2021 : ಕೋವಿಡ್ ನಡುವೆಯೂ ಶತಕದ ಗಡಿ ದಾಟಿದ ಕನ್ನಡ ಸಿನಿಮಾಗಳು

Team Udayavani, Dec 17, 2021, 8:48 AM IST

cinema dec 2021

ವರ್ಷ ಮುಗಿಯುತ್ತಾ ಬರುತ್ತಿದೆ. ಎರಡು ವಾರ ಹೋದರೆ2021 ಒಂದು ನೆನಪಾಗಿಯಷ್ಟೇ ಉಳಿಯಲಿದೆ.ಕನ್ನಡ ಚಿತ್ರರಂಗದ ವಿಷಯದಲ್ಲಿ2021 ತುಂಬಾ ದುಃಖ ಕೊಟ್ಟ ವಿಚಾರ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪುನೀತ್‌ ರಾಜ್‌ಕುಮಾರ್‌, ಸಂಚಾರಿ ವಿಜಯ್‌ ಸೇರಿದಂತೆಕನ್ನಡದ ಅನೇಕ ನಟರನ್ನು ಈ ವರ್ಷ ಕಳೆದುಕೊಂಡಿದ್ದೇವೆ.

ಹಾಗಾಗಿ,ಕನ್ನಡ ಚಿತ್ರರಂಗಕ್ಕೆ ಆಘಾತ ನೀಡಿದ ವರ್ಷ 2021. ಆ ನೋವಿನಲ್ಲೇ ಚಿತ್ರರಂಗ ಇದೆ. ಇನ್ನು, ಸಿನಿಮಾ ಬಿಡುಗಡೆಯ ವಿಚಾರಕ್ಕೆ ಬರುವುದಾದರೆ, ಈ ವರ್ಷ ಕನ್ನಡ ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಈ ವಾರ ತೆರೆಕಾಣುತ್ತಿರುವ “ಆನ’ ಹಾಗೂ ಮುಂದಿನ ಎರಡು ವಾರಗಳಲ್ಲಿ ತೆರೆಕಾಣುತ್ತಿರುವ ಸಿನಿಮಾಗಳನ್ನು ಗಮನದಲ್ಲಿಟ್ಟು ಹೇಳುವುದಾ ದರೆ2021ರಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ100 ದಾಟುತ್ತದೆ.

ಇದರಲ್ಲಿ ಓಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳು ಕೂಡಾ ಸೇರಿವೆ. ಇನ್ನು, ಬಿಡುಗಡೆಯಾಗಿರುವ ಮೂರು ತುಳು ಚಿತ್ರಗಳುಕೂಡಾ ಇದರಲ್ಲಿ ಸೇರುತ್ತವೆ. ಳೆದ ವರ್ಷದಿಂದಕನ್ನಡ ಚಿತ್ರರಂಗಕೂಡಾ ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಸಿನಿಮಾ ಬಿಡುಗಡೆಯ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಆದರೆ,ಕಳೆದ ವರ್ಷಕ್ಕೆ ಅಂದರೆ2020ಕ್ಕೆ ಹೋಲಿಸಿದರೆ ಈ ವರ್ಷ ಬಿಡುಗಡೆಯಲ್ಲಿ ಏರಿಕೆಯಾ ಗಿದೆ.

ಇದನ್ನೂ ಓದಿ: ಟಿವಿಎಸ್‌ಮೋಟರ್‌- ಬಿಎಂಡಬ್ಲ್ಯೂ ಮೊಟೊರಾಡ್‌ ಒಪ್ಪಂದ‌ ವಿಸ್ತರಣೆ

2020ರಲ್ಲಿಕೊರೊನಾ ಆರ್ಭಟ ಜೋರಾಗಿ, ಲಾಕ್‌ಡೌನ್‌ ಪರಿಣಾಮದಿಂದ80 ಪ್ಲಸ್‌ ಚಿತ್ರಗಳಷ್ಟೇ ಬಿಡುಗಡೆಯಾಗಿದ್ದವು. ಆದರೆ, ಈ ವರ್ಷ 20ಪ್ಲಸ್‌ ಚಿತ್ರಗಳು ಹೆಚ್ಚು ಬಿಡುಗಡೆಯಾಗಿ, ನೂರರ ಗಡಿದಾಟಿದಂತಾಗಿದೆ.ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆಯಾದ ವರ್ಷವೆಂದರೆ ಅದು2018. ಆ ವರ್ಷ ಬರೋಬ್ಬರಿ 235ಕ್ಕೂ ಹೆಚ್ಚು ಚಿತ್ರ ಗಳು ಬಿಡುಗಡೆಯಾಗಿದ್ದವು. ಆ ನಂತರ2019ರಲ್ಲಿ220 ಪ್ಲಸ್‌ ಚಿತ್ರಗಳು ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದವು.

ಬಿಡುಗಡೆಯಲ್ಲಿ ಇಳಿಕೆ- ಹೆಚ್ಚಿದ ಗಳಿಕೆ: ಮೊದಲೇ ಹೇಳಿದಂತೆ ಸಿನಿಮಾ ಬಿಡುಗಡೆಯಲ್ಲಿ ಈ ವರ್ಷ ಇಳಿಕೆಯಾದರೂ ಗಳಿಕೆಯಲ್ಲಿ ಮಾತ್ರಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿಸದ್ದು ಮಾಡಿದೆ. ಅದರಲ್ಲೂ ಸ್ಟಾರ್‌ ಸಿನಿಮಾಗಳು ಭರ್ಜರಿ ಕಲೆಕ್ಷನ್‌ ಮಾಡಿ, ಕನ್ನಡ ಚಿತ್ರರಂಗ ಪರಭಾಷೆಗಿಂತಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿವೆ. “ಪೊಗರು’, “ರಾಬರ್ಟ್‌’, “ಯುವರತ್ನ’, “ಸಲಗ’, “ಕೋಟಿಗೊ ಬ್ಬ-3′, “ಭಜರಂಗಿ-2′, “ಮದಗಜ’, “ಸಖತ್‌’ ಚಿತ್ರಗಳುಕಲೆಕ್ಷನ್‌ ವಿಷಯದಲ್ಲಿ ಚಿತ್ರರಂಗಕ್ಕೆ ಹುಮ್ಮಸ್ಸು ನೀಡಿವೆ.

ಇನ್ನು, ರಮೇಶ್‌ ಅರವಿಂದ್‌ ನಟನೆಯ “100′, “ಹೀರೋ’, “ಗರುಡ ಗಮನ ವೃಷಭ ವಾಹನ’ ಸೇರಿದಂತೆ ಅನೇಕ ಸಿನಿಮಾಗಳು ನಿರ್ಮಾಪಕರ ಜೇಬು ತುಂಬಿಸಿ, ಗೆಲುವಿನ ನಗೆ ಬೀರಿವೆ. ಸ್ಟಾರ್ ದರ್ಶನ ಈ ವರ್ಷದ ಮತ್ತೂಂದು ವಿಶೇಷವೆಂದರೆ ಬಹುತೇಕ ಎಲ್ಲಾ ಸ್ಟಾರ್‌ಗಳ ಸಿನಿಮಾಗಳು ಈ ವರ್ಷ ತೆರೆಕಂಡಿವೆ. ಈ ಮೂಲಕ ಸ್ಟಾರ್ ದರ್ಶನವಾಗಿದೆ. ಶಿವರಾಜ್‌ಕು ಮಾರ್‌, ಪುನೀತ್‌ ರಾಜ್‌ಕುಮಾರ್‌, ದರ್ಶನ್‌, ಸುದೀಪ್‌, ವಿಜಯ್‌, ಗಣೇಶ್‌, ಮುರಳಿ, ಧ್ರುವ … ಹೀಗೆ ಬಹುತೇಕ ಎಲ್ಲಾ ಸ್ಟಾರ್‌ ನಟರ ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಜೊತೆಗೆ ಅಜೇಯ್‌, ಪ್ರಜ್ವಲ್‌, ಯೋಗಿ ಚಿತ್ರಗಳು ಈ ವರ್ಷ ದರ್ಶನ ನೀಡಿವೆ.

ಟಾಪ್ ನ್ಯೂಸ್

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…

anish tejeshwar aram arvind swamy movie

Anish Tejeshwar: ‘ಮುಂದೆ ಹೇಗೋ ಏನೋ..’: ಆರಾಮ್‌ ಅರವಿಂದ ಸ್ವಾಮಿ ಹಾಡು ಹಬ್ಬ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.