ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
Team Udayavani, Dec 20, 2021, 5:25 PM IST
ರಬಕವಿ-ಬನಹಟ್ಟಿ : ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಕಪ್ಪು ಮಸಿ ಸುರಿದ ಪ್ರಕರಣ, ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಾ ಹಾಗೂ ಬೆಳಗಾವಿಯಲ್ಲಿ ದೇಶಭಕ್ತ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣವನ್ನು ಖಂಡಿಸಿ ಸೋಮವಾರ ರಬಕವಿ-ಬನಹಟ್ಟಿಯ ವಿವಿಧ ಹಿಂದೂಪರ ಸಂಘಟನೆಗಳು, ಕನ್ನಡ ಅಭಿಮಾನಿಗಳ ನೇತೃತ್ವದಲ್ಲಿ ನಗರದ ಎಂ. ಎಂ. ಬಂಗ್ಲೆ ಹತ್ತಿರದ ಕುಡಚಿ ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ ಬಸವರಾಜ ಬಿಜ್ಜರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮುಂಚೆ ಬನಹಟ್ಟಿ ನಗರದ ಈಶ್ವರಲಿಂಗ ಮೈದಾನದಿಂದ ಮೆರವಣಿಗೆಯಲ್ಲಿ ತೆರಳಿ ಶಿವಾಜಿ ಹಾಗೂ ರಾಯಣ್ಣ ಪರ ಘೋಷಣೆಗಳನ್ನು ಕೂಗುವುದರ ಮೂಲಕ ಕುಡಚಿ ಜಮಖಂಡಿ ರಾಜ್ಯ ಹೆದ್ದಾರಿವರೆಗೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಹಿಂದು ಸಂಘಟನೆಯ ಮುಖಂಡ ಶಿವಾನಂದ ಗಾಯಕವಾಡ, ಬೆಳಗಾವಿಯಲ್ಲಿ ಎಂ.ಇ.ಎಸ್ ಸಂಘಟನೆಯ ಪುಂಡಾಟಿಕೆ ತೀವ್ರ ಖಂಡನೀಯ. ಕನ್ನಡದ ನೆಲದಲ್ಲಿ ಜನ್ಮವೆತ್ತು, ಕನ್ನಡದ ನೆಲದಲ್ಲಿ ಬಾಳಿ ಬದುಕಿ ಕನ್ನಡದ ನೆಲಕ್ಕೆ ಅಪಚಾರವೆಸಗುವ ಎಂ.ಇ.ಎಸ್ ಸಂಘಟನೆಯ ಕುಕೃತ್ಯ ತೀವ್ರ ಖಂಡನೀಯ. ಈ ನಾಡಿನ ಜನರು ಜಾತಿ, ಮತ, ಧರ್ಮ, ಭಾಷೆ ಎಂದು ಬೇಧಭಾವ ಮಾಡದೇ ಸಾಮರಸ್ಯದಿಂದ ಜೀವನ ನಡೆಸುತ್ತಿರುವಾಗ ಎಂ.ಇ.ಎಸ್ ಸಂಘಟನೆ ಹೇಯಕೃತ್ಯಗಳ ಮೂಲಕ ಸಮಾಜದ ಶಾಂತಿಕ ದಡುವ ಕೆಲಸ ಮಾಡುತ್ತಿದೆ. ಇಂಥಹ ನಾಡದ್ರೋಹಿ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಸ್ವಾತಂತ್ರ‍್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಹಾಗೂ ಹಿಂದವಿ ಸಮಾಜದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆಯನ್ನು ನಾವೆಂದು ಸಹಿಸಲಾರೆವು. ಇಂಥಹ ಹೇಯ ಕೃತ್ಯವೆಸಗಿದವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ : ಮತಾಂತರ ಮಸೂದೆಗೆ ಕ್ಯಾಬಿನೆಟ್ ಅನುಮೋದನೆ : ನಾಳೆ ಮಂಡನೆ ಸಾಧ್ಯತೆ
ವಿಶ್ವ ಹಿಂದು ಪರಿಷತ್ತಿನ ಮಠ ಮಾನ್ಯ ಪ್ರಮುಖರಾದ ಮಲ್ಲೇಶ ಹೊಸಮನಿ ಮಾತನಾಡಿ, ತಾಯಿ ಭುವನೇಶ್ವರಿಯ ಪುಣ್ಯದ ನೆಲದಲ್ಲಿ ಬದುಕು ಕಟ್ಟಿಕೊಂಡಿರುವ ನಾವೆಲ್ಲರೂ ನಾಡು, ನುಡಿ, ಭಾಷೆಯ ವಿಚಾರ ಬಂದಾಗ ಕನ್ನಡಕ್ಕಾಗಿ, ಕನ್ನಡದ ಉಳಿವಿಗಾಗಿ ಕಟಿಬದ್ದರಾಗಬೇಕಾಗಿದೆ. ದುಷ್ಕೃತ್ಯವನ್ನು ಮಾಡುತ್ತಿರುವ ಹಿಂದುಗಳ ಭಾವನೆಗೆ ಧಕ್ಕೆ ತಂದು ಅಶಾಂತಿ ವಾತಾವರಣವನ್ನು ನಿರ್ಮಾಣ ಮಾಡುತ್ತಿರುವ ಎಂ.ಇ.ಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು, ಸಂಘಟನೆಯ ಪುಢಾರಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ಪ್ರದೀಪ ದೇಶಪಾಂಡೆ, ಕ್ಷತ್ರಪತಿ ಸೇನಾ ಬಾಗಲಕೋಟೆ ಅಧ್ಯಕ್ಷ ರಾಯಬಾಗ ಜಾಧವ, ಪಂಡಿತ ಬೋಷ್ಲೆ ಮಾತನಾಡಿದರು.
ಮಾರುತಿ ಸೋರಗಾಂವಿ, ವಿಶಾಲ ಕದಂ, ಜ್ಯೋತಿಬಾ ಸಾಲ್ಗುಡೆ, ತಾನಾಜಿ ನಿಕ್ಕಂ, ಶಿವಾನಂದ ಗುಂಡಿ, ನಾಗಪ್ಪ ಜಾಧವ, ಶ್ರೀಶೈಲ ನಲ್ಲೋಡಿ ಸೇರಿದಂತೆ ವಿವಿಧ ಹಿಂದುಪರ ಸಂಘಟನೆಯ ಮುಖಂಡರು ಕಾರ್ಯಕರ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.