ಜಾಕ್ವೆಲಿನ್ ಗಾಗಿ 500 ಕೋಟಿ ರೂ. ಬಜೆಟ್ ನ ಸಿನಿಮಾ ಮಾಡಲು ಮುಂದಾಗಿದ್ದ ಸುಕೇಶ್ ಚಂದ್ರಶೇಖರ್
Team Udayavani, Dec 20, 2021, 2:54 PM IST
ಮುಂಬೈ: ಹಲವು ಖ್ಯಾತನಾಮರಿಗೆ ಕೋಟ್ಯಾಂತರ ರೂ. ವಂಚಿಸಿ, ಹಲವು ಬಾಲಿವುಡ್ ನಟಿಯರೊಂದಿಗೆ ವಿಶೇಷ ಸಂಬಂಧ ಹೊಂದಿ ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಿರುವ ಸುಕೇಶ್ ಚಂದ್ರಶೇಖರ್ ಬಗ್ಗೆ ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ. ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಗೆ ದುಬಾರಿ ಗಿಫ್ಟ್ ಗಳನ್ನು ನೀಡಿದ್ದ ಕಾಮನ್ ಮ್ಯಾನ್ ಸುಕೇಶ್, ನಟಿಗಾಗಿ 500 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಿಸಲು ಮುಂದಾಗಿದ್ದ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಜಾಕ್ವೆಲಿನ್ ಫೆರ್ನಾಂಡಿಸ್ ಗಾಗಿ ಸುಕೇಶ್ ಚಂದ್ರಶೇಖರ್ ‘ಸೂಪರ್ ವುಮನ್’ ಸರಣಿ ಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಮೂರು ಭಾಗದಲ್ಲಿ ಚಿತ್ರ ನಿರ್ಮಾಣ ಮಾಡುವುದಾಗಿ ಸುಕೇಶ್ ಚಂದ್ರಶೇಖರ್ ನಟಿ ಜಾಕ್ವೆಲಿನ್ ಗೆ ಹೇಳಿದ್ದ ಎಂದು ವರದಿಯಾಗಿದೆ.
“ಜಾಕ್ವೆಲಿನ್ ಅವರು ಬಾಲಿವುಡ್ ನಲ್ಲಿ ಕೆಲಸಕ್ಕಾಗಿ ಹುಡುಕುವ ವಿಚಾರ ಸುಕೇಶ್ ಗೆ ಗೊತ್ತಿತ್ತು. ಜಾಕ್ವೆಲಿನ್ ಹೆಚ್ಚಿನ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಜಾಕ್ವೆಲಿನ್ ದುರ್ಬಲತೆಯನ್ನು ಬಳಸಿಕೊಳ್ಳಲು ಆತ ಉಪಾಯ ಹೂಡಿದ್ದ. ಜಾಕ್ವೆಲಿನ್ ಗಾಗಿ ಹಾಲಿವುಡ್ ವಿಎಫ್ ಎಕ್ಸ್ ಕಲಾವಿದರನ್ನು ಒಳಗೊಂಡಿರುವ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಪ್ರಾಜೆಕ್ಟ್ ಎನ್ನು ನಿರ್ಮಿಸುವುದಾಗಿ ಸುಕೇಶ್ ಭರವಸೆ ನೀಡಿದ್ದ, ಅದನ್ನು ಜಾಗತಿಕ ಮಟ್ಟದಲ್ಲಿ ಚಿತ್ರೀಕರಿಸಲಾಗುವುದು ಎಂದು ಹೇಳಿದ್ದ” ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಗೆ ಮತ್ತೆ ಇಡಿ ಸಮನ್ಸ್
ಸುಕೇಶ್ ಚಂದ್ರಶೇಖರ್ ಮಾತುಗಳನ್ನು ನಂಬಿದ್ದ ಜಾಕ್ವೆಲಿನ್ ಚಿತ್ರಕ್ಕೆ ಒಪ್ಪಿಗೆ ನೀಡಿದ್ದರು. ಇದಕ್ಕಾಗಿ ಸುಕೇಶ್ ಬಿಗ್ ಬಜೆಟ್ ಚಿತ್ರಗಳು, ಸಿನಿಮಾ ತಯಾರಿ, ಫಿಲ್ಮ್ ಬಜೆಟ್ ಮುಂತಾದವುಗಳ ಬಗ್ಗೆ ತಿಳಿದುಕೊಂಡಿದ್ದ.
ತಿಹಾರ್ ಜೈಲಿನಲ್ಲಿರುವ ಉದ್ಯಮಿಯೊಬ್ಬರನ್ನು ಬಿಡಿಸಿಕೊಡುವುದಾಗಿ ಅವರ ಪತ್ನಿಯಿಂದ ಸುಕೇಶ್ 200 ಕೋಟಿ ರೂ ಹಣ ಪಡೆದಿದ್ದ. ಬಳಿಕ ವಂಚಿಸಿದ್ದ. ಉದ್ಯಮಿಯ ಪತ್ನಿ ನೀಡಿದ ದೂರಿನಂತೆ ಸುಕೇಶ್ ನನ್ನು ಬಂಧಿಸಲಾಗಿತ್ತು. ಈ ವೇಳೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗಿನ ಸುಕೇಶ್ ಸಂಬಂಧದ ಕುರಿತು ಮಾಹಿತಿ ಬಯಲಾಗಿತ್ತು. ನಟಿಗೆ ಸುಕೇಶ್ ಸುಮಾರು 10 ಕೋಟಿ ರೂ ಬೆಲೆಯ ಉಡುಗೊರೆಗಳನ್ನೂ ನೀಡಿದ್ದ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.