“ಫುಟ್ ವಾಲಿ’ ಆಡಿ ಅಭ್ಯಾಸ ಆರಂಭಿಸಿದ ಭಾರತ
Team Udayavani, Dec 19, 2021, 5:50 AM IST
ಸೆಂಚುರಿಯನ್: ದಕ್ಷಿಣ ಆಫ್ರಿಕಾದಲ್ಲಿ ಒಂದು ದಿನದ ಐಸೊಲೇಶನ್ ಪೂರೈಸಿದ ಟೀಮ್ ಇಂಡಿಯಾ ಕ್ರಿಕೆಟಿಗರು ಶನಿವಾರ ಮೊದಲ ಹಂತದ ಅಭ್ಯಾಸ ನಡೆಸಿದರು.
ಹೊರಾಂಗಣದಲ್ಲಿ ಫುಟ್ ವಾಲಿ ಆಡಿ ಗಮನ ಸೆಳೆದರು. ಬಿಸಿಸಿಐ ಇದರ ವೀಡಿಯೋ ಒಂದನ್ನು ಬಿಡುಗಡೆ ಮಾಡಿದೆ.
“ಭಾರತ ತಂಡದ ಆಟಗಾರರ ಮುಂದೆ ನಾವು ಬಹಳಷ್ಟು ಕ್ರೀಡೆಗಳ ಆಯ್ಕೆ ನೀಡಿದ್ದೆವು. ಅವರು ಫುಟ್ ವಾಲಿಯನ್ನೇ ಆಯ್ದುಕೊಂಡರು. ಇದು ಈಗ ಇಂಡಿಯಾ ಕ್ರಿಕೆಟ್ ಟೀಮ್ ಗೇಮ್ ಎಂದೇ ಕರೆಯಲ್ಪಡುತ್ತಿದೆ’ ಎಂದು ಭಾರತ ತಂಡದ ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಹೇಳಿದರು.
“ನಾವಿಲ್ಲಿ ಸಮುದ್ರ ಮಟ್ಟಕ್ಕಿಂತ ಬಹಳಷ್ಟು ಎತ್ತರದಲ್ಲಿದ್ದೇವೆ. ಹೀಗಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು 2-3 ದಿನ ಬೇಕಾಗುತ್ತದೆ’ ಎಂದರು.
ಪ್ರತ್ಯೇಕ ರೆಸಾರ್ಟ್ ವ್ಯವಸ್ಥೆ
ಮುಂಬಯಿಯಲ್ಲಿ 3 ದಿನಗಳ ಕಠಿನ ಕ್ವಾರಂಟೈನ್ಗೆ ಒಳಗಾದ ಬಳಿಕ ಭಾರತ ತಂಡ 10 ಗಂಟೆಗಳ ಸುದೀರ್ಘ ಪ್ರಯಾಣ ನಡೆಸಿ ಜೊಹಾನ್ಸ್ಬರ್ಗ್ಗೆ ಬಂದಿಳಿದಿತ್ತು. ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಕಾಟ ಇರುವುದರಿಂದ ಅತ್ಯುತ್ತಮ ಹಾಗೂ ಅತ್ಯಂತ ಕಠಿನವೆನಿಸಿದ ಜೈವಿಕ ಸುರಕ್ಷತೆಯನ್ನು ಹೊಂದಿರುವ ಪ್ರತ್ಯೇಕ ರೆಸಾರ್ಟ್ ಒಂದನ್ನು ಟೀಮ್ ಇಂಡಿಯಾಕ್ಕೆ ವ್ಯವಸ್ಥೆ ಮಾಡಲಾಗಿದೆ.
ಡಿ. 26ರಂದು ಸೆಂಚುರಿಯನ್ನಲ್ಲೇ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC World Rankings: ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ ಬುಮ್ರಾ ಮರಳಿ ನಂ.1
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
IPL Auction: 27 ಕೋ. ರೂ. ಒಡೆಯ ರಿಷಭ್ ಪಂತ್ಗೆ ಸಿಗುವುದು 18.90 ಕೋಟಿ ಮಾತ್ರ!
IPL Auction: ಗುಜರಾತ್ ಟೈಟಾನ್ಸ್ ಪಾಲಾದ ಸಿರಾಜ್; ಆರ್ಸಿಬಿಗೆ ಹೃದಯಸ್ಪರ್ಶಿ ಸಂದೇಶ
Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್ಗೆ ಸೋಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ ಬುಮ್ರಾ ಮರಳಿ ನಂ.1
Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ
Udupi: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.