ಎಸಿಟಿ ಹಾಕಿ: ಜಪಾನ್ ಬಲೆಗೆ ಬಿದ್ದ ಭಾರತ; ಮೂರನೇ ಸ್ಥಾನಕ್ಕೆ ಭಾರತ-ಪಾಕಿಸ್ಥಾನ ಸ್ಪರ್ಧೆ
3-5 ಗೋಲುಗಳ ಸೋಲು ; ಇಂದು ಜಪಾನ್-ಕೊರಿಯಾ ಫೈನಲ್
Team Udayavani, Dec 22, 2021, 5:00 AM IST
ಢಾಕಾ: ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ (ಎಸಿಟಿ) ಸೆಮಿಫೈನಲ್‌ನಲ್ಲಿ ಜಪಾನ್ ಕೈಯಲ್ಲಿ 3-5 ಅಂತರದ ಆಘಾತಕಾರಿ ಸೋಲುಂಡ ಭಾರತದ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ಥಾನ ತಂಡ ಕೊರಿಯಾಕ್ಕೆ ಶರಣಾಗಿತ್ತು.
ಇದರೊಂದಿಗೆ ಕಳೆದ ಸಲದ ಜಂಟಿ ಚಾಂಪಿಯನ್ ತಂಡಗಳೆರಡೂ ಮಾಜಿ ಎನಿಸಿಕೊಂಡವು. ಹಾಗೆಯೇ ಭಾರತ, ಪಾಕಿಸ್ಥಾನ ತಂಡಗಳಿಲ್ಲದ ಮೊದಲ ಫೈನಲ್‌ಗೆ ಎಸಿಟಿ ಟೂರ್ನಿ ಸಾಕ್ಷಿಯಾಗಲಿದೆ. ಇತ್ತಂಡಗಳಿನ್ನು ಬುಧವಾರ 3ನೇ ಸ್ಥಾನಕ್ಕೆ ಸೆಣಸಾಡಲಿವೆ.
ಲೀಗ್ ಹಂತದಲ್ಲಿ ಜಪಾನ್‌ಗೆ 6-0 ಗೋಲಗಳ ಆಘಾತವಿಕ್ಕಿದ ಭಾರತವೇ ಸೆಮಿಫೈನಲ್‌ನ ನೆಚ್ಚಿನ ತಂಡವಾಗಿತ್ತು. ಕೂಟದಲ್ಲಿ ಸೋಲನ್ನೇ ಕಾಣದ ಮನ್‌ಪ್ರೀತ್ ಸಿಂಗ್ ಪಡೆಯ ಫೈನಲ್ ಕನಸು ಗರಿಗೆದರಿತ್ತು. ಆದರೆ ಉಪಾಂತ್ಯದಲ್ಲಿ ಸಂಭವಿಸಿದ್ದೇ ಬೇರೆ!
ಎರಡೇ ನಿಮಿಷದಲ್ಲಿ 2 ಗೋಲ್!
ಜಪಾನ್ ಸೇಡು ತೀರಿಸಿಕೊಳ್ಳುವ ಇರಾದೆಯಿಂದಲೇ ಆಡಲಿಳಿದು ಕನಸಿನ ಆರಂಭವನ್ನೇ ಪಡೆಯಿತು. ಎರಡೇ ನಿಮಿಷಗಳಲ್ಲಿ 2 ಗೋಲು ಸಿಡಿಸಿ ಭಾರತವನ್ನು ಬೆಚ್ಚಿ ಬೀಳಿಸಿತು. ಶೋಟ ಯಮಾಡ ಮತ್ತು ರೈಕಿ ಫುಜಿಶಿಮ ಈ ಮುನ್ನಡೆ ಕೊಡಿಸಿದರು. ಬಳಿಕ ಯೊಶಿಕಿ ಕಿರಿಶಿಟ (14ನೇ ನಿಮಿಷ), ಕೋಸಿ ಕವಾಬೆ (35ನೇ ನಿಮಿಷ) ಮತ್ತು ರಿಯೋಮ ಊಕ (41ನೇ ನಿಮಿಷ) ಗೋಲು ಬಾರಿಸಿದರು.
ದ್ವಿತೀಯ ಕ್ವಾರ್ಟರ್‌ನಲ್ಲಿ ಗೋಲಿನ ಖಾತೆ ತೆರೆದ ಭಾರತ ಮುನ್ನುಗ್ಗುವ ಸೂಚನೆ ನೀಡಿತಾದರೂ ಜಪಾನ್ ಆಕ್ರಮಣಕ್ಕೇನೂ ಹಿನ್ನಡೆಯಾಗಲಿಲ್ಲ. 17ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ಈ ಗೋಲು ದಾಖಲಿಸಿದರು. ವಿರಾಮದ ವೇಳೆ ಜಪಾನ್ 3-1ರ ಭರ್ಜರಿ ಮುನ್ನಡೆಯಲ್ಲಿತ್ತು.
ಭಾರತದ ಉಳಿದೆರಡು ಗೋಲುಗಳನ್ನು ಹರ್ಮನ್‌ಪ್ರೀತ್ ಸಿಂಗ್ (43ನೇ ನಿಮಿಷ) ಮತ್ತು ಹಾರ್ದಿಕ್ ಸಿಂಗ್ (58ನೇ ನಿಮಿಷ) ಹೊಡೆದರು.ಬುಧವಾರದ ಫೈನಲ್‌ನಲ್ಲಿ ಜಪಾನ್-ಕೊರಿಯಾ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಬ್ಯಾಟಿಂಗ್‌ನತ್ತ ದ್ರಾವಿಡ್ ವಿಶೇಷ ಗಮನ
ಪಾಕ್ ಎದುರು ಗೆದ್ದ ಕೊರಿಯಾ
ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಕೂಟದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ಥಾನವನ್ನು 6-5 ಅಂತರದಿಂದ ಮಣಿಸಿದ ಕೊರಿಯಾ ಫೈನಲ್ ಪ್ರವೇಶಿಸಿದೆ. ಪಂದ್ಯದ ಆರಂಭದಿಂದ ಅಂತಿಮ ಕ್ಷಣದ ವರೆಗೆ ಎರಡೂ ತಂಡಗಳು ಜಿದ್ದಿಗೆ ಬಿದ್ದವರಂತೆ ಹೋರಾಡಿ ಗೋಲು ದಾಖಲಿಸುತ್ತಲೇ ಸಾಗಿದವು.ಅಂತಿಮ ಕ್ವಾರ್ಟರ್‌ನಲ್ಲಿ ಕೆಲವೇ ಕ್ಷಣ ಬಾಕಿ ಇರುವಾಗ ಪಂದ್ಯ 5-5 ಸಮಬಲದಲ್ಲಿತ್ತು. ಆಗ ಕೊರಿಯಾ ಗೆಲುವಿನ ಗೋಲು ಬಾರಿಸಿ ಮೆರೆದಾಡಿತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.