ಜ.1ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ
Team Udayavani, Dec 18, 2021, 5:10 PM IST
ಚಿತ್ರದುರ್ಗ: 2021-22ನೇ ಸಾಲಿನಲ್ಲಿ ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಜನವರಿ 1ರಿಂದಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಲಾಗುತ್ತದೆಎಂದು ಜಿಲ್ಲಾ ಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿಶುಕ್ರವಾರ 2021-22ನೇ ಸಾಲಿನ ಕನಿಷ್ಟ ಬೆಂಬಲ ಬೆಲೆಯೋಜನೆ ಕಾರ್ಯಾಚರಣೆ ಜಿಲ್ಲಾ ಟಾಸ್ಕ್ ಪೋರ್ಸ್‌ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಗಿಯನ್ನು ಪ್ರತಿ ಕ್ವಿಂಟಾಲ್‌ಗೆ 3377 ರೂ.ಗಳ ಬೆಂಬಲ ಬೆಲೆಯನ್ನು ನಿಗ ದಿಮಾಡಲಾಗಿದೆಮತ್ತು 50 ಕೆ.ಜಿ ತೂಕವುಳ್ಳ ಗೋಣಿ ಚೀಲದವೆಚ್ಚವಾಗಿ 22 ರೂ.ಗಳಂತೆ ನೀಡಲಾಗುತ್ತದೆ.ಇದರ ನೋಂದಣಿಗೆ ಪ್ರೂಟ್ಸ್ ದತ್ತಾಂಶದಂತೆ ಇದರನೋಂದಣಿ ಮಾಡಲಾಗುತ್ತದೆ.
ರೈತರು 2022ರಜನವರಿ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿಖರೀದಿಗೆ ನೋಂದಾಯಿಸಿಕೊಳ್ಳಬೇಕು. ರಾಗಿಖರೀದಿಗೆ ಚಿತ್ರದುರ್ಗದ ಎಪಿಎಂಸಿ, ಹೊಳಲ್ಕೆರೆತಾಲೂಕು ಚಿಕ್ಕಜಾಜೂರು ಎಪಿಎಂಸಿಯಲ್ಲಿತಲಾ ಒಂದು ಖರೀದಿ, ಹೊಸದುರ್ಗ ಎಪಿಎಂಸಿಆವರಣದಲ್ಲಿ ನಾಲ್ಕು ಹೋಬಳಿಗಳಿಂದ ಎರಡುಹೋಬಳಿಗೊಂದರಂತೆ ಎರಡು ಖರೀದಿಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದುಹೇಳಿದರು.
ಜಿಲ್ಲೆಯ ಚಿತ್ರದುರ್ಗ 2204, ಚಳ್ಳಕೆರೆ518, ಹಿರಿಯೂರು 2763, ಹೊಳಲ್ಕೆರೆ 4429,ಹೊಸದುರ್ಗ 33,531 ಹಾಗೂ ಮೊಳಕಾಲ್ಮುರುತಾಲೂಕಿನಲ್ಲಿ 332 ಹೆಕ್ಟೇರ್ ಸೇರಿದಂತೆ ಒಟ್ಟುಜಿಲ್ಲೆಯಲ್ಲಿ 43777 ಹೆಕ್ಟೇರ್ ರಾಗಿ ಬಿತ್ತನೆಯಾಗಿದ್ದು,ಇದರಿಂದ 32559 ಮೆಟ್ರಿಕ್ ಟನ್ ರಾಗಿಉತ್ಪಾದನೆಯ ಗುರಿ ಹೊಂದಲಾಗಿದೆ ಎಂದರು.
ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿಎಕೆರೆಗೆ 10 ಕ್ವಿಂಟಲ್‌ನಂತೆ ಗರಿಷ್ಟ 20 ಕ್ವಿಂಟಾಲ್‌ರಾಗಿಯನ್ನು ಖರೀಸಲಾಗುತ್ತದೆ. ರಾಗಿ ಖರೀದಿಕೇಂದ್ರಕ್ಕೆ ತರುವಾಗ ಎಫ್‌ಎಕ್ಯೂ ಗುಣಮಟ್ಟವನ್ನುಕಡ್ಡಾಯವಾಗಿ ಹೊಂದಿರಬೇಕು ಎಂದ ಅವರು,ರಾಗಿ ಖರೀದಿಯನ್ನು ಕರ್ನಾಟಕ ಆಹಾರ ಮತ್ತುನಾಗರಿಕ ಸರಬರಾಜು ನಿಗಮದ ಮೂಲಕರೈತರಿಂದ ಖರೀದಿಸಲು ಏಜೆನ್ಸಿಯಾಗಿ ನೇಮಕಮಾಡಲಾಗಿರುತ್ತದೆ. ಕೃಷಿ ಇಲಾಖೆಯಿಂದ ಪ್ರತಿಖರೀದಿ ಕೇಂದ್ರಗಳಲ್ಲಿ ಇಲಾಖೆಯ ಗ್ರೇಡರ್‌ಗಳನ್ನು ನೇಮಿಸಬೇಕು ಮತ್ತು ಸಂಗ್ರಹಣೆಗೆ ಅಗತ್ಯಗೋದಾಮುಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲುಸೂಚನೆ ನೀಡಿದರು.
ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜುಇಲಾಖೆ ಜಂಟಿ ನಿರ್ದೇಶಕ ಶಿವಣ್ಣ, ಕೃಷಿ ಇಲಾಖೆಜಂಟಿ ಕೃಷಿ ನಿರ್ದೇಶಕ ಡಾ| ಪಿ.ರಮೇಶಕುಮಾರ್,ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್ ಸೇರಿದಂತೆ ವಿವಿಧಇಲಾಖೆಯ ಜಿಲ್ಲಾಮಟ್ಟದ ಅ ಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.