ಕಾಮನ್ವೆಲ್ತ್ ವೇಟ್ಲಿಫ್ಟಿಂಗ್: ಚಿನ್ನ ಗೆದ್ದ ಪೂರ್ಣಿಮಾ ಪಾಂಡೆ
Team Udayavani, Dec 17, 2021, 8:30 PM IST
ತಾಷ್ಕೆಂಟ್: ಉಜ್ಬೇಕಿಸ್ಥಾನದಲ್ಲಿ ಸಾಗುತ್ತಿರುವ ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ ನಲ್ಲಿ ಭಾರತದ ಪೂರ್ಣಿಮಾ ಪಾಂಡೆ ಚಿನ್ನದ ಪದಕಕ್ಕೆ ಮುತ್ತಿಕಿದ್ದಾರೆ.
ಮಹಿಳೆಯರ ಪ್ಲಸ್ 87 ವಿಭಾಗದಲ್ಲಿ ಸ್ಪರ್ಧಿಸಿದ ಪೂರ್ಣಿಮಾ ಚಿನ್ನದ ಪದಕದ ಹಾದಿಯಲ್ಲಿ ಎಂಟು ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಪೂರ್ಣಿಮಾ ಪಾಂಡೆ ಒಟ್ಟು 229 ಕೆ.ಜಿ (102 ಕೆ.ಜಿ ಹಾಗೂ 127 ಕೆ.ಜಿ) ಭಾರ ಎತ್ತ ಮೂಲಕ ಮುಂದಿನ ವರ್ಷ ನಡೆಯಲಿರುವ ಕಾಮನ್ವೆಲ್ತ್ಗೇಮ್ಸ್ಗೆ ನೇರ ಅರ್ಹತೆ ಪಡೆದಿದ್ದಾರೆ
. ಸ್ನ್ಯಾಚ್ ವಿಭಾಗದಲ್ಲಿ ಎರಡು ಮತ್ತು ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ ತಲಾ ಮೂರು ಸೇರಿದಂತೆ ಪೂರ್ಣಿಮಾ ಎಂಟು ರಾಷ್ಟ್ರೀಯ ದಾಖಲೆಗಳನ್ನು ಬರೆದರು.
ಲವ್ಪ್ರೀತ್ಗೆ ಬೆಳ್ಳಿ
ಪುರುಷರ 109 ಕೆ.ಜಿ ವಿಭಾಗದಲ್ಲಿ 348 ಕೆ.ಜಿ (161 ಕೆ.ಜಿ ಪ್ಲಸ್ 187 ಕೆ.ಜಿ) ಭಾರ ಎತ್ತಿ ಸಾಧನೆ ಮಾಡಿರುವ ಭಾರತದ ಲವ್ಪ್ರೀತ್ ಸಿಂಗ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಏಷ್ಯನ್ ಯೂತ್ ಹಾಗೂ ಜೂನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಲವ್ಪ್ರೀತ್ ಸ್ನ್ಯಾಚ್ ವಿಭಾಗದಲ್ಲಿ ಮೂರು ಮತ್ತು ಕ್ಲೀನ್ ಹಾಗೂ ಜರ್ಕ್ ವಿಭಾಗದಲ್ಲಿ ತಲಾ ಒಂದು ದಾಖಲೆಗಳನ್ನು ನಿರ್ಮಿಸಿದರು.
ಮಹಿಳೆಯರ 87 ಕೆ.ಜಿ ವಿಭಾಗದಲ್ಲಿ ಅನುರಾಧಾ ಪಾವುಂರಾಜ್ ಒಟ್ಟು 195 ಕೆ.ಜಿ (90 ಕೆ.ಜಿ ಪ್ಲಸ್ 105 ಕೆ.ಜಿ) ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು. ಪ್ರತಿ ವಿಭಾಗದಲ್ಲಿ ಚಿನ್ನದ ಪದಕ ಜಯಸುವ ವೇಟ್ಲಿಫ್ಟರ್ಗಳು ಮುಂದಿನ ವರ್ಷ ಇಂಗ್ಲೆಂಡ್ನ ಬರ್ಮಿಂಗ್ಹ್ಯಾನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ಗೆ ನೇರ ಪ್ರವೇಶ ಗಳಿಸಲಿದ್ದಾರೆ. ಇನ್ನುಳಿದವರ ಅರ್ಹತೆಯು ರ್ಯಾಂಕಿಂಗ್ ಆಧಾರದಲ್ಲಿ ಪರಿಗಣಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.