ಹಾಕಿ: ಭಾರತದ ಹ್ಯಾಟ್ರಿಕ್ ಸಾಧನೆ ಜಪಾನ್ ವಿರುದ್ಧ ಜಬರ್ದಸ್ತ್ ಜಯ
Team Udayavani, Dec 20, 2021, 5:00 AM IST
ಢಾಕಾ: ಈಗಾಗಲೇ ಸೆಮಿಫೈನಲ್‌ಗೆ ಲಗ್ಗೆ ಇರಿಸಿರುವ ಭಾರತ, “ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ’ಯ ಅಂತಿಮ ಲೀಗ್ ಪಂದ್ಯದಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ತಂಡವನ್ನು 6-0 ಅಂತರದಿಂದ ಬಗ್ಗುಬಡಿದಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ತನ್ನ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.
ಹರ್ಮನ್‌ಪ್ರೀತ್ ಸಿಂಗ್ (10, 53ನೇ ನಿಮಿಷ) ಅವಳಿ ಗೋಲು ಬಾರಿಸಿ ಮಿಂಚಿದರು. ಉಳಿದಂತೆ ದಿಲ್‌ಪ್ರೀತ್ ಸಿಂಗ್ (34ನೇ ನಿಮಿಷ), ಜರ್ಮನ್‌ಪ್ರೀತ್ ಸಿಂಗ್ (34ನೇ ನಿಮಿಷ), ಸುಮೀತ್ (46ನೇ ನಿಮಿಷ), ಸಮ್ಶೆàರ್ ಸಿಂಗ್ (54ನೇ ನಿಮಿಷ) ತಲಾ ಒಂದೊಂದು ಗೋಲು ಬಾರಿಸಿದರು. ಭಾರತದ ಆಕ್ರಮಣಕಾರಿ ಆಟದ ಮುಂದೆ ಜಪಾನ್ ಎಲ್ಲ ವಿಭಾಗಗಳಲ್ಲಿ ಸಂಪೂರ್ಣವಾಗಿ ವಿಫಲವಾಯಿತು.
ಮಿಂಚಿದ ಕರ್ಕೇರ
ಜಪಾನ್‌ಗೆ ಪೆನಾಲ್ಟಿ ಕಾರ್ನರ್ ಸೇರಿದಂತೆ ಹಲವು ಬಾರಿ ಗೋಲು ಬಾರಿಸುವ ಅವಕಾಶ ಲಭಿಸಿತ್ತು. ಆದರೆ ಭಾರತದ ಗೋಲ್‌ಕೀಪರ್ ಸೂರಜ್ ಕರ್ಕೇರ ಅವರನ್ನು ವಂಚಿಸಲು ಸಾಧ್ಯವಾಗಲಿಲ್ಲ. ಅವರು ತಡೆಗೋಡೆಯಂತೆ ನಿಂತು ಜಪಾನಿನ ಅಷ್ಟೂ ಅವಕಾಶಗಳನ್ನು ವ್ಯರ್ಥಗೊಳಿಸಿದರು.
ಇದನ್ನೂ ಓದಿ:ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್: ಶ್ರೀಕಾಂತ್‌ಗೆ ಬೆಳ್ಳಿ ,ಲಕ್ಷ್ಯ ಸೇನ್‌ಗೆ ಕಂಚು
ಇದು ಭಾರತಕ್ಕೆ 4 ಪಂದ್ಯಗಳಲ್ಲಿ ಒಲಿದ 3ನೇ ಜಯ. 10 ಅಂಕಗಳೊಂದಿಗೆ ಮನ್‌ಪ್ರೀತ್ ಸಿಂಗ್ ಬಳಗ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಕೂಟದಲ್ಲಿ ಈವರೆಗೆ 17 ಗೋಲು ಬಾರಿಸಿರುವ ಭಾರತ, ಕೇವಲ 3 ಗೋಲು ಬಿಟ್ಟುಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.