ವಾಯುಪುತ್ರನ ಭಕ್ತಿಗೆ ಅಡ್ಡಿಯಾಗದ ವೈರಾಣು
Team Udayavani, Dec 18, 2021, 1:08 PM IST
ನೆಲಮಂಗಲ: ಕೊರೊನಾ ಮತ್ತು ಒಮಿಕ್ರಾನ್ ಸಾಂಕ್ರಾಮಿಕ ಮಹಾಮಾರಿಗಳ ನಡುವೆ ಶ್ರೀ ರಾಮನಬಂಟ ಹನುಮನ ಜಯಂತಿಯನ್ನು ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಹನುಮ ಜಯಂತಿ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲೂಕಿನ ಹನುಮನ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಬೆಳಗ್ಗಿನಿಂದಲೇ ಹನುಮನ ದೇವಾಲಯಗಳಿಗೆ ಭೇಟಿ ನೀಡಿದ ಭಕ್ತರುಗಳು ಸರತಿ ಸಾಲಿನಲ್ಲಿ ನಿಂತು ಹನುಮನ ದರ್ಶನ ಪಡೆದರು. ಶ್ರೀ ರಾಮಧೂತ ಹನುಮನ ನಾಮಸ್ಮರಣೆ ಮಾಡಿದ್ದಲ್ಲದೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವ ಅರ್ಪಿಸಿದರು.
ವಿಶೇಷ ಅಲಂಕಾರ: ಪಟ್ಟಣದ ತಿಮ್ಮಶೆಟ್ಟಪ್ಪ ಬಡಾವಣೆಯ ಶ್ರೀರಾಮಾಂಜನೇಯ ದೇಗುಲ, ಅಡೇಪೇಟೆ ಹಿಪ್ಪೆ ಆಂಜನೇಯ ದೇಗುಲ, ಉತ್ತರಘಟ್ಟದಕ್ಷಿಣಘಟ್ಟ ಆಂಜನೇಯ ದೇಗುಲ, ವಾಜರಹಳ್ಳಿಗ್ರಾಮದ ಶ್ರೀ ಆಂಜನೇಯ ದೇಗುಲ, ಚೆನ್ನಪ್ಪ ಬಡಾವಣೆಯ ಶ್ರೀ ವೀರಾಂಜನೇಯ ಸೇರಿದಂತೆತಾಲೂಕಿನ ಹೊಸಪಾಳ್ಯ ಶ್ರೀಆಂಜ ನೇಯಸ್ವಾಮಿದೇವಸ್ಥಾನ ಬಸವನಹಳ್ಳಿ, ಗೊಲ್ಲಹಳ್ಳಿ ಭೈರಶೆಟ್ಟಿ ಹಳ್ಳಿಯ ಪುರಾಣ ಪ್ರಸಿದ್ಧವಾದ ಶ್ರೀ ಆಂಜನೇಯ ದೇಗುಲಗಳಲ್ಲಿ ಅಭಿಷೇಕ ಹೋಮ ಹವನಾದಿ ಗಳನ್ನು ಆಯೋಜಿಸಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಬೆಂಗಳೂರು ಉತ್ತರ ತಾಲೂಕು ಅಡಕಮಾ ರನಹಳ್ಳಿ ಬೃಹತ್ ಹನುಮನ ದೇಗುಲ ಹಾಗೂ ಪ್ರಸನ್ನಾಂಜನೇಯ ಟ್ರಸ್ಟ್‌ನಲ್ಲಿರುವ ಬೃಹತ್ ಆಂಜನೇಯ ವಿಗ್ರಹಗಳಿಗೆಜಯಂತಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ಆಂಜನೇಯ ದೇವಾಲಯಗಳನ್ನು ವಿವಿಧಬಗೆಯವಿದ್ಯುತ್ ದೀಪಗಳು ಮತ್ತು ಹೂಗಳಿಂದ ವಿಶೇಷವಾಗಿ ಅಂಲಕರಿಸಲಾಗಿತ್ತು.
ಅನ್ನಸಂತರ್ಪಣೆ: ಹನುಮ ಜಯಂತಿಯ ಪ್ರಯುಕ್ತ ಹನುಮಂತನ ಎಲ್ಲ ದೇವಾಲಗಳಲ್ಲೂ ದೇವರ ದರ್ಶನ ಪಡೆಯಲು ಆಗಮಿಸಿದ್ದ ಸದ್ಭಕ್ತರುಗಳ ದಣಿವು ಮತ್ತುಹಸಿವು ನೀಗಿಸಲು ದೇವಾಲಯದ ಸಮಿತಿ ಮತ್ತು ಹನುಮಂತನ ಸೇವಾಕರ್ತರುಗಳು ಪ್ರಸಾದ ವಿನಿಯೋಗ, ಸಿಹಿ ಪಾನಕ, ಮಜ್ಜಿಗೆ, ಸೇರಿದಂತೆ ಅನ್ನಸಂತರ್ಪಣೆ ಯನ್ನು ವ್ಯವಸ್ಥೆ, ತಿಮ್ಮಶೆಟ್ಟಪ್ಪ ಬಡಾವಣೆಯಲ್ಲಿ
ಪುರಸಭೆ ಮಾಜಿ ಅಧ್ಯಕ್ಷ ಎನ್.ಪಿ. ಹೇಮಂತ್ ಕುಮಾರ್ ನೇತೃತ್ವದಲ್ಲಿ, ಉತ್ತರಘಟ್ಟ ದಕ್ಷಿಣಘಟ್ಟ ದಲ್ಲಿ ಕಪಾಲಿ ವೆಂಕಟೇಶ್ ಮರಿಯಪ್ಪ ನೇತೃತ್ವದಲ್ಲಿ ಹಾಗೂ ಪ್ರಸನ್ನಾಂಜನೇಯ ಬಡಾವಣೆಯಲ್ಲಿರುವ ಬೃಹತ್ ಹನುಮನ ಮೂರ್ತಿಯ ಬಳಿಯಲ್ಲಿ ಭವಾನಿ ಶಂಕರ್ ಭೈರೇಗೌಡ ನೇತೃತ್ವದಲ್ಲಿ ಪೂಜೆ ಪುನಸ್ಕಾರ ಮತ್ತು ತರ್ಪಣೆಯನ್ನು ನೆರವೇರಿಸಲಾಯಿತು. ಈ ಬಾರಿ ಸರತಿಸಾಲಿನಲ್ಲಿ ನಿಂತು ಪ್ರಸಾದ ಪಡೆದುಕೊಳ್ಳಲು ಅನುವುಮಾಡಿಕೊಡಲಾಗಿತ್ತು. ನಗರಸಭೆ ಸದಸ್ಯರಾದಶಾರದರಮೇಶ್, ವಿನಯ್ ಕುಮಾರ್, ಮುರಳಿ, ಅಕ್ಷಯ, ನಟರಾಜು, ಗಂಗರಾಜು, ಚಿರಂಜೀವಿ. ಸಿದ್ದರಾಜು, ಚೇತನ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.