ಸ್ವಚ್ಛತಾ ವಾಹಿನಿಗೆ ಇನ್ನು ಮಹಿಳಾ ಸಾರಥಿ
ಬವಿವ ಸಂಘದ ಆರ್‌ಸೆಟ್ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.
Team Udayavani, Dec 17, 2021, 5:28 PM IST
ಬಾಗಲಕೋಟೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆಗೆ ಇನ್ನು ಮುಂದೆ ಸ್ವಚ್ಛವಾಹಿನಿಗೆ ಮಹಿಳೆಯರೆ ಸಾರಥಿಯಾಗಲಿದ್ದಾರೆ ಎಂದು ಜಿಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಹೇಳಿದರು.
ವಿದ್ಯಾಗಿರಿಯ ಬಿವಿವ ಸಂಘದ ಕೊಟೆಕ್ ಮಹೀಂದ್ರಾ ಬ್ಯಾಂಕ್ ಆರ್‌ಸೆಟ್ ಸಂಸ್ಥೆಯ ಸಭಾ ಭವನದಲ್ಲಿ ಜಿಪಂ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರಿಗಾಗಿ ಲಘು ವಾಹನ ಚಾಲನಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಪಂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಚನೆಯಾದ ಮಹಿಳಾ ಒಕ್ಕೂಟ ಹಾಗೂ ಸ್ವ-ಸಹಾಯ ಸಂಘದ 50ಜನ ಸದಸ್ಯರಿಗೆ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದೆ ಎಂದರು.
ಮಹಿಳಾ ಒಕ್ಕೂಟದ ಸದಸ್ಯರಿಗೆ 30 ದಿನಗಳ ಕಾಲ ಉಚಿತವಾಗಿ ಚಾಲನಾ ತರಬೇತಿ ನೀಡುವ ಜೊತೆಗೆ ವಾಹನ ಚಾಲನಾ ಲೈಸನ್ಸ್ ಕೊಟ್ಟು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಂದಾಗಿರುವುದು ರಾಜ್ಯದಲ್ಲೇ ಮೊದಲು ಎಂದರು.
ತರಬೇತಿನಂತರಮಹಿಳೆಯರನ್ನು ಸ್ವಚ್ಛ ವಾಹಿನಿಗೆ ಸಾರಥಿಯನ್ನಾಗಿ ಮಾಡಲಾಗುತ್ತಿದೆ. ಇನ್ನು ಮುಂದೆ ಮಹಿಳೆಯರಿಗೆ ತ್ಯಾಜ್ಯ ಸಂಗ್ರಹಣೆಗೆ ವಾಹನ ಚಾಲನೆ ಮಾಡಿಕೊಂಡು ಮನೆಯ ಬಾಗಿಲಿಗೆ ಬರಲಿದ್ದಾರೆ. ಇದು ಮೆಚ್ಚುಗೆಗೆ ವ್ಯಕ್ತವಾಗುವಂತಹ ವಿಷಯವಾಗಿದೆ ಎಂದು ಹೇಳಿದರು. ಅದಕ್ಕಾಗಿ ಮೊದಲ ಹಂತದಲ್ಲಿ ಜಿಲ್ಲೆಯಲ್ಲೇ ಒಕ್ಕೂ ಟದ 50 ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿ ವಿದ್ಯಾಗಿರಿಯಲ್ಲಿರುವ ಬವಿವ ಸಂಘದ ಆರ್‌ಸೆಟ್ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.
ಮಹಿಳೆಯರು ಸಹ ಇನ್ನು ಮುಂದೆ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಚಾಲಕರಾಗಲಿದ್ದಿರಿ. ಆದ್ದರಿಂದ ತರಬೇತಿಯ ಸಂಪೂರ್ಣ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿಒಳ್ಳೆಯಬದಲಾವಣೆ ತರಲು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಬಿವಿವಿಸಂಘದ ಕೊಟೆಕ್‌ಮಹೀಂದ್ರಾ ಬ್ಯಾಂಕ್ ಆರ್‌ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಸ್.ಬಿ.ಅಂಗಡಿ ಮಾತನಾಡಿ, ಮನೆ ಸ್ವತ್ಛತೆಯನ್ನು ಕಾಪಾಡುತ್ತಿರುವ ಮಹಿಳೆಯರನ್ನು ಗ್ರಾಮ ಸ್ವತ್ಛತೆಗೆ ತೊಡಗಿಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ಮಹಿಳಾ ಒಕ್ಕೂಟದ ಸದಸ್ಯರಿಗೆವಾಹನಚಾಲನಾ ತರಬೇತಿಯಜತೆಗೆಇತರೆ ವಿಷಯಗಳ ಬಗ್ಗೆಯೂ ತರಬೇತಿ ನೀಡಲಾಗುವುದು.
ನಾಲ್ಕು ಗಾಲಿ ವಾಹನ ಚಾಲನೆಗೆ ಮಹಿಳೆಯರು ಆಸಕ್ತಿ ತೋರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಯೋಜನಾ ನಿರ್ದೇಶಕ (ಡಿಆರ್ ಡಿಎ) ಎಂ.ವಿ.ಚಳಗೇರಿ, ಸ್ವತ್ಛ ಭಾರತ ಮಿಷನ್ ಯೋಜನೆಯಡಿ ಎನ್‌ಆರ್‌ಎಲ್‌ಎಂದಡಿ ರಚನೆಯಾದ ಮಹಿಳಾ ಒಕ್ಕೂಟದ ಸದಸ್ಯರಿಗೆ ವಾಹನ ಚಾಲನೆ ನೀಡಿ ತ್ಯಾಜ್ಯ ನಿರ್ವಹಣೆಗೆ ವಹಿಸುವ ಉದ್ದೇಶದಿಂದ ಪ್ರಾರಂಭಿಕವಾಗಿ 50 ಜನ ಒಕ್ಕೂಟದ ಸದಸ್ಯರಿಗೆ ವಾಹನಚಾಲನಾ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ತ್ಯಾಜ್ಯ ನಿರ್ವಹಣೆಗೆ ಮಹಿಳೆಯರೆ ಮನೆ ಮನೆಗೆ ವಾಹನ ಚಾಲನೆ ಮಾಡಿಕೊಂಡು ತ್ಯಾಜ್ಯ ಸಂಗ್ರಹಣೆ ಕೆಲಸ ಮಾಡಲಿದ್ದು, 6 ತಿಂಗಳ ಮಟ್ಟಿಗೆ ಗ್ರಾಮ ಪಂಚಾಯಿತಿಯಿಂದ ಸಂಭಾವನೆ ನೀಡಲಾಗುತ್ತಿದೆ. ನಂತರ ವಾಹನ, ತ್ಯಾಜ್ಯ ಘಟಕ ನೀಡಿ ಸಂಪೂರ್ಣ ನಿರ್ವಹಣೆಗೆ ಒಕ್ಕೂಟಗಳಿಗೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ಬಿವಿವಿ ಸಂಘದ ಕೊಟೆಕ್ ಮಹೀಂದ್ರಾ ಬ್ಯಾಂಕ್ ಆರ್‌ಸೆಟ್ ಸಂಸ್ಥೆಯ ನಿರ್ದೇಶಕ ಶರಣಬಸವ ಹುನೂರ, ಸಂಸ್ಥೆಯ ತರಬೇತಿದಾರ ಎಸ್.ಎನ್. ಹಂಚನಾಳ, ಎಸ್.ಸಿ.ಬಿರಾದಾರ, ಜಿಪಂ ಸಹಾಯಕ ಯೋಜನಾಕಾರಿಬಿ.ಡಿ.ತಳವಾರ, ಜಿಲ್ಲಾಕಾರ್ಯಕ್ರಮ ಅಧಿಕಾರಿ ಗೋಪಾಲ ಗದಿಗೇನ್ನವರ ಮುಂತಾದವರು ಉಪಸ್ಥಿತರಿದ್ದರು.
ಮೊದಲಹಂತದಲ್ಲಿ ಜಿಲ್ಲೆಯಲ್ಲಿ ಒಕ್ಕೂಟದ 50 ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿ ವಿದ್ಯಾಗಿರಿಯಲ್ಲಿರುವ ಬವಿವ ಸಂಘದ ಆರ್‌ಸೆಟ್ ಸಂಸ್ಥೆಯಲ್ಲಿ ಉಚಿತವಾಗಿ
ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಸಹ ಇನ್ನು ಮುಂದೆ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಚಾಲಕರಾಗಲಿದ್ದಾರೆ.
ಟಿ.ಭೂಬಾಲನ್, ಜಿ.ಪಂ. ಸಿಇಒ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.