ರೈತರಿಗೆ ಅರಣ್ಯ ಇಲಾಖೆ ಭಯ: ಸಚಿವರಿಂದ ಅಭಯ
Team Udayavani, Dec 19, 2021, 2:40 PM IST
ಚಿಕ್ಕನಾಯಕನಹಳ್ಳಿ: ನೂರಾರು ಎಕರೆ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿದೆ. ಮನೆ, ಆಸ್ತಿ ಕೈತಪ್ಪಿ ಹೋಗುತ್ತದೆ. ಹೈಕೋರ್ಟ್ ಅರಣ್ಯ ಇಲಾಖೆಗೆ ಸದರಿ ಜಮೀನನ್ನು ವಶಪಡಿಸಿಕೊಳ್ಳಲು ಆದೇಶಿಸಿದೆ. ಇದರಿಂದ ಕಸಬಾ ಹಾಗೂ ಶೆಟ್ಟಿಕೆರೆ ಹೋಬಳಿಯ ಸುಮಾರು 10 ಹಳ್ಳಿಗಳ ಜನರಲ್ಲಿ ಅತಂಕ ಮನೆಮಾಡಿದೆ. ಉಪವಿಭಾಗಾಧಿಕಾರಿ ಪರಿಶೀಲನೆ ಮಾಡುತ್ತಾರೆ, ಅತಂಕ ಬೇಡ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಧೈರ್ಯ ತುಂಬಿದ್ದಾರೆ.
ತಾಲೂಕಿನ ಹೊಸಹಳ್ಳಿ, ಹೊನ್ನೇಬಾಗಿ, ಗೊಲ್ಲರಹಟ್ಟಿ, ಬುಳ್ಳೇನಹಳ್ಳಿ, ಮಂಚೇಕಟ್ಟೆ, ಬಗ್ಗನಹಳ್ಳಿ, ಸೊಂಡೇ ನಹಳ್ಳಿ ಸೇರಿದಂತೆ ವಿವಿಧ ಗ್ರಾಮದಲ್ಲಿನ ಸುಮಾರು 3,600 ಎಕರೆ ಜಮೀನನ್ನು ಅರಣ್ಯ ಇಲಾಖೆಯ ಕೋರಿಕೆಯಂತೆ ಹೈಕೋರ್ಟ್ ಅರಣ್ಯ ಇಲಾಖೆಗೆ ಸದರಿ ಜಮೀನನ್ನು ವಶಪಡಿಸಿಕೊಳ್ಳಲು ಆದೇಶ ನೀಡಿದೆ ಎಂಬ ಅತಂಕ ಇಲ್ಲಿನ ನಿವಾಸಿಗಳಲ್ಲಿ ಸೃಷ್ಟಿಯಾಗಿದ್ದು, ಜಮೀನುಗಳ ದಾಖಲಾತಿಗಳನ್ನು ಪಡೆದುಕೊಳ್ಳಲು ಕಚೇರಿಗೆ ಅಲೆದಾಡುತ್ತಿದ್ದಾರೆ.
ನೂರಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದ ಜಮೀನನ್ನು ಆರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತದೆ ಎಂಬ ಸುದ್ದಿ ಬಹುತೇಕ ರೈತ ಕುಟುಂಬಕ್ಕೆ ಬರ ಸಿಡಿಲು ಹೊಡೆದಂತಾಗಿದೆ. ಮುಂದಿನ ದಾರಿ ಯಾವುದು ಎಂಬ ಕಾಣದ ಉತ್ತರಕ್ಕೆ ರಾಜಕೀಯ ಪಕ್ಷದ ಮುಖಂಡರು ಹಾಗೂ ವಕೀಲರ ಮೊರೆಗೆ ಇಲ್ಲಿನ ನಿವಾಸಿಗಳು ಹೋಗುತ್ತಿದ್ದಾರೆ.
ಸಚಿವರಿಂದ ಅಭಯ, ಕೆಲ ರೈತರು ಸಮಾಧಾನ: ತಾಲೂಕಿನ ಜಾಣೇಹಾರು ಸೇರಿದಂತೆ ಸುಮಾರು 10 ಹಳ್ಳಿಯ ನಿವಾಸಿಗಳು ಅರಣ್ಯ ಇಲಾಖೆ ಜಮೀನನ್ನು ವಶಪಡಿಸಿಕೊಳ್ಳುವ ಬಗ್ಗೆ ಅತಂಕ ಇರುವುದು ನನ್ನಗಮನಕ್ಕೆ ಬಂದಿದೆ. ಕೆಲವರು ಈ ವಿಷಯವನ್ನು ಇಟ್ಟುಕೊಂಡು ಜನರನ್ನು ಪ್ರಚೋದನೆ ಮಾಡುತ್ತಿದ್ದಾರೆ. ರೈತರು ಅತಂಕಪಡುವ ಅವಶ್ಯವಿಲ್ಲ. ಸರ್ಕಾರದ ಮಟ್ಟದಲ್ಲಿ ದಾಖಲಾತಿಗಳನ್ನು ತರಿಸಿಕೊಂಡು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಲಾಗಿದೆ. ಉಪವಿಭಾಗಾಧಿಕಾರಿಗಳೇ
ಪಾರೆಸ್ಟ್ ಸೆಟಲ್ಮೆಂಟ್ ಆಫೀಸರ್ ಆಗಿದ್ದು, ಇವರು ಯಾರು ನಿಜವಾದ ರೈತರಿದ್ದಾರೆ. ಕಾನೂನು ಬದ್ಧವಾಗಿ ಜಮೀನು ಮಂಜೂರು ಆಗಿದೆ ಎಂಬುವುದರ ಬಗ್ಗೆ ಪರೀಶಿಲನೆ ನಡೆಸುತ್ತಾರೆ. ಎಸಿ ಸಭೆಗಳನ್ನು ನಡೆಸಿ,ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಿ ಎಂದು ತಿಳಿಸಲಾಗಿದೆ. ಎಸಿ ವರದಿ ಆಧಾರದ ಮೇಲೆ ಜಮೀನನ್ನು ರೈತರಿಗೆ ಬಿಡುವುದು, ವಶಪಡಿಸಿಕೊಳ್ಳುವ ಎಲ್ಲಾ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ರೈತರು ವಿನಾಃ ಕಾರಣ ಆತಂಕಕ್ಕೆ ಒಳಗಾಗಬೇಡಿ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ.
ನೂರಾರು ಜನ ಸಚಿವರಿಗೆ ಮನವಿ: ಕೆಲ ದಿನಗಳ ಹಿಂದೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಿಲಿಟರಿ ಶಿವಣ್ಣ ನೇತೃತ್ವದಲ್ಲಿ 600ಕ್ಕೂ ಹೆಚ್ಚು ರೈತರು ಸಚಿವ ಜೆ.ಸಿ.ಮಾಧುಸ್ವಾಮಿ ಬಳಿ ತೆರಳಿ ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತಿರುವ ಜಾಗವನ್ನು ಉಳಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದು, ಸಚಿ ವರು ಅರ್ಹ ಫಲಾನುಭವಿಗಳ ಜಮೀನು ವಶವಾಗು ವುದಿಲ್ಲ ಎಂದು ಸಚಿವರು ರೈತರಿಗೆ ಅಭಯ ನೀಡಿದ್ದಾರೆ.
ವಶವಾದರೇ ಸಾವಿರಾರು ಮಂದಿ ಬೀದಿಪಾಲು: ಸಾವಿರಾರು ಎಕರೆ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಮುಂದಾದರೆ, ನೂರಾರು ಕುಟುಂಬಗಳು ಬೀದಿಪಾಲಾಗುತ್ತವೆ. ಈ ಭಾಗದ ಬಹುತೇಕ ಜನರು ಕೃಷಿಯನ್ನು ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದು, ಜೀವನಕ್ಕೆ ಜಮೀನುಗಳನ್ನೇನಂಬಿಕೊಂಡಿದ್ದಾರೆ. ಅಲ್ಪ ಲಾಭದ ಕೃಷಿಯಲ್ಲಿಯೇಜೀವನ ಕಟ್ಟಿಕೊಂಡಿದ್ದಾರೆ. ಸಾಲ ಮಾಡಿ ಜಮೀನುಗಳಲ್ಲಿ ಬೋರ್‌ವೆàಲ್ ಹಾಕಿಸಿಕೊಂಡಿದ್ದಾರೆ.
ಬೆಳಗ್ಗೆಯಿಂದ ಸಂಜೆಯ ವರೆಗೆ ತಮ್ಮ ಜಮೀನುಗಳಲ್ಲಿ ದುಡಿದರು ಜೀವನ ಕಷ್ಟಕರವಾಗಿದೆ. ಜಮೀನು ವಶಪಡಿಸಿಕೊಳ್ಳುವ ಅತಂಕದಲ್ಲಿ ಮತ್ತೆ ಸಾಲ ಮಾಡಿಜಮೀನಿನ ರಕ್ಷಣೆಗೆ ಕೋಟ್‌ಗಳ ಮೊರೆ ಹೋಗಲು ತೀರ್ಮಾನಿಸಿದೆ. ರೈತರೇ ದೇಶದ ಬೆನ್ನೆಲುಬು ಎನ್ನುವಸರ್ಕಾರಗಳು ರೈತರ ಜಮೀನನ್ನು ಉಳಿಸಿಕೊಡದಿದ್ದರೆ,ರೈತರ ಜೀವ, ಜೀವನಕ್ಕೆ ಕುತ್ತು ಬರುವುದರಲ್ಲಿ ಅನುಮಾನವಿಲ್ಲ.
ಅತಂಕ ಬೇಡ: ನ್ಯಾಯಾಲಯ ಹಾಗೂ ಸರ್ಕಾರದ ಹಂತದಲ್ಲಿ ಜಮೀನು ವಶಪಡಿಸಿಕೊಳ್ಳುವ ಬಗ್ಗೆ ಹಾಗೂ ಅರಣ್ಯ ಇಲಾಖೆ ಜೊತೆ ಪತ್ರ ವ್ಯವಹಾರ, ಮಾತುಕತೆ ನಡೆಯುತ್ತಿದೆ. ರೈತರು ದುಡುಕಿ ಹಣಕಳೆದುಕೊಂಡರೇ ಮತ್ತೆ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ.ಆತಂಕವಿಲ್ಲದೆ, ಕೆಲಸ ಕಾರ್ಯಗಳಲ್ಲಿ ರೈತರು ತೊಡಗಿಕೊಳ್ಳುವುದು ಉತ್ತಮ.
ಈ ಪ್ರದೇಶದ ರೈತರಿಗೆ ನ್ಯಾಯ ಸಿಗಬೇಕು. ಕೂಲಿ ಕೆಲಸ ಮಾಡುವ ಜನರು ಇಲ್ಲಿ ಹೆಚ್ಚಾಗಿದ್ದಾರೆ. ಜಮೀನುಕಳೆದುಕೊಂಡರೆ, ಅವರಿಗೆ ಗತಿಯೇ ಇಲ್ಲ. ಸಚಿವರು ಈ ವಿಷಯವನ್ನು ಗಂಭೀರವಾಗಿಪರಿಗಣಿಸಿದ್ದಾರೆ. ಈ ಭಾಗದ ರೈತರಿಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. -ಮಿಲಿಟರಿ ಶಿವಣ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ
ಆರಣ್ಯ ಇಲಾಖೆ ಜಮೀನನ್ನು ವಶಪಡಿಸಿಕೊಳ್ಳುವ ಬಗ್ಗೆ ಗ್ರಾಮೀಣರಿಗೆ ಅತಂಕವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಕೆಲವರು ಈ ವಿಷಯವನ್ನು ಇಟ್ಟುಕೊಂಡುಜನರನ್ನು ಪ್ರಚೋದನೆ ಮಾಡುತ್ತಿದ್ದಾರೆ. ರೈತರುಅತಂಕ ಪಡುವ ಅವಶ್ಯವಿಲ್ಲ. ಸರ್ಕಾರದ ಮಟ್ಟದಲ್ಲಿದಾಖಲಾತಿಗಳನ್ನು ತರಿಸಿಕೊಂಡು ಆರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಲಾಗಿದೆ. -ಜೆ.ಸಿ.ಮಾಧುಸ್ವಾಮಿ, ಸಚಿವ
-ಚೇತನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.