ಬೆಳ್ಗಾವ್ ಸಾವ್‌ಕಾರ್ ಮಾಲೀಕ್ ನಿಮ್ದೂಕೆ ವೇಸ್ಟ್ ಪಿಗರ್ ಅಂದಾ ಹುಲಿಯಾ
Team Udayavani, Dec 19, 2021, 10:54 AM IST
ಅಮಾಸೆ: ನಮ್‌ಸ್ಕಾರ ಸಾ…
ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ
ಅಮಾಸೆ: ಬೆಳ್ಗಾವಿ ಇದಾನ್‌ಸೌದಾನಾಗೆ ಸೆಸನ್ ನಡೀತೈತಲ್ವಾ ಅದ್ಕೆ ಒಂದ್‌ರೌಂಡ್ ಹಾಕ್ಕಂಡ್ ಬರೂಮಾ ಅಂತಾ ಒಂಟೋಗಿದ್ದೆ
ಚೇರ್ಮನ್ರು: ಏನ್ಲಾ ಇಸೇಸಾ ಸೆಸನ್‌ನಾಗೆ
ಅಮಾಸೆ: ಎಂತದ್ದೂ ಇಲ್ಲಾ ಸಾ.. ಓನ್ಲಿ ಟಾಕ್‌ವಾರ್
ಚೇರ್ಮನ್ರು: ಅದ್ಯಾಕ್ಲಾ ಸಿಎಮ್ಮು ಇಬ್ರಾಹಿಮ್ಮು ಸಾಹೇಬ್ರು ರಾಯಣ್ಣಾ ಬ್ರಿಗೇಡ್ ಈಸ್ವರಪ್ನೊರ್ ಮ್ಯಾಗೆ ಯಾಕ್ಲಾ ರೈಸ್ ಆಗಿದ್ರು
ಅಮಾಸೆ: ಫಾರ್ಟಿ ಪರ್ಸೆಂಟ್ ಕಮೀಸನ್ ಇಚಾರ್‌ದಾಗೆ ಡಿಸ್ ಕಸನ್‌ಗೆ ಕೊಡ್ಬೇಕು ಅಂತಾ ಸೆಂಟ್ ಘಮ್ಲು ಇಬ್ರಾಹಿಮ್ಮು ಸಾಹೇಬ್ರು ಎದ್‌ನಿಂತ್ಕಂಡ್ರು. ಅದ್ಕೆ ಈಸ್ವರಪ್ನೊರು ರಾಂಗ್ ಆಗೋಗಿ ರೋಲೆಕ್ಸ್ ವಾಚ್ ವ್ಯವಾರ ಮಾಡ್ಡೋರು ಅಂತಾ ಅಲಿಗೇಸನ್ ಮಾಡಿದ್ರು
ಚೇರ್ಮನ್ರು: ಇಬ್ರಾಹಿಂ ಸಾಹೇಬ್ರು ಸುಮ್ಕಾದ್ರಾ
ಅಮಾಸೆ: ಸುಮ್ಕಾಗೋ ಆಸಾಮೀನಾ ಅವ್ರ್. ಮುರುಗ್ ಮಲ್ಲಾ ದರ್ಗಾನಾಗೆ ದೇವ್ರು ಮೈಮಾಗೆ ಬಂದಂತೆ ಏ ಈಸ್ವರಪ್ಪಾ ನಾನ್ ಮಿನಿಸ್ಟು ಆದಾಗ್ ನೀನ್ ಹುಟ್ಟೇ ಇರ್ ಲಿಲ್ಲಾ ಸುಮ್ಕೆ ಕುಂದ್ರು, ಮನ್ಯಾಗ ರೊಕ್ಕಾ ಎಣ್ಸೋ ಮಿಸಿನ್ ಇಟ್‌ಕೊಂಡೋನ್ ನೀನ್ ಅಂತಾ ದಬಾಯ್ಸಿದ್ರು
ಚೇರ್ಮನ್ರು: ಸಿದ್ರಾಮಣ್ಣೋರು ಟಿಪ್ಸ್ ಕೊಟ್ರಂತೆ
ಅಮಾಸೆ: ಹೌದೇಳಿ, ಸಿಎಲ್ಪಿ ಮೀಟಿಂಗ್‌ನಾಗೆ ಇಬ್ರಾಹಿಮ್ಮು ಸಾಹೇಬ್ರು ಮ್ಯಾಟರ್ ರೀಕಾಲ್ ಮಾಡ್ದೇಟ್ಗೆ ಸಿದ್ರಾಮಣ್ಣೋರು ಸಾಬಾಸ್‌ಗಿರಿ ಕೊಟ್ರಾ. ಆ ಈಸ್ವರಪ್ಪನ್‌ಗೆ ಚೆನ್ನಾಗ್ ಜಾಡ್ಸ್ ಬೇಕಿತ್ತು. ನಾನ್ ರಾಜ್‌ಕೀಯ್ಕೆ ಬಂದಾಗ ನೀನ್ ಹುಟ್ಟೇ ಇರ್ಲಿಲ್ಲಾ ಅಂತಾ ಹೇಳ್ಬೇಕಿತ್ತು ಅಂತಾ ಟಿಪ್ಸ್ ಕೊಟ್ರಾ
ಚೇರ್ಮನ್ರು: ಸಿಎಮ್ ಇಬ್ರಾಹಿಮ್ಮು ಕೌನ್ಸಿಲ್‌ನಾಗೆ ಆಪೋಜಿಸನ್ ಲೀಡ್ರು ಆಗ್ತಾರಂತೆ ಹೌದೇನ್ಲಾ
ಅಮಾಸೆ: ಟ್ರೈ ಮಾಡ್ತಾವ್ರೆ. ಕೈ ಪಾಲ್ಟಿಗೆ ಹ್ಯಾಂಡ್ ಕೊಟ್‌ಬುಟ್ಟಿ ತೆನೆ ಸೇರೋ ಪಿಲಾನ್‌ನಾಗೆ ಇದ್ರು. ಇತ್ಲಾಗ್ ಬಿಜಾಪುರ್ ಸಾವ್‌ಕಾರ್ ಪಾಟೀಲ್ ಸಾಹೇಬ್ರುದು ಟರ್ಮ್ ಮುಗಿತೈತೆ ಅಂತಾ ಪಸರ್ ಸಿಕ್‌ದೇಟ್ಗೆ ನೋಡುಮಾ ಅಂತಾ ಟವಲ್ ಹಾಕವ್ರೆ. ಸಿದ್ರಾಮಣ್ಣೋರ್ ತಾವಾ, ಡಿಕೆ ಸಿವ್‌ಕುಮಾರ್ ತಾವಾ ಅಪ್ಲಿಕೇಸನ್ ಹಾಕಿ ಕಾಂಗ್ರೆಸ್ ನಮ್ ಮನ್ ದೇವ್ರು ಅಂತಾ ಸಿನ್ಮಾ ತೋರ್ತಾವ್ರೆ
ಚೇರ್ಮನ್ರು: ಎಮ್‌ಎಲ್ಸಿ ಎಲೆಕ್ಸನ್‌ನಾಗೆ ಬೆಳ್ಗಾವಿನಾಗೆ ಕಮ್ಲ ಯಾಕ್ಲಾ ದಬ್ಟಾಕೋತು
ಅಮಾಸೆ: ಬೆಳ್ಗಾವಿ ಒಂದ್ರಾಗೆ ಅಲ್ಲಾ ಹುಬ್ಲಿ, ಬಿಜಾಪುರ್ ನಾಗೂ ಇನ್ನರ್ ಪಾಲಿಟಿಕ್ಸ್ ಹೊಡ್ತ ಕೊಟ್ಟೆತೆ. ರಮೇಶ್ ಜಾರ್ಕಿಹೊಳಿ ಸಾವ್‌ಕಾರ್ರು ಬ್ರದರ್ ಲಖನ್ ಗೆಲ್ಸಿ ಕಮ್ಲ ಕವಟ್ಗಿಗೆ ಹ್ಯಾಂಡ್ ಕೊಟ್ರಂತೆ. ಆದ್ರೆ ಇದೆಲ್ಲಾ ಡಿಕೆ ಗೇಮ್ ಅಂತಾ ಲಖನ್ ಸಾವ್‌ಕಾರ್ರು ಪಸರ್ ಕೊಟ್ರಾ. ಅದ್ಕೆ ಡಿಕೆ ಸಿವ್‌ಕುಮಾರ್ ಸಾಹೇಬ್ರು, ಯಾರ್ರಿ ಸಾವ್‌ಕಾರ್ ನನ್ ಕಾಂಪೌಂಡ್‌ಗೂ ಸಮಾ ಇಲ್ಲಾ ಅಂತಾ ಆವಾಜ್ ಹಾಕಿದ್ರಂತೆ
ಚೇರ್ಮನ್ರು: ರಮೇಸ್ ಜಾರ್ಕಿಹೊಳಿ ಯಾಕ್ಲಾ ಸಿದ್ರಾಮಣ್ಣೋರ್ಗೆ ವೇಸ್ಟ್ ಬಾಡಿ ಅಂತೇಳಿದ್ರು
ಅಮಾಸೆ: ಎಂಎಲ್ಸಿ ಎಲೆಕ್ಸನ್‌ನಾಗೆ ನೀವ್ ಕ್ಯಾನ್ವಾಸ್‌ಗೆ ಬರ್ ಬ್ಯಾಡಿ. ಹೆಬ್ಟಾಳ್ಕರ್ ಬ್ರದರ್‌ಗೆ ಮಾಂಜಾ ಕೊಡ್ತೀನಿ ಅಂತಾ ಹೇಳಿದ್ರಂತೆ. ಆದ್ರೆ ಸಿದ್ರಾಮಣ್ಣೋರು ಅದೆಲ್ಲಾ ಆಗಾಕಿಲ್ಲಾ ಅಂತಾ ಕ್ಯಾನ್ವಾಸ್ ಮಾಡಿದ್ರಂತೆ. ಅದ್ಕೆ ಕ್ವಾಪಾ ಮಾಡ್ಕಂಡು ಅಂಗಂದವ್ರೆ
ಚೇರ್ಮನ್ರು: ಸಿದ್ರಾಮಣ್ಣೋರು ಸುಮ್ಗೆ ಇದ್ರಾ
ಅಮಾಸೆ: ಅವ್ನೊಬ್ಬ ತಿಕ್ಲಾ, ಒಂದಪಾ ಗುರು ಅಂತಾನೆ, ಇನ್ನೊಂದಪಾ ಇಂಗ್ ಮಾತಾಡ್ತಾನೆ. ಸೀರಿಯಸ್‌ನೆಸ್ ಇಲ್ಲಾ ಇಮ್ಮೆಚೂರ್ ಪೂರ್ ಫೆಲೋ ಬುಡ್ರಿ. ಐವತ್‌ವರ್ಷ್‌ದಾಗೆ ಇಂತೋರ್ ಬೇಜಾನ್ ಇತ್ಲಾಗೆ ಅತ್ಲಾಗೆ ಒಂಟೋಗವ್ರೆ ಇವನ್ಯಾವ್ ಪುಂಗ್‌ನೂರ್ ಹೋಗ್ರಿ ಅಂತೇಳಿದ್ರಂತೆ
ಚೇರ್ಮನ್ರು: ಬುದ್ವಂತ ಬಸಣ್ಣೋರು ಎಂಗವ್ರೆ
ಅಮಾಸೆ: ಎಮ್‌ಎಲ್ಸಿ ಎಲೆಕ್ಸನ್‌ನಾಗೆ ಫಿಪ್ಟೀನ್ ಸೀಟ್ ಗ್ಯಾರೆಂಟಿ ಅಂತಾ ಡ್ರೀಮ್‌ನಾಗ್ ಇದ್ರು. ಆದ್ರೆ ಇಲೆವೆನ್ ಬಂದೇಟ್ಗೆ ಟೆನ್ ಸನ್ ಆಗವ್ರಂತೆ. ಕ್ಯಾಬಿನೆಟ್‌ನಾಗ್ ಇರೋರೆ ನ್ಯೂ ಇಯರ್‌ಗೆ ಸಿಎಮ್ ಚೇಂಜ್ ಆಯ್ತಾರೆ ಅಂತಾ ಎಲ್ರೂಕೂ ಹೇಳ್ಕಂಡ್ ಬತ್ತಾವ್ರೆ ಅಂತಾ ರಾಜರಾಹುಲಿ ತಾವಾ ಕಂಪ್ಲೆಂಟ್ ಹೇಳಿದ್ರಂತೆ.
ಚೇರ್ಮನ್ರು: ಅದ್ಕೆ ಯಡ್ನೂರಪ್ನೋರು ಏನ್ ಹೇಳಿದ್ರಂತೆ
ಅಮಾಸೆ: ಡೋಂಟ್ ವರಿ ಮೈ ಹೂಂನಾ ಅಂತಾ ಟಾನಿಕ್ ಕೊಟ್‌ಬುಟ್ಟು, ಮೈ ಸನ್ ವಿಜಯೇಂದ್ರ ಬಾಹುಬಲಿನಾ ಮಿನಿಸಟ್ರಾ ಮಾಡ್‌ಬುಡು ಎಲ್ಲಾ ಸರೋಯ್ತದೆ. ನಿನ್ ತಂಟೇಗ್ ಯಾರೂ ಬರಾಕಿಲ್ಲಾ ಅಂತಾ ಹೇಳಿದ್ರಂತೆ.
ಚೇರ್ಮನ್ರು: ಸಿಎಮ್ಮು ಒಪ್‌ಕಂಡ್ರಂತಾ
ಅಮಾಸೆ: ಬುದ್ವಂತ ಬಸಣ್ಣೋರು ಒಪ್ಕೋತಾರಾ. ನೀವೇ ಒಂದಪಾ ಪಾಲ್ಟಿ ಚೇರ್ಮನ್ ನಡ್ಡಾ , ಹೆಡ್‌ಮಾಸ್‌ಟ್ರಾ ಅಮಿತ್‌ಸಾ ಅಣ್ಣೋರ್ ತಾವಾ ಮಾತಾಡ್‌ಬುಡಿ ಅಂತೇಳಿ ಹಲ್ವಾ ಕೊಟ್ರಂತೆ
ಚೇರ್ಮನ್ರು: ರಾಜಗುರು ರಮೇಶ್ ಕುಮಾರ್‌ಗಾರು ಯಾಕ್ಲಾ ಅಗೇಳವ್ರೆ
ಅಮಾಸೆ: ಅದು ಅಂಗೇಯ ಜೋಶ್‌ನಾಗೆ ಹೇಳ್‌ಬುಟ್ಟು ಹೆಣ್ ಮಕ್ಳು ಜಾಡ್ಸಿದ್ ಮ್ಯಾಕೆ ಸಾರಿ ಐ ಆ್ಯಮ್ ವೆರಿ ಸಾರಿ ಅಂತಾ ಕ್ಷಮಾಪ್ನೆ ಕೇಳವ್ರೆ
ಚೇರ್ಮನ್ರು: ಕುಮಾರಣ್ಣೋರು ಯಾಕ್ಲಾ ಬೆಳ್ಗಾವಿನಾಗ್ ಕಾಣ್ಸಿಲಿಲ್ಲ
ಅಮಾಸೆ: ಅವ್ರು ಡೆಲ್ಲಿನಾಗೆ ಪೊಲಿಟಿಕಲ್ ಕ್ಯಾಲುಕ್ಲೇಸನ್ ಮಾಡ್ತಾವ್ರೆ ಅಂತಾ ತೆನೆ ಹೈಕ್ಲು ಹೇಳ್ತಾವ್ರೆ. ನೋಡುಮಾ ಏನ್ ಆಯ್ತದೋ. ನನ್ ಹೆಂಡ್ರು ಬೋಟಿ ತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ…
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್
MUST WATCH
ಹೊಸ ಸೇರ್ಪಡೆ
Kasaragod: ಅಪರಾಧ ಸುದ್ದಿಗಳು
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.