ಒಂದೇ ನಂಬರಿನಿಂದ 20 ಕೋಟಿ ಸ್ಪ್ಯಾಮ್ ಕರೆ! ಟ್ರೂಕಾಲರ್ ವರದಿಯಲ್ಲಿ ಬಯಲು
ದಿನವೊಂದಕ್ಕೆ 6.64 ಲಕ್ಷ ಕರೆ ಮಾಡುತ್ತಿರುವ ಸಂಖ್ಯೆ
Team Udayavani, Dec 18, 2021, 9:15 PM IST
ನವದೆಹಲಿ: ಒಂದು ದಿನದಲ್ಲಿ ನೀವು ಎಷ್ಟು ಕರೆ ಮಾಡಬಹುದು? ಹತ್ತಿರಿಂದ 20 ಎಂದುಕೊಳ್ಳಬಹುದು. ಆದರೆ ನಮ್ಮ ದೇಶದಲ್ಲಿ ಒಂದು ಸ್ಪ್ಯಾಮ್ ನಂಬರ್ ಈ ವರ್ಷಾರಂಭದಿಂದ ಅಕ್ಟೋಬರ್‌ವರೆಗೆ ಬರೋಬ್ಬರಿ 20.20 ಕೋಟಿ ಕರೆ ಮಾಡಿದೆ.
ಟ್ರೂಕಾಲರ್ ಬಿಡುಗಡೆ ಮಾಡಿರುವ ವರದಿಯಿಂದ ಈ ಅಂಶ ಬೆಳಕಿಗೆ ಬಂದಿದೆ.
ಅದೊಂದೇ ಸಂಖ್ಯೆಯಿಂದ ಪ್ರತಿದಿನ 6.64 ಲಕ್ಷ ಕರೆ ಹೋಗುತ್ತಿದೆ. ಗಂಟೆಗೆ 27000 ಮಂದಿಗೆ ಕರೆ ಹೋಗುತ್ತಿದೆ. ಸಾಮಾನ್ಯವಾಗಿ ಸ್ಪ್ಯಾಮ್ ಸಂಖ್ಯೆಗಳನ್ನು ಪತ್ತೆ ಹಚ್ಚಿ ಅದನ್ನು ಬ್ಲಾಕ್ ಮಾಡುವ ಕೆಲಸವನ್ನು ಟ್ರೂಕಾಲರ್ ಮಾಡುತ್ತದೆಯಾದರೂ ಈ ಸಂಖ್ಯೆಯ ಮೂಲವನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:ವ್ಯಕ್ತಿಯನ್ನು ಕೊಂದು ಗ್ರಾಮದಲ್ಲೇ ಹೂತಿಟ್ಟರು : ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ
ಸ್ಪ್ಯಾಮ್ ಕರೆ: ಭಾರತ ನಂ.4
ಜನಸಾಮಾನ್ಯರು ಅತಿ ಹೆಚ್ಚು ಸ್ಪ್ಯಾಮ್ ಕರೆ ಸ್ವೀಕರಿಸುವ ದೇಶವೆಂದರೆ ಅದು ಬ್ರೆಜಿಲ್. ಅಲ್ಲಿ ಪ್ರತಿ ಮೊಬೈಲ್‌ಗೆ ತಿಂಗಳಿಗೆ ಸರಾಸರಿ 32.9 ಸ್ಪ್ಯಾಮ್ ಕರೆಗಳು ಬರುತ್ತವೆಯಂತೆ.
ಈ ಪಟ್ಟಿಯಲ್ಲಿ ಪೆರು ಎರಡನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿ ಭಾರತವಿದ್ದು, ದೇಶದಲ್ಲಿ ಪ್ರತಿ ತಿಂಗಳಿಗೆ ಮೊಬೈಲ್ ಒಂದಕ್ಕೆ ಸರಾಸರಿ 17 ಸ್ಪ್ಯಾಮ್ ಕರೆಗಳು ಬರುತ್ತವೆಯಂತೆ. ಭಾರತದಲ್ಲಿ ಸ್ಪ್ಯಾಮ್ ಸಂಖ್ಯೆಗಳ ಮೊದಲ ಸಾಲಿನಲ್ಲಿ ಟೆಲಿ ಮಾರ್ಕೆಟಿಂಗ್ ಸಂಸ್ಥೆಗಳಿವೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pune: 300ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿ ಟೆಸ್ಲಾದಲ್ಲಿ ಉದ್ಯೋಗ ಪಡೆದ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Statue Of Unity: ದೇಶ ವಿಭಜಿಸಲು ಕೆಲವು ಶಕ್ತಿಗಳ ಯತ್ನ: ಪ್ರಧಾನಿ ನರೇಂದ್ರ ಮೋದಿ
India-China Border: ಉಭಯ ಸೇನಾ ವಾಪಸಾತಿ ಬೆನ್ನಲ್ಲೇ ಎಲ್‌ಎಸಿಯಲ್ಲಿ ಗಸ್ತು ಪುನಾರಂಭ
TPG Passes Away: ಬಿಪಿಎಲ್ ಸಮೂಹ ಸಂಸ್ಥೆ ಸ್ಥಾಪಕ ಟಿ.ಪಿ.ಗೋಪಾಲನ್ ನಂಬಿಯಾರ್ ನಿಧನ
MUST WATCH
ಹೊಸ ಸೇರ್ಪಡೆ
Pune: 300ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿ ಟೆಸ್ಲಾದಲ್ಲಿ ಉದ್ಯೋಗ ಪಡೆದ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.