ಮಂಗಳೂರಿನಲ್ಲಿ ಏಕಾಏಕಿ 5 ಮಂದಿಯಲ್ಲಿ ಒಮಿಕ್ರಾನ್ ದೃಢ
Team Udayavani, Dec 18, 2021, 6:30 PM IST
ಮಂಗಳೂರು : ನಗರದ ಎರಡು ಶಿಕ್ಷಣ ಸಂಸ್ಥೆಗಳ ಕೋವಿಡ್ನ ಎರಡು ಕ್ಲಸ್ಟರ್ ಗಳಲ್ಲಿ ಏಕಾಏಕಿ ಐವರಲ್ಲಿ
ಒಮಿಕ್ರಾನ್ ದೃಢ ಪಟ್ಟಿದೆ.
ಈ ಬಗ್ಗೆ ಅರೋಗ್ಯ ಸಚಿವ ಡಾ.ಸುಧಾಕರ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಕ್ಲಸ್ಟರ್ 1 ರಲ್ಲಿ ಪರೀಕ್ಷೆಗೊಳಗಾದ 14 ಪ್ರಕರಣಗಳಲ್ಲಿ 4 ಮಂದಿಗೆ ಒಮಿಕ್ರಾನ್ ದೃಢ ವಾಗಿದ್ದು, ಕ್ಲಸ್ಟರ್ 2 ರಲ್ಲಿ ಪರೀಕ್ಷೆಗೊಳಗಾದ 19 ಪ್ರಕರಣಗಳಲ್ಲಿ 1 ಒಮಿಕ್ರಾನ್ ದೃಢ ಪಟ್ಟಿದೆ.
ರಾಜ್ಯಕ್ಕೆ ಯುಕೆ ಯಿಂದ ಬಂದ ಒಬ್ಬ ಪ್ರಯಾಣಿಕ ನಲ್ಲೂ ಒಮಿಕ್ರಾನ್ ದೃಢ ಪಟ್ಟಿದೆ ಎಂದು ಸಚಿವರು ಟ್ವೀಟ್ ನಲ್ಲಿ ಬರೆದಿದ್ದಾರೆ.
ಮೊದಲ ಕ್ಲಸ್ಟರ್ ನಲ್ಲಿ 16 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು, ಜಿನೋಮಿಕ್ ಪರೀಕ್ಷೆಗಾಗಿ ಮಾದರಿಗಳನ್ನು ಡಿಸೆಂಬರ್ 10 ರಂದು ಕಳುಹಿಸಲಾಗಿತ್ತು, ಇಂದು ನಾಲ್ವರಿಗೆ ಒಮಿಕ್ರಾನ್ ಪಾಸಿಟಿವ್ ಎಂದು ಉಲ್ಲೇಖಿಸಿದ ವರದಿಯನ್ನು ಸ್ವೀಕರಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಎಲ್ಲಾ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ.
ನರ್ಸಿಂಗ್ ಕಾಲೇಜಿನಿಂದ ಡಿಸೆಂಬರ್ 9 ರಂದು ವರದಿಯಾದ ಮತ್ತೊಂದು ಕ್ಲಸ್ಟರ್ ನಲ್ಲಿ 19 ಪ್ರಕರಣಗಳು ವರದಿಯಾಗಿದ್ದವು, ಜೀನೋಮಿಕ್ ಪರೀಕ್ಷೆಗಾಗಿ ಮಾದರಿಗಳನ್ನು ಡಿಸೆಂಬರ್ 10 ರಂದು ಕಳುಹಿಸಲಾಗಿತ್ತು, ಆ ಪೈಕಿ 1 ವಿದ್ಯಾರ್ಥಿನಿಗೆ ದೃಢಪಟ್ಟಿದ್ದು, ಆಕೆಯೂ ಆರೋಗ್ಯವಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚುವಿಕೆಯ ಪ್ರಕಾರ ಯಾರಿಗೂ ವಿದೇಶ ಪ್ರಯಾಣದ ಇತಿಹಾಸವಿಲ್ಲ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.