ಪವಿತ್ರ ಧನುರ್ಮಾಸ ಆಚರಣೆಯ ಮಹತ್ವ, ಪೌರಾಣಿಕ ಹಿನ್ನೆಲೆ ಏನು?

ಈ ದಿನ ದೇವಾಲಯದ ಏಳು ಬಾಗಿಲುಗಳನ್ನು ಹಾದು ಹೋದರೆ ಮೋಕ್ಷ ದೊರಕಿದಂತೆ ಎಂಬುದು ನಂಬಿಕೆ.

Team Udayavani, Dec 18, 2021, 4:40 PM IST

ಪವಿತ್ರ ಧನುರ್ಮಾಸ ಆಚರಣೆಯ ಮಹತ್ವ, ಪೌರಾಣಿಕ ಹಿನ್ನೆಲೆ ಏನು?

ಹಿಂದೂ ಧರ್ಮದಲ್ಲಿ ಹಲವಾರು ಆಚರಣೆಗಳು ಇವೆ. ಹಿಂದೂಗಳನ್ನು ಭಕ್ತಿ ಭಾವದಲ್ಲಿ ಮಿಂದೇಳುವಂತೆ ಮಾಡುತ್ತದೆ. ಅಂಥ ಪವಿತ್ರ ಆಚರಣೆಗಳಲ್ಲಿ ಧನುರ್ಮಾಸವೂ ಒಂದು. ಧನುರ್ ಸಂಕ್ರಮಣವೆಂದರೆ ಸೂರ್ಯನು ಧನುರ್ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ ಈ ಮಾಸವನ್ನು ಧನುರ್ಮಾಸವೆಂದು ಕರೆಯುತ್ತಾರೆ. ಈ ತಿಂಗಳ ಪ್ರಾರಂಭದಲ್ಲಿ ಸೂರ್ಯನು ಧನುರ್ ರಾಶಿಯನ್ನು ಪ್ರವೇಶಿಸಲು ಪ್ರಾರಂಭಿಸಿ ತಿಂಗಳ ಕೊನೆಗೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನವೇ ಮಕರ ಸಂಕ್ರಮಣ.

ಧನುರ್ಮಾಸದ ಆಚರಣೆ ಎಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು , ಸ್ನಾನ-ನಿತ್ಯ ಕರ್ಮಾದಿಗಳನ್ನು ಮುಗಿಸಿ ನಕ್ಷತ್ರಗಳು ಹೊಳೆಯುತ್ತಿರುವಾಗಲೇ ದೇವಾಲಯಗಳು ಬಾಗಿಲು ತೆರೆದು ಬೆಳಗಿನ ಪೂಜೆ ಆರಂಭಿಸಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗಬೇಕು. ಇದನ್ನು ಧನುಪೂಜೆ ಎಂದು ಕರೆಯುತ್ತಾರೆ. ಈ ಬಾರಿಯ ಧನುರ್ಮಾಸ ಡಿ.16ರಿಂದ ಪ್ರಾರಂಭವಾಗಿದ್ದು, ಜ. 14ರಂದು ಪೂರ್ಣಗೊಳ್ಳಲಿದೆ.

ಧನುರ್ಮಾಸದ ಪೂಜೆಗೆ “ಹುಗ್ಗಿ’’ ಪ್ರಸಾದ ವಿಶೇಷ ನೈವೇದ್ಯ. ಹುಗ್ಗಿ ಎಂದರೆ “ಹೆಸರು ಕಾಳು’’ ಹಾಗೂ ಅಕ್ಕಿ, ಬೆಲ್ಲ ಸೇರಿಸಿ ಮಾಡುವ ನೈವೇದ್ಯ ಇದು ಧನು ಪೂಜೆಗೆ ವಿಶೇಷ ಪ್ರಸಾದ ಈ ನೈವೇದ್ಯವನ್ನು “ಪೊಂಗಲ್‌’’ ಎಂದು ಕರೆಯುತ್ತಾರೆ. ದೇವತೆಗಳಿಗೆ ದಕ್ಷಿಣಾಯನವು ರಾತ್ರಿಯ ಕಾಲ ಮತ್ತು ಉತ್ತರಾಯಣವು ಬೆಳಗಿನ ಕಾಲ. ಆದರೆ ಧನುರ್ಮಾಸವು ರಾತ್ರಿ ಮತ್ತು ಹಗಲಿನಿಂದ ಕೂಡಿದ ಕಾಲವೆಂಬುದು ಪ್ರತೀತಿ. ಧನುರ್ಮಾಸದಲ್ಲಿ ವಿಶೇಷವಾಗಿ ಚಂದ್ರನ ಬೆಳವಣಿಗೆಯ ಹಂತದಲ್ಲಿ ಬರುವ ಏಕಾದಶಿಯು ಮೋಕ್ಷ ದ್ವಾರಂ ಎಂದು ಹೆಸರುವಾಸಿಯಾಗಿದೆ. ಈ ದಿನ ದೇವಾಲಯದ ಏಳು ಬಾಗಿಲುಗಳನ್ನು ಹಾದು ಹೋದರೆ ಮೋಕ್ಷ ದೊರಕಿದಂತೆ ಎಂಬುದು ನಂಬಿಕೆ.

ಧನುರ್ಮಾಸ ಪುಣ್ಯ ಪೂರ್ಣ ಮಾಸ :-
ಬೃಹತ್‌ ಸಾಮ ತಥಾ ಸಾಮ್ನಾಂ
ಗಾಯತ್ರೀ ಛಂದ ಸಾಮಹಮ್‌|
ಮಾಸಾನಾಂ ಮಾರ್ಗಶೀರ್ಷೋಹಂ
ಋತೂನಾಂ ಕುಸುಮಾಕರಃ||
ಅಂದರೆ, ವೇದಗಳಲ್ಲಿ ‘ಪ್ರಧಾನವಾದ ಬೃಹತ್‌ ಸಾಮವು ನಾನು, ಛಂದಸ್ಸುಗಳಲ್ಲಿ ಅತಿ ವಿಶಿಷ್ಟವಾದ ಗಾಯತ್ರಿ ಛಂದಸ್ಸು ನಾನು, ಮಾಸಗಳಲ್ಲಿ ಮಾರ್ಗಶೀರ್ಷ ಮಾಸವು ನಾನು, ಋತುಗಳಲ್ಲಿ ಚಿಗುರೊಡೆಯುವ ಋತು ವಸಂತವೂ ನಾನೇ ಆಗಿದ್ದೇನೆ’ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ.

ಧನುರ್ಮಾಸದ ಪೌರಾಣಿಕ ಹಿನ್ನೆಲೆ
ಒಮ್ಮೆ ಸೃಷ್ಟಿಕರ್ತರಾದ ಬ್ರಹ್ಮದೇವನು ಹಂಸ ಪಕ್ಷಿಯ ಅವತಾರದಲ್ಲಿ ಲೋಕ ಸಂಚಾರ ಮಾಡುತ್ತಿರುವಾಗ ಸೂರ್ಯದೇವನು ಹಂಸರೂಪಿ ಬ್ರಹ್ಮದೇವನ ಮೇಲೆ ಹೆಚ್ಚಿನ ಶಾಖ ಮತ್ತು ಬೆಳಕನ್ನು ಬಿಡುತ್ತಾನೆ. ಇದರಿಂದ ಕೋಪಗೊಂಡ ಹಂಸ ಸ್ವರೂಪಿ ಬ್ರಹ್ಮದೇವನು ನಿನ್ನ ತೇಜಸ್ಸು ಕ್ಷೀಣಿಸಲಿ ಎಂದು ಶಾಪ ಕೊಡುತ್ತಾನೆ.

ಸೂರ್ಯ ದೇವ ಕಾಂತಿಹೀನನಾಗಿ ತನ್ನ ಪ್ರಕಾಶ ಕಳೆದುಕೊಂಡನು. ಇದರಿಂದಾಗಿ ಭೂಮಂಡಲವೇ ಅಲ್ಲೋಲ ಕಲ್ಲೋಲವಾಯಿತು. ದೇವಾನುದೇವತೆಗಳು ಹಾಗೂ ಮುನಿವೃಂದವು ನಿತ್ಯ-ಪೂಜೆ ಹಾಗೂ ಹೋಮ ಹವನಾದಿಗಳನ್ನು ನಡೆಸದಂತಾಯಿತು. ಆಗ ಎಲ್ಲರೂ ಸೇರಿ ಬ್ರಹ್ಮ ದೇವರ ಕುರಿತು ತಪಸ್ಸು ಆಚರಿಸಿದರು. ಬ್ರಹ್ಮದೇವನು ಪ್ರತ್ಯಕ್ಷನಾಗಿ ಸ್ಥಿತಿ ಅರಿತು ಪರಿಹಾರ ಸೂಚಿಸುತ್ತಾನೆ.

ಸೂರ್ಯ ದೇವನು ಧನು ಮಾಸದ ಮೊದಲ ಜಾವದಲ್ಲಿ ಜಗದೊಡೆಯ ಶ್ರೀ ಮಹಾವಿಷ್ಣುವನ್ನು ಪೂಜಿಸುವಂತೆ ಸಲಹೆ ನೀಡಲಾಯಿತು. ಅಂತೆಯೇ ಸೂರ್ಯದೇವ ಧನುರ್ಮಾಸದ ಪೂಜೆಯನ್ನು ಬೆಳಗ್ಗಿನ ಜಾವದಲ್ಲಿ ಸತತ ಹದಿನಾರು ವರುಷಗಳ ಕಾಲ ನೇರವೆರಿಸಿದನು. ಶ್ರೀ ಮಾಹಾವಿಷ್ಣುವಿನ ಪೂರ್ಣಾನುಗ್ರಹದಿಂದ ಎಂದಿನಂತೆ ತೇಜಸ್ಸು ಹಾಗೂ ಕಾಂತಿಯಿಂದ ಜಗತ್ತನ್ನು ಬೆಳಗತೊಡಗಿದನು ಎಂದು ಪುರಾಣಗಳಿಂದ ತಿಳಿದುಬಂದಿದೆ. ಸೂರ್ಯದೇವ ಈ ಧನುರ್ಮಾಸದ ಪೂಜೆ ಮಾಡಿ ಜಗತ್ತಿಗೆ ಈ ಆಚರಣೆಯ ಮಹತ್ವ ತಿಳಿಯುವಂತೆ ಮಾಡಿದನು. ಈ ಮಾಸದ ಪುಣ್ಯ ಫ‌ಲ ಎಲ್ಲರಿಗೂ ಪ್ರಾಪ್ತಿಯಾಗಲಿ.

– ಸುಮುಖ ಪಂಡಿತ್‌

ಟಾಪ್ ನ್ಯೂಸ್

Heavy Rain ಜನ್ನಾಡಿ: ಹೊಳೆಯಂತಾದ ಬಿದ್ಕಲ್‌ಕಟ್ಟೆ – ಹಾಲಾಡಿ ರಾಜ್ಯ ಹೆದ್ದಾರಿ !

Heavy Rain ಜನ್ನಾಡಿ: ಹೊಳೆಯಂತಾದ ಬಿದ್ಕಲ್‌ಕಟ್ಟೆ – ಹಾಲಾಡಿ ರಾಜ್ಯ ಹೆದ್ದಾರಿ !

1-rasht-aa

Puri ಜಗದ್ವಿಖ್ಯಾತ ಜಗನ್ನಾಥ ರಥಯಾತ್ರೆ ಆರಂಭ; ಸಾಕ್ಷಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು

Accident-Logo

Bantwala: ಮಾರಿಪಳ್ಳದಲ್ಲಿ ಬಸ್‌-ದ್ವಿಚಕ್ರ ವಾಹನ ಢಿಕ್ಕಿ; ಸವಾರ ಮೃತ್ಯು

ರಾಜ್ಯದ ಏಕೈಕ ಜಗನ್ನಾಥ ದೇಗುಲದ ರಥೋತ್ಸವ ಸಂಭ್ರಮ

Guledgudda ರಾಜ್ಯದ ಏಕೈಕ ಜಗನ್ನಾಥ ದೇಗುಲದ ರಥೋತ್ಸವ ಸಂಭ್ರಮ

Mohua Moitra

NCW ಮುಖ್ಯಸ್ಥೆ ವಿರುದ್ಧ ಅವಹೇಳನಕಾರಿ ಪದ: ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

1-crick

Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲಾವಿದರು ಹಾದಿ ತಪ್ಪಲು ಪ್ರೇಕ್ಷಕ ವರ್ಗವೂ ಕಾರಣ: ಕೆ.ಎಚ್‌.ದಾಸಪ್ಪ ರೈ

ಕಲಾವಿದರು ಹಾದಿ ತಪ್ಪಲು ಪ್ರೇಕ್ಷಕ ವರ್ಗವೂ ಕಾರಣ: ಕೆ.ಎಚ್‌.ದಾಸಪ್ಪ ರೈ

Sitharama tholpadi

Yakshagana: ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣ ಪ್ರಶಸ್ತಿ ಗೌರವ

Gayana

Music Programme: ಸಂಗೀತ ರಸಿಕರನ್ನು ರಂಜಿಸಿದ ಮಳೆಗಾಲದ ರಾಗಗಳ ಗಾಯನ

France-Assmbly

France Election: ಫ್ರಾನ್ಸ್‌ನಲ್ಲೂ ಬದಲಾವಣೆ ಗಾಳಿ!

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Heavy Rain ಜನ್ನಾಡಿ: ಹೊಳೆಯಂತಾದ ಬಿದ್ಕಲ್‌ಕಟ್ಟೆ – ಹಾಲಾಡಿ ರಾಜ್ಯ ಹೆದ್ದಾರಿ !

Heavy Rain ಜನ್ನಾಡಿ: ಹೊಳೆಯಂತಾದ ಬಿದ್ಕಲ್‌ಕಟ್ಟೆ – ಹಾಲಾಡಿ ರಾಜ್ಯ ಹೆದ್ದಾರಿ !

1-rasht-aa

Puri ಜಗದ್ವಿಖ್ಯಾತ ಜಗನ್ನಾಥ ರಥಯಾತ್ರೆ ಆರಂಭ; ಸಾಕ್ಷಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು

Accident-Logo

Bantwala: ಮಾರಿಪಳ್ಳದಲ್ಲಿ ಬಸ್‌-ದ್ವಿಚಕ್ರ ವಾಹನ ಢಿಕ್ಕಿ; ಸವಾರ ಮೃತ್ಯು

ರಾಜ್ಯದ ಏಕೈಕ ಜಗನ್ನಾಥ ದೇಗುಲದ ರಥೋತ್ಸವ ಸಂಭ್ರಮ

Guledgudda ರಾಜ್ಯದ ಏಕೈಕ ಜಗನ್ನಾಥ ದೇಗುಲದ ರಥೋತ್ಸವ ಸಂಭ್ರಮ

Mohua Moitra

NCW ಮುಖ್ಯಸ್ಥೆ ವಿರುದ್ಧ ಅವಹೇಳನಕಾರಿ ಪದ: ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.