ಸೇತುವೆ ಕುಸಿದು 3 ತಿಂಗಳು ಕಳೆದರೂ ಸ್ಪಂದನೆಯಿಲ್ಲ

ಕಕ್ಕುಂಜೆ - ವಂಡಾರು ಸಂಪರ್ಕ ರಸ್ತೆ ;  ಕುಸಿದ ಸೇತುವೆಯಲ್ಲೇ ನಿತ್ಯ ವಾಹನ ಸಂಚಾರ

Team Udayavani, Dec 20, 2021, 5:55 PM IST

ಸೇತುವೆ ಕುಸಿದು 3 ತಿಂಗಳು ಕಳೆದರೂ ಸ್ಪಂದನೆಯಿಲ್ಲ

ವಿಶೇಷ ವರದಿ-ಕುಂದಾಪುರ: ಗಾವಳಿ ಹಾಗೂ ಕಕ್ಕುಂಜೆ ಕಡೆಯಿಂದ ವಂಡಾರು ಕಡೆಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್‌ ರಸ್ತೆಯ ಹರ್ಕಾಡಿ ಮಕ್ಕಿಮನೆ ಬಳಿಯ ಸೇತುವೆ ಕುಸಿದು 3 ತಿಂಗಳು ಕಳೆದಿದೆ. ಆದರೂ ಇನ್ನು ಯಾರೂ ಕೂಡ ಇದರ ದುರಸ್ತಿ ಸಂಬಂಧ ಯಾವುದೇ ಕೈಗೊಳ್ಳಲು ಮುಂದಾಗಿಲ್ಲ. ಕುಸಿದ ಸೇತುವೆಯಲ್ಲೇ ಈಗಲೂ ಘನ ವಾಹನಗಳ ಸಹಿತ ನಿತ್ಯ ವಾಹನ ಸಂಚಾರ ಮಾತ್ರ ಸಾಗುತ್ತಿದೆ.

ಕ್ಕುಂಜೆ – ವಂಡಾರು ರಸ್ತೆಯ, ಗಾವಳಿ ಗ್ರಾಸ್‌ ಬಳಿಯಿಂದ ಸುಮಾರು 2 ಕಿ.ಮೀ. ದೂರದ ಹರ್ಕಾಡಿ ಮಕ್ಕಿಮನೆ ಸಮೀಪವಿರುವ ಈ ಸೇತುವೆಯು ಭಾರೀ ಮಳೆಗೆ ಎರಡೆರಡು ಕಡೆಗಳಲ್ಲಿ ಕುಸಿದಿದೆ. ಎರಡೂ ಬದಿಯಲ್ಲೂ ದೊಡ್ಡ – ದೊಡ್ಡ ಕಂದಕ ಸೃಷ್ಟಿಯಾಗಿದ್ದು, ಘನ ವಾಹನಗಳು ಸಂಚರಿಸುವುದು ಅಪಾಯ ಕಾರಿಯಾಗಿದೆ. ಸ್ಥಳೀಯರೆಲ್ಲ ಸೇರಿ ಅನಾಹುತ ಸಂಭವಿಸದಂತೆ ಕುಸಿದ ಎರಡು ಕಡೆಗಳ ಹೊಂಡಕ್ಕೆ ಅಡ್ಡಲಾಗಿ ಮರದ ತುಂಡು ಹಾಗೂ ಗೋಣಿ ಚೀಲ ಇಟ್ಟು, ಎಚ್ಚರಿಕೆಯಿಂದ ಸಂಚರಿಸಲು ಕ್ರಮಕೈಗೊಳ್ಳಲಾಗಿದೆ.

ಪ್ರಮುಖ ರಸ್ತೆ
ಈ ಸೇತುವೆಯು ಉಡುಪಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು, ಕುಂದಾಪುರ ವಿಧಾನಸಭೆ ಕ್ಷೇತ್ರದ ಸಾವಿರಾರು ಮಂದಿ ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ. ಕಕ್ಕುಂಜೆ ಭಾಗದವರು ವಂಡಾರು ಕಡೆಗೆ ಸಂಚರಿಸಲು, ವಂಡಾರು ಭಾಗದವರು ಗಾವಳಿ, ಶಿರಿಯಾರ, ಸ್ಯಾಬ್ರಕಟ್ಟೆ ಕಡೆಗೆ ತೆರಳಲು ಈ ರಸ್ತೆಯನ್ನೇ ನೆಚ್ಚಿಕೊಂಡಿದ್ದಾರೆ.

ನೂರಾರು ವಾಹನ ಸಂಚಾರ
ಈ ಮಾರ್ಗವಾಗಿ ನಿತ್ಯ 200ಕ್ಕೂ ಅಧಿಕ ವಾಹನಗಳು ಸಂಚರಿಸುತ್ತಿದ್ದು, ಅದರಲ್ಲೂ ಪ್ರತೀ ದಿನ ಒಂದು ಬಸ್‌ ಸಹ ಈ ಮಾರ್ಗದಲ್ಲೇ ಸಂಚರಿಸುತ್ತಿದೆ. ಇದಲ್ಲದೆ ಕೆಂಪು ಕಲ್ಲು, ಶಿಲೆಕಲ್ಲು, ಡಾಮರು ತುಂಬಿದ ಘನ ವಾಹನಗಳು ಸಹ ಈ ಕುಸಿದ ಸೇತುವೆಯಲ್ಲೇ ಸಂಚರಿಸುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಆವಶ್ಯಕತೆಯಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

40 ವರ್ಷ
ಹಿಂದಿನ ಸೇತುವೆ
ಕಕ್ಕುಂಜೆ- ವಂಡಾರು ರಸ್ತೆ ಹಾದುಹೋಗುವ ಹರ್ಕಾಡಿ ಮಕ್ಕಿಮನೆ ಬಳಿಯ ಈ ಸೇತುವೆ ನಿರ್ಮಾಣಗೊಂಡು ಸರಿ ಸುಮಾರು 40 ವರ್ಷಗಳೇ ಕಳೆದಿವೆ. ಈಗ ಮಳೆಗೆ ಎರಡೆರಡು ಕಡೆಗಳಲ್ಲಿ ಕುಸಿದಿದ್ದು, ಮುಂಬರುವ ಮಳೆಗಾಲಕ್ಕೂ ಮುನ್ನ ಅಭಿವೃದ್ಧಿಪಡಿಸದಿದ್ದರೆ, ಇನ್ನಷ್ಟು ಕುಸಿದು ಬೀಳುವ ಸಾಧ್ಯತೆ ಇಲ್ಲದಿಲ್ಲ.

ಆಕ್ರೋಶ
ಈ ಸೇತುವೆ ಕುಸಿದು 3 ತಿಂಗಳುಗಳೇ ಕಳೆದಿವೆ. ಆದರೂ ಈವರೆಗೆ ಇಲ್ಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳಲು ಯಾರೂ ಸಹ ಮುಂದಾಗಿಲ್ಲ. ಇದರ ದುರಸ್ತಿಗೆ ಇನ್ನೆಷ್ಟು ತಿಂಗಳು ಕಾಯಬೇಕು. ಸಂಪೂರ್ಣ ಕುಸಿದು ಬೀಳುವವರೆಗೆ ಇಲ್ಲಿಗೆ ಬಂದು ನೋಡುವ ಅಥವಾ ದುರಸ್ತಿಗೆ ಮುಂದಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುರಸ್ತಿಗೆ ಪ್ರಯತ್ನ
ಸದ್ಯಕ್ಕೆ ಯಾವುದೇ ಅನುದಾನವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅನುದಾನ ಬಂದಾಗ ಈ ಸೇತುವೆ ಅಭಿವೃದ್ಧಿಗೆ ವಿನಿಯೋಗಿ ಸಲಾಗುವುದು. ಶಾಸಕರ ಗಮನಕ್ಕೂ ತರಲಾಗುವುದು. ಇನ್ನು ತಾತ್ಕಾಲಿಕ ದುರಸ್ತಿ ಬಗ್ಗೆ ಭೇಟಿ ನೀಡಿ, ಪರಿಶೀಲಿಸಲಾಗುವುದು.
– ನಾಗಶಯನ, ಎಂಜಿನಿಯರ್‌
ಜಿ.ಪಂ. ಉಡುಪಿ

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.