ಮಕ್ಕಳೇ ನಿಂತು ಅಮ್ಮನ ಮದುವೆ ಮಾಡಿದರು : ಟ್ವಿಟರ್ ನಲ್ಲಿ ಫೋಟೋ ಹಂಚಿಕೊಂಡ ಮಗಳು
Team Udayavani, Dec 18, 2021, 9:00 PM IST
ಮುಂಬೈ : ಮಕ್ಕಳಿಗೆ ಅಪ್ಪ-ಅಮ್ಮ ಮದುವೆ ಮಾಡುವುದು ಸಾಮಾನ್ಯ. ಆದರೆ ಇಲ್ಲೊಂದು ಕುಟುಂಬದಲ್ಲಿ ಮಗ ಮತ್ತು ಮಗಳು ಸೇರಿಕೊಂಡು ಅಮ್ಮನಿಗೇ ಮದುವೆ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಮೊಮ್ಮಿ(mommy) ಹೆಸರಿನ ಖಾತೆ ಹೊಂದಿರುವ ಯುವತಿ ತನ್ನ ಅಮ್ಮನ ಮದುವೆಯ ಕುರಿತಾಗಿ ಇಂಚಿಂಚು ಮಾಹಿತಿಯನ್ನು ಹಂಚಿಕೊಂಡಿದ್ದಾಳೆ.
“ನಾನು ಮತ್ತು ನನ್ನ 16 ವರ್ಷದ ತಮ್ಮ ಮೊದಲು ಅಮ್ಮನ ಮದುವೆಗೆ ಒಪ್ಪಿರಲಿಲ್ಲ. ಆದರೆ ಈಗ ಖುಷಿಯಿಂದ ಕುಟುಂಬಕ್ಕೆ ಅಪ್ಪನನ್ನು ಸ್ವಾಗತಿಸುತ್ತಿದ್ದೇವೆ’ ಎಂದು ಆಕೆ ಬರೆದುಕೊಂಡಿದ್ದಾಳೆ.
ಆಕೆಯ ತಾಯಿ 15 ವರ್ಷಗಳ ಹಿಂದೆ ಮೊದಲ ಪತಿಯಿಂದ ಬೇರಾಗಿದ್ದಾಗಿಯೂ ಆಕೆ ತಿಳಿಸಿದ್ದಾಳೆ. ಅಮ್ಮನ ಮೆಹಂದಿ ಕಾರ್ಯಕ್ರಮ, ನಿಶ್ಚಿತಾರ್ಥ, ವರಮಾಲೆ ಹೀಗೆ ಪ್ರತಿಯೊಂದನ್ನೂ ಆಕೆ ಟ್ವಿಟರ್‌ನಲ್ಲಿ ಅತ್ಯಂತ ಭಾವುಕವಾಗಿ ಹಂಚಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗಿವೆ.
can’t believe mom is getting married GURL U SLAYY pic.twitter.com/Jo5LwlTlRb
— mommy (@alphaw1fe) December 15, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.