ವಾಯುಗುಣಮಟ್ಟ ಪರಿಶೀಲನೆಗೆ 5 ಸ್ಮಾರ್ಟ್ ಮಾಪನ
Team Udayavani, Dec 20, 2021, 5:43 PM IST
ಲಾಲ್‌ಬಾಗ್: ಸ್ಮಾರ್ಟ್‌ಸಿಟಿ ಯಾಗಿ ಬದಲಾವಣೆಯಾಗುತ್ತಿರುವ ಮಂಗಳೂರಿನ ವಾಯುಗುಣಮಟ್ಟ ಪರಿಶೀ ಲನೆ ಹಿನ್ನೆಲೆಯಲ್ಲಿ ಆಯ್ದ 5 ಕಡೆಗಳಲ್ಲಿ ಮಾಪನ ಯಂತ್ರಗಳನ್ನು ಅಳವಡಿಸಲಾಗಿದೆ.
ನಗರದ ವಿವಿಧೆಡೆ ವಾಯುಗುಣ ಮಟ್ಟದ ನಿಖರ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಯಿಂದ ಐದು ಕಡೆಗಳಲ್ಲಿ ಮಾಪನ ಯಂತ್ರ ಅಳವಡಿಸ ಲಾಗಿದೆ. ಯಂತ್ರದಲ್ಲಿ ದಾಖಲಾಗುವ ಮಾಹಿತಿಗಳು ಸ್ಮಾರ್ಟ್‌ಸಿಟಿಯ “ಕಮಾಂಡ್ ಕಂಟ್ರೋಲ್ ಸೆಂಟರ್’ನಲ್ಲಿ ಅಪ್‌ಡೇಟ್ ಆಗಿರುತ್ತದೆ. ಅಲ್ಲಿಂದ ಮಾಲಿನ್ಯ ನಿಯಂತ್ರಣ ಮಂಡಳಿಗೂ ಲಭಿಸುತ್ತದೆ. ಜತೆಗೆ ರಾಜ್ಯದ ಸ್ಮಾರ್ಟ್‌ಸಿಟಿ ಕೇಂದ್ರ ಕಚೇರಿಗೂ ಸಲ್ಲಿಕೆಯಾಗುತ್ತದೆ. ಈ ಮೂಲಕ ನಗರದ ವಾಯು ಗುಣಮಟ್ಟವನ್ನು ನಿತ್ಯ ಪರಿಶೀಲಿಸಲಾಗುತ್ತಿದೆ.
ಈಗಾಗಲೇ ನಗರದ ವಾಯುಗುಣ ಮಟ್ಟ ಪರಿಶೀಲನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ಸಕೀìಟ್‌ಹೌಸ್ ಬಳಿ ಮಾಪನ ಯಂತ್ರ ಅಳವಡಿಸಿದೆ. ಇದರ ಮೂಲಕವೇ ನಗರದ ಸಮಗ್ರ ವಾಯು ಗುಣ ಮಟ್ಟದ ವರದಿ ತಯಾರಿಸಲಾಗು ತ್ತಿತ್ತು. ಜತೆಗೆ ಎಂಆರ್‌ಪಿಎಲ್ ಸಹಿತ ವಿವಿಧ ಕೈಗಾರಿಕೆ ಸಂಸ್ಥೆಗಳು ಪ್ರತ್ಯೇಕವಾಗಿ ವಾಯು ಗುಣಮಟ್ಟ ಪರಿಶೀಲನೆಗೆ ಯಂತ್ರ ಅಳವಡಿ ಸಿತ್ತು. ಇದಕ್ಕೆ ಪೂರಕವಾಗಿ ಇದೀಗ ವಾಹನ ದಟ್ಟಣೆ ಅಧಿಕವಿರುವ ನಗರದ ಮುಖ್ಯ ಭಾಗದಲ್ಲಿಯೇ ವಾಯು ಗುಣಮಟ್ಟ ಪರಿಶೀಲನೆಗಾಗಿ ಪ್ರತ್ಯೇಕ ಮಾಪನ ಯಂತ್ರವನ್ನು ಹೊಸದಾಗಿ ಸ್ಮಾರ್ಟ್‌ಸಿಟಿ ವತಿಯಿಂದ ಅಳವಡಿಸಲಾಗಿದೆ.
“ಒನ್ ಟಚ್’ನಲ್ಲಿ ಸಾರ್ವಜನಿಕರಿಗೆ ಲಭ್ಯ
ಸದ್ಯ ಸರಕಾರಿ ವ್ಯವಸ್ಥೆಯೊಳಗೆ ಮಾತ್ರ ವಾಯುಗುಣಮಟ್ಟದ ವಿವರ ದೊರೆಯು ತ್ತಿದೆ. ಆದರೆ ಇನ್ನು ಮುಂದೆ ಸಾರ್ವಜನಿಕ ರಿಗೂ ಈ ಮಾಹಿತಿ ಮೊಬೈಲ್‌ನಲ್ಲಿ ದೊರೆ ಯಲಿದೆ. ಸ್ಮಾರ್ಟ್‌ಸಿಟಿಯಿಂದ ಜಾರಿಗೆ ತರಲಾಗುತ್ತಿರುವ “ಒನ್ ಟಚ್’ ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರು ಕೂಡ ಮಾಹಿತಿ ಪಡೆದುಕೊಳ್ಳಬಹುದು.
ತಿಂಗಳ ಹಿಂದೆ ನಗರದ ಹೊರವಲಯದ ಕೆಲವು ಭಾಗಗಳಲ್ಲಿ ಧೂಳು ಮಿಶ್ರಿತ ವಾತಾ ವರಣ ಕಂಡು ಬಂದಿತ್ತು. ಸುಮಾರು ಒಂದು ವಾರದವರೆಗೆ ಹೀಗೆ ಇತ್ತು. ಬಳಿಕ ಮಳೆ ಸುರಿದು ವಾತಾವರಣ ಶುಭ್ರವಾಗಿದೆ. ಕಳೆದ ವರ್ಷವೂ ಇದೇ ಅವಧಿ ಯಲ್ಲಿ ಧೂಳುಮಯ ವಾತಾವರಣ ವಿತ್ತು. ನಗರ ವ್ಯಾಪ್ತಿಯಲ್ಲಿ ಹಸಿರು ಪರಿಸರ ಇರುವುದರಿಂದ ಆತಂಕ ಪಡ ಬೇಕಾಗಿಲ್ಲ. ಅವಕಾಶ ಇರುವಲ್ಲಿ ಇನ್ನಷ್ಟು ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ವಾತಾವರಣವನ್ನೂ ಮತ್ತಷ್ಟು ಶುಭ್ರವಾಗಿಟ್ಟು ಕೊಳ್ಳಬಹುದು ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು.
ಮಾಪನಯಂತ್ರ ಇರುವ ಸ್ಥಳ
1.ಲಾಲ್‌ಬಾಗ್‌ನ ಪಾಲಿಕೆ ಕಟ್ಟಡ
2. ಪುರಭವನ
3. ಅಂಬೇಡ್ಕರ್ ವೃತ್ತದ ಬಳಿ
4. ಬೋಳಾರ ಬಿಇಒ ಕಚೇರಿ
5. ಬಂದರ್‌ನ ಕ್ರೆಸೆಂಟ್ ಶಾಲೆ ಬಳಿ
ವಾಯುಗುಣಮಟ್ಟದ ನಿಖರ ಮಾಹಿತಿ
ನಗರ ವ್ಯಾಪ್ತಿಯಲ್ಲಿ ಐದು ಪ್ರದೇಶದಲ್ಲಿ ವಾಯುಗುಣಮಟ್ಟ ಮಾಪನ ಯಂತ್ರಗಳನ್ನು ಅಳವಡಿಸಲಾಗಿದೆ. ಪ್ರತೀ ಕ್ಷಣದ ವಾಯು ಗುಣಮಟ್ಟದ ಮಾಹಿತಿ ಇದರ ಮೂಲಕ ದೊರೆಯುತ್ತದೆ. ನಿಖರ ಮಾಹಿತಿಯನ್ನು ಇದರ ಮೂಲಕ ಪಡೆಯುತ್ತಿದ್ದೇವೆ. ಒನ್‌ಟಚ್ ಆ್ಯಪ್ ಮೂಲಕ ಸಾರ್ವಜನಿಕರಿಗೂ ಇದರ ಮಾಹಿತಿ ಮೊಬೈಲ್‌ನಲ್ಲೇ ದೊರೆಯಲಿದೆ.
-ಅರುಣ್ ಪ್ರಭಾ ಕೆ.ಎಸ್.,ಜನರಲ್ ಮ್ಯಾನೇಜರ್, ಸ್ಮಾರ್ಟ್ ಸಿಟಿ-ಮಂಗಳೂರು
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.