ಕವಿಗಳು ಎಚ್ಚರದ ಪರಿವೆಯ ಕರೆ ಗಂಟೆ

ಸಂಸ್ಕೃತಿ, ಚರಿತ್ರೆ, ಪ್ರಭುತ್ವವನ್ನು ಪುನರುಜ್ಜೀವನಗೊಳಿಸುವ ಆಶಯ ಹೊಂದಿದ

Team Udayavani, Dec 21, 2021, 5:50 PM IST

ಕವಿಗಳು ಎಚ್ಚರದ ಪರಿವೆಯ ಕರೆ ಗಂಟೆ

ಕಲಬುರಗಿ: ಕಾವ್ಯ ಈ ಕ್ಷಣದ ವೀಕ್ಷಣೆಯಿಂದ ಅದೇನನ್ನೋ ದರ್ಶಿಸುವಂತಿರಬೇಕು. ಕವಿಗಳಾದವರು ಎಚ್ಚರದ ಪರಿವೆಯ ಕರೆ ಗಂಟೆಗಳಾಗಬೇಕು ಎಂದು ಹಿರಿಯ ಕವಿ ಡಾ|ಎಚ್‌.ಎಸ್‌. ಶಿವಪ್ರಕಾಶ ಹೇಳಿದರು.

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ “ಹೋಗಿ ಬನ್ನಿ ಋತುಗಳೇ’ (ನಾಲ್ಕು ದಶಕದ ಕವಿತೆಗಳು) ಸಂವಾದ ಮತ್ತು ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶ್ವ ಮಾರುಕಟ್ಟೆಯ ಸಂದರ್ಭದಲ್ಲಿ ಬದುಕುತ್ತಿರುವ ಈ ಸಮಯದಲ್ಲಿ ಪುಣ್ಯಕೋಟಿ ಬರೆದ ಕವಿ “ದೇಶಿ ಕವಿ’ಯೋ ಅಥವಾ “ವಿಶ್ವ ಕವಿ’ಯೋ ಎಂಬುದು ನಿರ್ಣಯಿಸಬಾರದು. ನಾವೇ ವಿಶ್ವದ ಭಾಗವಾದಾಗ ಮಾತ್ರ ಅದು ಕಾಣುತ್ತದೆ. ಎಲ್ಲವೂ ಇಲ್ಲಿ ಅನಿಮಿತ್ತವಾಗಿದೆ. ನಾವು ಏನಿದ್ದೇವೆ?, ಹೇಗಿದ್ದೇವೆ ಎಂಬುದನ್ನು ಜನ ಗಮನಿಸುತ್ತಾರೆ ಎಂದು ತಿಳಿಸಿದರು.

ಇಲ್ಲಿ ಎಲ್ಲವೂ ಇದೆ, ಏನೂ ಇಲ್ಲ. ಅಕ್ಕಮಹಾದೇವಿ, ಕಾರ್ಲ್ ಮಾರ್ಕ್ಸ್ನಂತವರ ಸಾಹಿತ್ಯ ಸಾರ್ವಕಾಲಿಕವಾಗಿದೆ. ಕವಿಗಳು ಮರಗಿಡಗಳ ಜತೆಗೆ ಬದುಕುತ್ತಾರೆ, ಸಂವಹನ ಮಾಡುತ್ತಾರೆ. ಆಗ ಮಾತ್ರ ಸಾರ್ವಕಾಲಿಕರಾಗಬಹುದು. ಚರಿತ್ರೆ ಒಂದು ಸ್ಥಿತಿಯಿಂದ ಉನ್ನತ ಸ್ಥಿತಿಗೆ ಹೋಗುತ್ತದೆ. ಬುದ್ಧ, ಬಸವ, ಏಸುಕ್ರಿಸ್ತರ ಸಾವಿರಾರು ವರ್ಷಗಳ ತತ್ವಗಳು ಸ್ಥಾನಪಲ್ಲಟವಾದರೂ ಹೊಸ ಚರಿತ್ರೆಯೊಂದಿಗೆ ಜೋಡಿಸಿಕೊಂಡು ಔನ್ನತ್ಯಕ್ಕೆ ಏರುತ್ತವೆ ಎಂದರು.

ಕೃತಿ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಡಾ|ಸಿರಾಜ್‌ ಅಹ್ಮದ್‌ ಮಾತನಾಡಿ, ಶಿವಪ್ರಕಾಶ ಅವರ ವೈವಿಧ್ಯಮಯ ಕಾವ್ಯಗಳಲ್ಲಿ ಸಾರ್ವಕಾಲಿಕ. ಸರ್ವವ್ಯಾಪಿ ಗುಣಗಳಿದ್ದು, ಕನ್ನಡ ಕಾವ್ಯ ವಿಸ್ತಾರಗೊಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು. ಎಚ್‌. ಎಸ್‌. ಶಿವಪ್ರಕಾಶರ ಕಾವ್ಯಕ್ಕೆ ಚಲಿಸುವ, ಹರಿಯುವ ಆಹ್ವಾನೆಗೊಳಿಸುವ ಶಕ್ತಿಯಿದೆ. ಕನ್ನಡ ಸಂವೇದನೆ ಸಂವರ್ಧನೆಗೊಂಡಿದೆ. ಕಾವ್ಯ ಬದುಕಿನ ಎಲ್ಲವನ್ನು ಹಾಸು ಹೊಕ್ಕು, ಮಿಳಿತಗೊಂಡಂತಿದೆ. ಇವರ ದೇಶಿ ಅನುಭವಕ್ಕೆ ಪರಿಯೇ ಇಲ್ಲ. ಆಯುಧಗಳಿಲ್ಲದ, ಹಿಂಸೆ ಇಲ್ಲದ ಸಂಸ್ಕತಿಯನ್ನು ಹುಡುಕಾಡುವ ಗುಣ ಲಕ್ಷಣಗಳು ಇವರ ಕಾವ್ಯಕ್ಕಿದ್ದು, ಸಂಸ್ಕೃತಿ, ಚರಿತ್ರೆ, ಪ್ರಭುತ್ವವನ್ನು ಪುನರುಜ್ಜೀವನಗೊಳಿಸುವ ಆಶಯ ಹೊಂದಿದ “ಅಮೆಜಾನ್‌’ ಕವಿ ಶಿವಪ್ರಕಾಶ ಎಂದು ವರ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಚೆನ್ನಬಸವಣ್ಣ, ಶಿವಪ್ರಕಾಶರ ಶತಮಾನದ ಕಾವ್ಯ ಹಾಗೂ ಈಗಿನ ನಾಲ್ಕು ದಶಕದ ಕಾವ್ಯ ಅವಲೋಕಿಸಿದಾಗ, ಅವರೊಬ್ಬ ಎಚ್ಚರದ ಕವಿ ಎಂಬುದು ರುಜುವಾತಾದಂತಿದೆ. ಯಾವುದೇ ಎಲ್ಲೆ, ಚೌಕಟ್ಟಿಗೆ ಒಳಪಡದ ಸೀಮಾತೀತ ಕವಿಯಾಗಿದ್ದು, ತಮ್ಮದೇ ಆದ ಕಾವ್ಯ ಮಾರ್ಗವನ್ನು ಅವರು ಕಂಡುಕೊಂಡಿದ್ದಾರೆ ಎಂದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ
ಡಾ|ಬಸವರಾಜ ಡೋಣೂರ, ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ|ಎಚ್‌.ಟಿ. ಪೋತೆ ಮಾತನಾಡಿದರು. ಪ್ರಾಧ್ಯಾಪಕ ಡಾ|ವಿಕ್ರಮ್‌ ವಿಸಾಜಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ರಾಮ ಹೊಲ್ಕಲ್‌ ಶ್ರೀಶೈಲ್‌ ನಾಗರಾಳ ಸೇರಿ ಹಲವರು ಪಾಲ್ಗೊಂಡಿದ್ದರು.

ಬಹುತ್ವ ಮತ್ತು ಏಕತ್ವದ ಕುರಿತು ನಮ್ಮಲ್ಲಿ ಇನ್ನೂ ಸ್ಪಷ್ಟತೆಗಳಿಲ್ಲ. ಹೀಗಾಗಿ ದ್ವಂದ್ವಾತ್ಮಕ ಭಾಷೆಗಳನ್ನು ಬಳಸುತ್ತಿದ್ದೇವೆ. ಡೋಂಗಿತನ ಬಹುದೊಡ್ಡದಾಗಿ ಕಾಣುತ್ತಿದೆ. ಆದರೆ, ಏಕತ್ವ ಇಲ್ಲದೆ ಬಹುತ್ವ ಇರಲು ಸಾಧ್ಯವೇ ಇಲ್ಲ.
ಡಾ|ಎಚ್‌.ಎಸ್‌.ಶಿವಪ್ರಕಾಶ,
ಹಿರಿಯ ಕವಿ

ಕನ್ನಡಕ್ಕೆ ವಿಶ್ವಮನ್ನಣೆ ತಂದು ಕೊಟ್ಟವರಲ್ಲಿ ಡಾ|ಎಚ್‌.ಎಸ್‌. ಶಿವಪ್ರಕಾಶ ಕೂಡ ಒಬ್ಬರಾಗಿದ್ದು, ಬಹುತ್ವವನ್ನು ಕಾವ್ಯಾನುಭವವಾಗಿಸಿಕೊಂಡು ಕನ್ನಡದ ಸಮದರ್ಶಿತ್ವವನ್ನು ಪ್ರಕಟಿಸಿದ್ದಾರೆ.
ಪ್ರೊ|ಎಚ್‌.ಟಿ.ಪೋತೆ,
ನಿರ್ದೇಶಕ, ಕನ್ನಡ ಅಧ್ಯಯನ ಸಂಸ್ಥೆ, ಗುವಿವಿ

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

2-kalburgi

Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.