ಕುಷ್ಟಗಿ: ಆಹೋರಾತ್ರಿ ಟಗರು ಕಾಳಗ; ರಣೋತ್ಸಾಹದ ಕೇಕೆ
Team Udayavani, Dec 17, 2021, 11:45 AM IST
ಕುಷ್ಟಗಿ: ಮಾಣಿಕ್ಯ, ರಾಯಣ್ಣ, ಜಂಜಂ, ತಾಲೂಕಿನ ಬೆಂಚಮಟ್ಟಿ ಕೆರೆ ಅಂಗಳದಲ್ಲಿ ಆಹೋರಾತ್ರಿ ನಡೆದ ಟಗರಿನ ಕಾಳಗ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಟಗರುಗಳಿವು.
ಕುಷ್ಟಗಿಯ ಗಾಂಧಿನಗರದ ಆಯೋಜಕರು ಆಯೋಜಿದ್ದ ರಾಜ್ಯಮಟ್ಟದ ಟಗರಿನ ಕಾಳಗ ಸ್ಪರ್ಧೆಯ ಗುರುವಾರ ರಾತ್ರಿ9 ಕ್ಕೆ ಆರಂಭವಾಗಿ, ಶುಕ್ರವಾರ ಬೆಳಗಿನ 7 ಗಂಟೆಯವರೆಗೆ ನಡೆಯಿತು.ಕಾಂಗ್ರೆಸ್ ಯುವ ಘಟಕದ ರಾಜ್ಯ ಮಾದ್ಯಮ ವಕ್ತಾರ ಲಾಡ್ಲೆ ಮಷಾಕ್ ದೋಟಿಹಾಳ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಮುತ್ತು ರಾಠೋಡ್ ಚಾಲನೆ ನೀಡಿದರು.
ಈ ರೋಮಾಂಚಕಾರಿ ಟಗರು ಕಾಳಗದಲ್ಲಿ ಬಳ್ಳಾರಿ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಗದಗ, ಧಾರವಾಡದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಟಗರುಗಳು ಭಾಗವಹಿಸಿರುವುದು ಗಮನ ಸೆಳೆಯಿತು.
ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಪ್ರೇಕ್ಷಕರು, ಅಖಾಡದಲ್ಲಿ ಸ್ಪರ್ಧೆಗೆ ಇಳಿದ ಟಗರುಗಳನ್ನು ತುದಿಗಾಲಲ್ಲಿ ನಿಂತು, ರಣೋತ್ಸಾಹದ ಕೇಕೇಯೊಂದಿಗೆ ಹುರಿ ದುಂಬಿಸಿದರು. ರೋಮಾಂಚನಕಾರಿ ಕಾಳಗವನ್ನು ರೈತಾಪಿ ವರ್ಗ ಚಳಿಯಲ್ಲಿ ನಿದ್ದೆಗೆಟ್ಟು ನೋಡಿ ಸಂಭ್ರಮಿಸಿದರು.
ಮಾಣಿಕ್ಯ ಟಗರು ಚಾಂಪಿಯನ್ ಕಿರೀಟ
ಬೆಳಗಿನ ಶುಕ್ರವಾರದರೆಗೂ ಮುಂದುವರಿದ ಕಾಳಗದಲ್ಲಿ ಹರಿಹರ ದ ಪಿ.ಜಿ. ರಾಘವೇಂದ್ರ ಅವರ ಮಾಣಿಕ್ಯ ಟಗರು ಪ್ರಥಮ ಸ್ಥಾನದೊಂದಿಗೆ 25 ಸಾವಿರ ರೂ.ನಗದು ಬಹುಮಾನ, ಚಾಂಪಿಯನ್ ಟ್ರೋಫಿ ತನ್ನದಾಗಿಸಿತು. ಹೂವಿನಹಡಗಲಿಯ ಕೃಷ್ಣಪ್ಪ ಅವರ ರಾಯಣ್ಣ ಟಗರು ದ್ವಿತೀಯ ಬಹುಮಾನದೊಂದಿಗೆ 15 ಸಾವಿರ ರೂ.ಗಳಿಸಿತು. ಬಾಗಲಕೋಟೆ ಜಿಲ್ಲೆಯ ಸುಳೀಬಾವಿಯ ಮಹಾಂತೇಶ ಅವರ ಜಂಜಂ ಟಗರು ತೃತೀಯ ಸ್ಥಾನದೊಂದಿಗೆ 10 ಸಾವಿರ ರೂ. ಬಹುಮಾನ ಪಡೆಯಿತು.
ಕುಷ್ಟಗಿ ತಾಲೂಕಿನ ಮನ್ನೆರಾಳ ಮುದಕಪ್ಪ ಪಾವಿ ಅವರ ಟಗರು ತೃತೀಯ ಸ್ಥಾನದೊಂದಿಗೆ 5 ಸಾವಿರ ರೂ. ಬಹುಮಾನ ಪಡೆಯಿತು.
– ಮಂಜುನಾಥ ಮಹಾಲಿಂಗಪುರ ಕುಷ್ಟಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.