ಬಯಸಿದರೆ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆ : ಕೇಂದ್ರ ಸರಕಾರ
Team Udayavani, Dec 20, 2021, 7:00 PM IST
ನವದೆಹಲಿ : ಶಾಲಾ ವಿದ್ಯಾರ್ಥಿಗಳು ಬಯಸಿದರೆ ಭಗವದ್ಗೀತೆ ಬೋಧನೆಗೆ ರಾಜ್ಯ ಸರಕಾರಗಳು ಅವಕಾಶ ನೀಡಬಹುದು ಎಂದು ಕೇಂದ್ರ ಸರಕಾರ ಸೋಮವಾರ ಲೋಕಸಭೆಗೆ ತಿಳಿಸಿದೆ.
ಕೆಳಮನೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಶಿಕ್ಷಣ ಸಚಿವೆ ಅನ್ನಪೂರ್ಣ ದೇವಿ, ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಮಕ್ಕಳಿಗೆ ಪ್ರಾದೇಶಿಕ ಭಾಷೆಯ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಶಿಕ್ಷಣವು (ಸಂವಿಧಾನ) ಸಮಕಾಲೀನ ಪಟ್ಟಿಯಲ್ಲಿ ಬರುತ್ತದೆ. ರಾಜ್ಯಗಳು ಬಯಸಿದರೆ, ಅವರು ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ಸೇರಿಸಬಹುದು ಎಂದರು.
”ಸಿಬಿಎಸ್‌ಇ ಮಾದರಿಯಡಿ, ಭಗವದ್ಗೀತೆಯನ್ನು ಈಗಾಗಲೇ ವಿವಿಧ ತರಗತಿಗಳಲ್ಲಿ ಕಲಿಸಲಾಗುತ್ತಿದೆ. ರಾಜ್ಯಗಳು ಬಯಸಿದರೆ ಅವರು ಭಗವದ್ಗೀತೆಯನ್ನು ಸೇರಿಸಬಹುದು, ”ಎಂದು ಸಚಿವರು ಪ್ರಶ್ನೋತ್ತರ ಅವಧಿಯಲ್ಲಿ ಸದನಕ್ಕೆ ತಿಳಿಸಿದರು.
ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆಗೆ ನಿಬಂಧನೆಗಳನ್ನು ತರಲು ಸರ್ಕಾರವು ಪರಿಗಣಿಸುತ್ತಿದೆಯೇ ಎಂದು ಉತ್ತರ ಮುಂಬೈನ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಅವರ ಪ್ರಶ್ನೆಗೆ ಸಚಿವೆ ಉತ್ತರಿಸಿದರು.
ಪ್ರಶ್ನೆಯನ್ನು ಕೇಳುವಾಗ, ಗೋಪಾಲ್ ಶೆಟ್ಟಿ ಅವರು ಕಾಂಗ್ರೆಸ್ ಸದಸ್ಯರು ಭಗವದ್ಗೀತೆಯನ್ನು ಓದುವಂತೆ ಸಲಹೆ ನೀಡಿದರು. ಇದರಿಂದ ಅವರು ಒಳ್ಳೆಯ ಕೆಲಸ ಮಾಡುವ ಬುದ್ಧಿವಂತಿಕೆಯನ್ನು ಪಡೆಯುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
MUST WATCH
ಹೊಸ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.