ಕರಾವಳಿ ಸಮಸ್ಯೆ ಚರ್ಚಿಸಲು ನಿರುತ್ಸಾಹ
ಅಧಿವೇಶನದಲ್ಲಿ ಪ್ರಶ್ನೆ ಕ್ಷೇತ್ರದ ಸಮಸ್ಯೆಗೆ ಸೀಮಿತ; ಕಾಣದ ಸಮಗ್ರ ದೃಷ್ಟಿ
Team Udayavani, Dec 20, 2021, 7:20 AM IST
ಬೆಳಗಾವಿ: ಕರಾವಳಿಯ ಪ್ರಮುಖ ಸಮಸ್ಯೆಗಳ ಕುರಿತು ವಿಧಾನ ಮಂಡಲದ ಅಧಿವೇಶನದಲ್ಲಿ ಸ್ಥಳೀಯ ಶಾಸಕರು ಮೊದಲ ವಾರದಲ್ಲಿ ಚರ್ಚೆ ಯನ್ನೇ ನಡೆಸಿಲ್ಲ. ಎರಡನೇ ವಾರದಲ್ಲಿ ಯಾದರೂ ಆ ಬಗ್ಗೆ ಪ್ರಸ್ತಾವಿಸಿ ಸರಕಾರದ ಗಮನ ಸೆಳೆಯುವ ಅಗತ್ಯವಿದೆ.
ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಸೂಚಿಸಿದ್ದರೂ ಕೆಂಪಕ್ಕಿಗೆ ಅವಕಾಶ ಇಲ್ಲವಾಗಿದೆ. ಮಳೆ ಯಿಂದಾಗಿ ಭತ್ತ ಮತ್ತು ಬೈ ಹುಲ್ಲು ಹಾಳಾಗಿದ್ದು ಅದಕ್ಕೂ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಕರಾವಳಿಯ ಕೆಲವು ಶಾಸಕರು ತಮ್ಮ ಪ್ರದೇಶದ ಸಮಸ್ಯೆಗಳ ಕುರಿತು ಪ್ರಸ್ತಾವಿಸಿರುವರೇ ವಿನಾ ಕರಾವಳಿಯ ಪ್ರಮುಖ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಗಮನ ಸೆಳೆದಿಲ್ಲ.
ಅಕ್ಟೋಬರ್, ನವೆಂಬರ್‌ನಲ್ಲಿ ಸುರಿದ ಭಾರೀ ಮಳೆಯಿಂದ ಬಹುತೇಕ ಕಡೆಗಳಲ್ಲಿ ಭತ್ತದ ಕೊಯ್ಲು ಸರಿಯಾಗಿ ಮಾಡಲು ಸಾಧ್ಯವಾಗಿರಲಿಲ್ಲ. ಗದ್ದೆಯಲ್ಲೇ ಭತ್ತ ಮೊಳಕೆಯೊಡೆದು ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿತ್ತು. ಸರಕಾರ ಭತ್ತ ಖರೀದಿ ಕೇಂದ್ರ ತೆರೆದಿದ್ದರೂ ನಿರ್ದಿಷ್ಟ ಸಮಯದಲ್ಲಿ ಖರೀದಿ ಪ್ರಕ್ರಿಯೆ ಆರಂಭಿಸದೆ ಇರುವುದು ರೈತರಿಗೆ ಇನ್ನಷ್ಟು ನೋವುಂಟು ಮಾಡಿದೆ. ಮಲ್ಲಿಗೆ, ಮಟ್ಟುಗುಳ್ಳ ಮತ್ತಿತರ ವಿವಿಧ ವಾಣಿಜ್ಯ ಬೆಳೆಗಳು ಕೂಡ ಫಸಲು ಬಿಡುವ ಸಮಯದಲ್ಲಿ ನಾಶವಾಗಿದ್ದವು. ಬೆಳೆ ಪರಿಹಾರವೂ ಸಿಕ್ಕಿಲ್ಲ. ಮಳೆ ಯಿಂದಾದ ಬೆಳೆ ಹಾನಿ, ಪರಿ ಹಾರ ಸಿಗದೆ ಇರುವ ಬಗ್ಗೆ ಚರ್ಚೆ ಆಗಿಲ್ಲ.
ಇದನ್ನೂ ಓದಿ:ಪ್ರಾಥಮಿಕ ಶಾಲೆಗಳಲ್ಲಿ “ಸಂತೋಷ ಪಠ್ಯಕ್ರಮ”; ಉತ್ತರ ಪ್ರದೇಶ ಸರ್ಕಾರದ ವಿಶೇಷ ಕ್ರಮ
ತುಳು ಭಾಷೆ: ಕೇಳದ ಧ್ವನಿ
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಡಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಬಹು ವರ್ಷಗಳಿಂದ ಹೋರಾಟ ಗಳು ನಡೆದಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸುತ್ತ ಬರಲಾಗಿದೆ. ಈಚೆಗೆ ಕೇಂದ್ರದ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, ಸದ್ಯ ಇದಕ್ಕೆ ಅವಕಾಶ ಇಲ್ಲ ಎಂದು ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ. ಈ ಬಗ್ಗೆಯೂ ಕರಾವಳಿಯ ಶಾಸಕರು ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವ ಅಥವಾ ರಾಜ್ಯ ಸರಕಾರದ ಮೂಲಕ ಕೇಂದ್ರದ ಮೇಲೆ ಮತ್ತೊಮ್ಮೆ ಒತ್ತಡ ಹೇರುವ ಪ್ರಯತ್ನ ಮಾಡಬೇಕಿತ್ತು. ರಾಜ್ಯ ಸರಕಾರದಲ್ಲಿ ಕರಾವಳಿಯ ಎರಡು ಜಿಲ್ಲೆಗಳ ಮೂವರು ಸಚಿವರಿದ್ದು, ಕೇಂದ್ರ ದಲ್ಲಿ ಕೃಷಿ ಖಾತೆಯ ಸಚಿವೆ ಕರಾವಳಿ ಯವರಾಗಿದ್ದರೂ ಸ್ಥಳೀಯ ಕುಚ್ಚಲು ಅಕ್ಕಿ ಖರೀದಿಸಿ ಪಡಿತರ ವ್ಯವಸ್ಥೆ ಯಡಿ ವಿತರಿಸುವ ಪ್ರಕ್ರಿಯೆ ಇನ್ನೂ ಆರಂಭ ವಾಗಿಲ್ಲ. ಈ ಬಗ್ಗೆಯೂ ಸರಕಾರದ ಗಮನ ಸೆಳೆಯುವ ಮತ್ತು ಕೇಂದ್ರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಿಲ್ಲ.
ಕ್ಷೇತ್ರದ ಸಮಸ್ಯೆಗೆ ಸೀಮಿತ
ಕರಾವಳಿಯ ಶಾಸಕರು ತಮ್ಮ ಕ್ಷೇತ್ರದ ಇ-ಸ್ವತ್ತು ತಂತ್ರಾಂಶ ಸಮಸ್ಯೆ, ಯುಪಿಸಿಎಲ್ ವಿದ್ಯುತ್ ಮಾಗದಿಂದ ಅನಾನುಕೂಲ ಮತ್ತಿತರ ಸಮಸ್ಯೆ ಗಳನ್ನು ಪ್ರಶ್ನೋತ್ತರ ಕಲಾಪ ವೇಳೆ ಸರಕಾರದ ಗಮನಕ್ಕೆ ತಂದು ಪರಿ ಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಆದರೆ ಇಡೀ ಕರಾವಳಿಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಅಧಿವೇಶನವನ್ನು ವೇದಿಕೆ ಯಾಗಿ ಬಳಸಿಕೊಳ್ಳುತ್ತಿಲ್ಲ.
ಈ ವಾರವಾದರೂ ಧ್ವನಿಯೆತ್ತಲಿ
ಕರಾವಳಿಯಲ್ಲಿ ಕಾಂಗ್ರೆಸ್‌ನ ಏಕೈಕ ಶಾಸಕ ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕರಿದ್ದಾರೆ. ಇವರಲ್ಲಿ ಮೂವರು ಸಚಿವರು. ಶಾಸಕ, ಸಚಿವರು ಒಟ್ಟಾಗಿ ಈ ವಾರವಾದರೂ ಕರಾವಳಿಯ ವಿವಿಧ ಸಮಸ್ಯೆಗಳನ್ನು ಚರ್ಚಿಸಲು ಉಭಯ ಸದನದಲ್ಲಿ ಅವಕಾಶ ಕೋರಿ ಕನಿಷ್ಠ ಒಂದೆರಡು ತಾಸು ಕಾಲವಾದರೂ ಚರ್ಚೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂಬುದು ಕರಾವಳಿ ಭಾಗದ ಜನರ ಆಶಯ.
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.