ವಿಕಲಚೇತನರ ವಿಶೇಷ ಶಾಲೆ ಸ್ಥಾಪನೆಗೆ ಪ್ರಸ್ತಾವನೆ
Team Udayavani, Dec 19, 2021, 6:06 PM IST
ಬಾಗಲಕೋಟೆ: ಜಿಲ್ಲೆಯಲ್ಲಿ ವಿಕಲಚೇತನರಿಗಾಗಿ ವಸತಿಯುತ ವಿಶೇಷ ಶಾಲೆ ಸ್ಥಾಪನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ವಿಕಲಚೇತನರ 2016ರ ಕಾಯ್ದೆಯ ಕುರಿತು ಚರ್ಚಿಸಲು ಜರುಗಿದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ
ವಿಕಲಚೇತನರ ಸಂಖ್ಯೆ ಹೆಚ್ಚಾಗಿದ್ದಾರೆ. ಜಿಲ್ಲೆಯಲ್ಲಿ ವಿಕಲಚೇತನ ವಸತಿಯುತ ಶಾಲೆ ಅವಶ್ಯಕತೆ ಮನಗಂಡು ವಿಶೇಷ ಶಾಲೆ ಆರಂಭಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ವಸತಿ ಶಾಲೆ ಸ್ಥಾಪನೆಗೆ ಎರಡು ಎಕರೆ ನಿವೇಶನ ಅವಶ್ಯವಿದ್ದು, ಬಿಟಿಡಿಎಗೆ ಬೇಡಿಕೆ ಇಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಸ್ವರೂಪವುಳ್ಳ ಒಟ್ಟು 27998 ವಿಕಲಚೇತನರಿದ್ದು, ಅವರಿಗೆ ನೀಡುತ್ತಿರುವ ಯುಡಿಐಡಿ ಕಾರ್ಯ ಪ್ರಗತಿ ಉತ್ತಮವಾಗಿದ್ದು, ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ
ಅಭಿನಂದಿಸಿದರು. ಜಿಲ್ಲೆಯಲ್ಲಿ ಯುಡಿಐಡಿ ಕಾರ್ಡ್‌ಗಾಗಿ 30012 ಅರ್ಜಿ ಆನ್‌ಲೈನ್‌ನಲ್ಲಿ ಸ್ವೀಕೃತಗೊಂಡಿದ್ದು, ಅದರಲ್ಲಿ 13398 ಜನರೇಟ್ ಆಗಿರುತ್ತವೆ. ಅದರಲ್ಲಿ 1205 ತಿರಸ್ಕೃತಗೊಂಡಿದ್ದು, 15409 ಮಾತ್ರ ಬಾಕಿ ಉಳಿದಿವೆ. ಅಂಗವೈಕಲ್ಯತೆ ಪ್ರಮಾಣದ ಪರೀಕ್ಷೆಗೆ ಬರದ ಕಾರಣ ಬಾಕಿ ಉಳಿದಿರುವುದನ್ನು ಕಂಡು ಅಂತವರಿಗೆ ಕಾಲಾವಕಾಶ ನೀಡಿ ಪರೀಕ್ಷೆಗೆ ಒಳಪಡಿಸಲು ಸೂಚಿಸಿದರು.
ಶ್ರವಣ ನ್ಯೂನತೆ ಹೊಂದಿದ ಮಕ್ಕಳ ಬಿರಾಟೆಸ್ಟ್‌ಗೆ ಪ್ರತಿ ಮಕ್ಕಳಿಗೆ 12 ನೂರು ಖರ್ಚಾಗಲಿದ್ದು, ಇದು ಅವರಿಗೆ ಭಾರವಾಗಲಿದೆ ಎಂದು ಅರಿತು ನಗರದ ಬವಿವ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಉಚಿತವಾಗಿ ಬಿರಾಟೆಸ್ಟ್ ಮಾಡಿಸಿಕೊಡಲು ಕಾರ್ಯಾಧ್ಯಕ್ಷರಿಗೆ ಕೇಳಿಕೊಂಡಾಗ ಅವರಿಂದ ಭರವಸೆ ದೊರೆತ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಶ್ರವಣ ನ್ಯೂನತೆ ಇರುವ ಮಕ್ಕಳ ಪಟ್ಟಿ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಬಿರಾದಾರ ಅವರಿಗೆ ಸೂಚಿಸಿದರು. ಪಿಡಬ್ಲೂಡಿ ವತಿಯಿಂದ ನಿರ್ಮಾಣಗೊಂಡ ಸರಕಾರಿ ಕಟ್ಟಡಗಳಲ್ಲಿ ವೈಜ್ಞಾನಿಕವಾಗಿ ರ್‍ಯಾಂಪ್ ನಿರ್ಮಿಸಿದ ಬಗ್ಗೆ ಪರಿಶೀಲಿಸಲು ತಿಳಿಸಿದರು.
ಜಿಲ್ಲೆಯ ವಿವಿಧ ಇಲಾಖೆಯಡಿ ಬಿಡುಗಡೆ ಯಾದ ಅನುದಾನದಲ್ಲಿ ಶೇ. 5 ರಷ್ಟು ವಿಕಲಚೇತನರಿಗೆ ಮೀಸಲಿರಿಸಿದ್ದು, ಈ ಅನುದಾನದಡಿ ಶ್ರವಣಯಂತ್ರ ಖರೀದಿಸಿ ವಿತರಿಸಲು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆ ಶೇ.5ರ ಅನುದಾನ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಶ್ರವಣ ದೋಷ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.