ಮೇವಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ!
Team Udayavani, Dec 19, 2021, 5:50 PM IST
ದೇವದುರ್ಗ: ಬೇಸಿಗೆಯಲ್ಲಿ ಕುಡಿವ ನೀರು, ಮೇವಿನ ಬವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ರೈತರು ಈಗಲೇ ಮೇವು ಖರೀದಿಸುವುದಕ್ಕೆ ಮುಂದಾಗಿದ್ದು, ಬೇಡಿಕೆ ಹೆಚ್ಚಿದೆ. ಜತೆಗೂ ದರವೂ ಹೆಚ್ಚಳವಾಗಿದೆ.
ಕೃಷ್ಣಾ ನದಿ ತೀರ ಸೇರಿದಂತೆ ಇತರೆ ಹೋಬಳಿ ವ್ಯಾಪ್ತಿಯಲ್ಲಿ ಭತ್ತ ಬೆಳೆಯಲಾಗಿದ್ದು, ಭತ್ತ ಕಟಾವು ಹಂತದಲ್ಲಿದೆ. ಹಲವೆಡೆ ಕಟಾವು ಮಾಡಲಾಗಿದೆ. ಒಂದು ಟ್ರ್ಯಾಕ್ಟರ್ ಮೇವಿಗೆ 3ರಿಂದ 4 ಸಾವಿರ ಇದ್ದು, ಜಾನುವಾರು ಸಾಕಲು ರೈತರು ಮೇವು ಖರೀದಿಗೆ ಅವರಿವರ ಹತ್ತಿರ ಸಾಲ ಮಾಡುವ ಸ್ಥಿತಿ ಎದುರಾಗಿದೆ.
ಶಹಾಪೂರ, ಲಿಂಗಸುಗೂರು ಸೇರಿದಂತೆ ಇತರೆ ತಾಲೂಕು ವ್ಯಾಪ್ತಿಯ ಹಳ್ಳಿಗಳ ರೈತರು ಮೇವು ಖರೀದಿಗೆ ಮೊರೆ ಹೋಗಿದ್ದಾರೆ. ಎರಡ್ಮೂರು ಎಕರೆ ಜಮೀನು ಹೊಂದಿದ ನೀರಾವರಿ ಸೌಲಭ್ಯ ವಂಚಿತ ಸಣ್ಣ ರೈತರು ಮೇವಿಗಾಗಿ ಅಲೆಯುವಂತಾಗಿದೆ.
ಮಾರ್ಚ್ ಆರಂಭದಲ್ಲೇ ಬಿಸಿಲು ಹೆಚ್ಚಾಗುವ ಸಂಭವವಿರುವುದರಿಂದ ಮೇವಿನ ಅಭಾವ ಉಂಟಾಗುವ ಮೊದಲೇ ಸಂಗ್ರಹಿಸಲಾಗುತ್ತಿದೆ. ಗಣೇಕಲ್, ಗಲಗ, ಜಾಲಹಳ್ಳಿ, ಸುಂಕೇಶ್ವರಹಾಳ, ಮಸರಕಲ್, ಜೋಳದಹೆಡಗಿ, ಹೂವಿನಹೆಡಗಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಅತಿ ಹೆಚ್ಚು ಭತ್ತ ನಾಟಿ ಮಾಡಲಾಗುತ್ತಿದೆ. ಹೀಗಾಗಿ ಈ ಪ್ರದೇಶದ ವ್ಯಾಪ್ತಿಯಲ್ಲೇ ಮೇವು ಖರೀದಿಗೆ ಬೇಡಿಕೆ ಹೆಚ್ಚಿದೆ.
ಬೇಸಿಗೆ ವೇಳೆ ತಾಲೂಕಿನ ರೈತರ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗದಂತೆ ತಾಲೂಕು ಆಡಳಿತ ಮುಂಜಾಗ್ರತೆ ವಹಿಸಬೇಕು. ಅದರಲ್ಲಿ ಕುಡಿವ ನೀರಿಗೆ ಹೆಚ್ಚು ಆದ್ಯತೆ ನೀಡಬೇಕು. -ನರಸಣ್ಣ ನಾಯಕ, ಜಾಲಹಳ್ಳಿ, ರೈತ ಮುಖಂಡ
ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಮೇವಿನ ಖರೀದಿ ಕೇಂದ್ರ ಆರಂಭಿಸುವ ಕುರಿತು ಜಿಲ್ಲಾಡಳಿತದಿಂದ ಯಾವುದೇ ಸೂಚನೆ ಬಂದಿಲ್ಲ. ಆದೇಶ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. -ಶ್ರೀನಿವಾಸ ಚಾಪಲ್, ಪ್ರಭಾರ ತಹಶೀಲ್ದಾರ್
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.