀಣ ಪ್ರದೇಶಗಳ ತಜ್ಞರು, ಎನ್‌ಜಿಒಗಳ ಜತೆಗೆ ಸಮಗ್ರವಾಗಿ ಪರಾಮರ್ಶೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಅಭಿಪ್ರಾಯ ಸಂಗ್ರಹಿಸುವ ವೇಳೆ ಮಹಿಳೆಯರ ವಿವಾಹ ವಯಸ್ಸು 22 ಅಥವಾ 23 ಇದ್ದರೆ ಒಳ್ಳೆಯದು ಎಂದು ಅನಿಸಿಕೆ ವ್ಯಕ್ತವಾಗಿತ್ತು ಎಂದು ಜೇಟಿÉ ಹೇಳಿದ್ದಾರೆ. ಮಹಿಳೆಯರ ವಿವಾಹ ವಯಸ್ಸು ಹೆಚ್ಚಿಸುವುದರಿಂದ ಅವರಿಗೆ ಹೆಚ್ಚು ಪಡೆಯಲು ಮತ್ತು ಉದ್ಯೋಗಕ್ಕೆ ತೆರಳಲು ಅನುಕೂಲವಾಗಲಿದೆ ಎಂದು ಜಯಾ ಜೇಟಿÉ ಪ್ರತಿಪಾದಿಸಿದ್ದಾರೆ. ಎಲ್ಲ ಧರ್ಮಗಳಿಗೆ ಸೇರಿದವರಿಂದಲೂ ಅಭಿಪ್ರಾಯ ಸಂಗ್ರಹಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.

ನೀತಿ ಆಯೋಗದ ಸದಸ್ಯ ಡಾ| ವಿ.ಕೆ. ಪೌಲ್‌, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಗಳು ಸದಸ್ಯರಾಗಿದ್ದ ಈ ಸಮಿತಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಧಾನಮಂತ್ರಿಗಳ ಕಚೇರಿ, ನೀತಿ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು.

ಕಾಯ್ದೆ  ಪ್ರಕಾರ ಸದ್ಯ ಹೇಗೆ? :

ಹಿಂದೂ ವಿವಾಹ ಕಾಯ್ದೆ : 1955 ಸೆಕ್ಷನ್‌ 5(3)ರ ಪ್ರಕಾರ ವಧುವಿನ ವಯಸ್ಸು  18, ವರನಿಗೆ 21.

ವಿಶೇಷ ವಿವಾಹ ಕಾಯ್ದೆ  :  1954 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಪ್ರಕಾರ  ವಧುವಿಗೆ  18, ವರನಿಗೆ  21 ವರ್ಷ.

ಏಕೆ ಶಿಫಾರಸು? :

  • ಪುರುಷ ಮತ್ತು ಮಹಿಳೆಯರಿಗೆ ಒಂದೇ ಮದುವೆ ವಯಸ್ಸು ಇರಿಸುವ ಮೂಲಕ ಲಿಂಗ ಸಮಾನತೆ ಕಾಯ್ದುಕೊಳ್ಳುವುದು.
  • ಕಡಿಮೆ ವಯಸ್ಸಿನಲ್ಲಿಯೇ ಮದುವೆಯಾಗುವುದರಿಂದ ಬೇಗನೆ ತಾಯಿಯಾಗುವ ಆತಂಕ.
  • ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಪ್ರತಿಕೂಲ ಪರಿಣಾಮ.
  • ತಾಯಿ ಮತ್ತು ಮಗುವಿಗೆ ಪೌಷ್ಟಿಕಾಂಶಗಳ ಕೊರತೆ. ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಹೆಚ್ಚಳ ತಗ್ಗಿಸಲು ಮದುವೆ ವಯಸ್ಸು ಏರಿಕೆಯಿಂದ ಅನುಕೂಲ.
  • ಇತ್ತೀಚಿನ ಎನ್‌ಎಚ್‌ಎಫ್ಎಸ್‌-5ರಲ್ಲಿ ಕಂಡು ಬಂದಿರುವ ಪ್ರಕಾರ ಸಂತಾನೋತ್ಪತ್ತಿ ಸಾಮರ್ಥ್ಯ (ಫ‌ರ್ಟಿಲಿಟಿ ರೇಟ್‌) ಶೇ. 2.0ಕ್ಕೆ ಕುಸಿತ.
  • ಈ ಸಮೀಕ್ಷೆಯ ಪ್ರಕಾರ ಬಾಲ್ಯ ವಿವಾಹ ಪ್ರಮಾಣ ಕಡಿಮೆಯಾಗಿದೆ. 2015-16ನೇ ಸಾಲಿನಲ್ಲಿ ಶೇ. 27, 2019-20ನೇ ಸಾಲಿನಲ್ಲಿ ಶೇ. 23.
  • ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗಗಳ ಅವಕಾಶ ಹೆಚ್ಚು ಸಿಗುವಂತಾಗಲು.

ಮದುವೆ ವಯಸ್ಸು  ಎಲ್ಲಿ  ಎಷ್ಟು ? :

ಎಸ್ತೋನಿಯಾ: ಇಲ್ಲಿ ಮದುವೆಯ ಕಾನೂನುಬದ್ಧ ಕನಿಷ್ಠ ವಯಸ್ಸು 15.

ಯುನೈಟೆಡ್‌ ಕಿಂಗ್‌ಡಮ್‌:  ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ 18ನೇ ವಯಸ್ಸಿಗೆ ಮದುವೆಯಾಗಬಹುದು. ಹೆತ್ತವರ ಅನು ಮತಿ ಜತೆಗೆ 16 ಅಥವಾ 17ನೇ ವಯಸ್ಸು.

ಟ್ರಿನಿಡಾಡ್‌, ಟೊಬಾಗೊ: ಈ ರಾಷ್ಟ್ರ ಗಳಲ್ಲಿ ಪುರುಷರಿಗೆ, ಮಹಿಳೆಯರಿಗೆ ಕಾನೂನುಬದ್ಧ ವಯಸ್ಸು 18. ಮುಸ್ಲಿಮರಲ್ಲಿ ಪುರುಷರಿಗೆ 16, ಮಹಿಳೆಯರಿಗೆ 12 ವರ್ಷ, ಹಿಂದೂಗಳಲ್ಲಿ ಪುರುಷರಿಗೆ 18, ಮಹಿಳೆ ಯರಿಗೆ 14 ವರ್ಷಕ್ಕೆ ಮದುವೆ ಅವಕಾಶ.

ಅಮೆರಿಕ: ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಕಾನೂನುಬದ್ಧ ವಯಸ್ಸು ಬದಲಾಗುತ್ತದೆ. ಸಾಮಾನ್ಯವಾಗಿ 18 ವಯಸ್ಸಿಗೆ ಬಂದ ಮೇಲೆ ಮದುವೆಯಾಗುತ್ತಾರೆ. ನೆಬ್ರಾಸ್ಕಾದಲ್ಲಿ ಮದುವೆ ವಯಸ್ಸು 19, ಮಿಸ್ಸಿಸಿಪ್ಪಿ ಯಲ್ಲಿ 21. ಕೆಲವರು ಪ್ರಾಪ್ತ ವಯಸ್ಕರಾದ ಬಳಿಕ ಮದುವೆಯಾಗುತ್ತಾರೆ. ಕೆಲವು ಪ್ರಾಂತ್ಯ ಗಳಲ್ಲಿ ಮದುವೆ ವಯಸ್ಸು ಇಳಿಕೆಗೆ ಚಿಂತನೆ ನಡೆಸಲಾಗುತ್ತಿದೆ. ಉದಾಹರಣೆಗೆ ಮೆಸಾ ಚ್ಯುಸೆಟ್ಸ್‌ನಲ್ಲಿ ಅಪರೂಪದ ಪ್ರಕರಣಗಳಲ್ಲಿ ಜಡ್ಜ್ ಅನುಮತಿ ಜತೆಗೆ 12ರ ಬಾಲಕಿಗೆ ಮದುವೆ ಮಾಡಲು ಅವಕಾಶ ಇದೆ.

ಚೀನ: ಇಲ್ಲಿ ಪುರುಷರಿಗೆ 22, ಮಹಿಳೆಯರಿಗೆ 20.

ನೈಗರ್‌: ಪಶ್ಚಿಮ ಆಫ್ರಿಕಾದ ಈ ದೇಶದಲ್ಲಿ ಬಾಲ್ಯ ವಿವಾಹ ಕಾನೂನುಬದ್ಧವಾಗಿದೆ. ಬಾಲಕರಿಗೆ 18, ಬಾಲಕಿಯರಿಗೆ 15 ವರ್ಷ.

 

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.