ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ ನೀವು ?ಡಿಕೆಶಿಗೆ ಬಿಜೆಪಿ
ಮತಾಂತರ : ಬಿಜೆಪಿ ಕಾಂಗ್ರೆಸ್ ಟ್ವೀಟ್ ವಾರ್
Team Udayavani, Dec 22, 2021, 11:42 AM IST
ಬೆಂಗಳೂರು: ಮತಾಂತರ ನಿಷೇಧ ಮಸೂದೆ ಮಂಡನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣ ಘಟಕದ ಮಧ್ಯೆ ಭಾರಿ ಟ್ವೀಟ್ ವಾರ್ ಪ್ರಾರಂಭವಾಗಿದೆ. ಸದನದಲ್ಲಿ ಮಸೂದೆಯ ಪ್ರತಿಯನ್ನು ಹರಿದು ಹಾಕಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಬುಧವಾರ(ಡಿಸೆಂಬರ್ 22) ಸರಣಿ ಟ್ವೀಟ್ ಮಾಡಿದೆ.
“ಮಾನ್ಯ ಡಿಕೆಶಿ ಅವರೇ ನೀವು ಸದನದಲ್ಲಿ ಮತಾಂತರ ನಿಷೇಧಕ್ಕಾಗಿ ಮಂಡಿಸಿದ ವಿಧೇಯಕದ ಪ್ರತಿಯನ್ನು ಹರಿದು ಹಾಕಿದಿರಿ. ಇರಲಿ, ತೊಂದರೆ ಇಲ್ಲ.
ಏಕೆಂದರೆ ನಿಮಗಾಗಲಿ , ನಿಮ್ಮ ಅಧಿನಾಯಕ ರಾಹುಲ್ ಗಾಂಧಿಯವರಿಗಾಗಲಿ ಸಂಸದೀಯ ವ್ಯವಸ್ಥೆ ಹಾಗೂ ನಡಾವಳಿಯಲ್ಲಿ ನಂಬಿಕೆಯೇ ಇಲ್ಲ.
ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ ನೀವು ?
ಡಿಕೆಶಿ ಅವರೇ ನಿಮಗೆ ಅನುಕೂಲಕರ ವಾತಾವರಣ ಇಲ್ಲ ಎಂದಾದರೆ ನೀವು ವಿಧೇಯಕದ ಪ್ರತಿಯಷ್ಟೇ ಅಲ್ಲ, ಸದನದ ನಿಯಮಾವಳಿಗಳನ್ನೇ ಹರಿದು ಬಿಸಾಡಬಲ್ಲಿರಿ ! ಏಕೆಂದರೆ ನಿಮಗೆ ಸದನ, ವ್ಯವಸ್ಥೆ, ನಿಯಮ ಇತ್ಯಾದಿಗಳ ಮೇಲೆ ಗೌರವವೇ ಇಲ್ಲ. ಹೇಗಾದರೂ ಮಾಡಿ ಸೋನಿಯಾ ಗಾಂಧಿ ಮೆಚ್ಚುಗೆ ಗಳಿಸಬೇಕೆಂಬುದಷ್ಟೇ ನಿಮ್ಮ ಧ್ಯೇಯ ಡಿಕೆಶಿ ಅವರೇ ಕನಕಪುರದ ಬೆಟ್ಟದ ಮೇಲೆ ಏಸುಕ್ರಿಸ್ತನ ಏಕಶಿಲಾ ವಿಗ್ರಹ ಸ್ಥಾಪನೆ ಮಾಡಲು ಹೊರಟವರಲ್ಲವೇ ನೀವು ?
ಯಾರ ಓಲೈಕೆಗೆ ನೀವು ಈ ಕೆಲಸಕ್ಕೆ ಮುಂದಾಗಿದ್ದಿರಿ ? ಸೋನಿಯಾ ಗಾಂಧಿ ಮೆಚ್ಚುಗೆ ಗಳಿಸುವುದಕ್ಕಲ್ಲವೇ ? ನಿಮಗೆ ಸ್ವಧರ್ಮ, ರಾಷ್ಟ್ರಧರ್ಮದ ಮೇಲೆ ಕಿಂಚಿತ್ತಾದರೂ ನಂಬಿಕೆ ಇದೆಯೇ ? ಎಂದು ಟ್ವೀಟ್ ಮಾಡಿದೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತಿರುಗೇಟು ನೀಡಿದೆ. “ಕೊಟ್ಟ ಕುದುರೆ ಏರಲಾರದೆ, ಸುಮ್ಮನೇ ಮೈಪರಚುಕೊಳ್ಳುವವರು, ವೀರರೂ ಅಲ್ಲ, ಧೀರರೂ ಅಲ್ಲ. ಈ ಮಾತು ಕೇಂದ್ರ – ರಾಜ್ಯದ ಬಿಜೆಪಿ ಸರ್ಕಾರಗಳು ಈಗಿರುವ ಕಾನೂನನ್ನು ಸಮರ್ಪಕವಾಗಿ ಬಳಸಿಲ್ಲ ಎಂಬುದಕ್ಕೆ ಸಾಕ್ಷಿ ಬಲವಂತದ ಮತಾಂತರಕ್ಕೊಳಪಟ್ಟವರು ಎಷ್ಟು ದೂರು ನೀಡಿದ್ದಾರೆ? ಸಮೀಕ್ಷೆ ಆಗಿದೆಯೇ? ವರದಿ ಇದೆಯೇ? ಎಂಬುದನ್ನ ಸದನದ ಮುಂದಿಟ್ಟು ಮಾತಾಡಲಿ.
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುತ್ತದೆ ಹಿಂದೂ ಸಂಸ್ಕೃತಿ. ಅದಕ್ಕೆ ಬೇಕಿರುವುದು ಪ್ರೀತಿ, ನಂಬಿಕೆಯೇ ಹೊರತು, ಜಾತಿ, ಧರ್ಮ ಎನ್ನುವ ಲೆಕ್ಕಾಚಾರಗಳಲ್ಲ. ರಾಜ್ಯ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯ ಪ್ರಕಾರ ಮದುವೆಯಾಗಲು ಹೆಣ್ಣು ಗಂಡಿನ ಸಮ್ಮತಿಯಲ್ಲ ಬದಲಿಗೆ ಸರ್ಕಾರದ ಸಮ್ಮತಿ ಬೇಕಿದೆ.
ಮಾನ್ಯ @DKShivakumar ಅವರೇ,
ನೀವು ಸದನದಲ್ಲಿ #AntiConversionBill ಪ್ರತಿಯನ್ನು ಹರಿದು ಹಾಕಿದಿರಿ.
ಏಕೆಂದರೆ ನಿಮಗಾಗಲಿ, ನಿಮ್ಮ ಅಧಿನಾಯಕ ರಾಹುಲ್ ಗಾಂಧಿಯವರಿಗಾಗಲಿ ಸಂಸದೀಯ ವ್ಯವಸ್ಥೆ ಹಾಗೂ ನಡಾವಳಿಯಲ್ಲಿ ನಂಬಿಕೆಯೇ ಇಲ್ಲ.
ಎಷ್ಟಾದರೂ, ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ ನೀವು. pic.twitter.com/SxRXxf1A95
— BJP Karnataka (@BJP4Karnataka) December 22, 2021
ಮತಾಂತರ ನಿಷೇಧ ಕಾಯ್ದೆಯು ಒಂದು ಕಪ್ಪು ಚುಕ್ಕೆಯಂತಿದೆ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಈ ಕಾಯ್ದೆಯು ಮೀರಿದೆ. ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾ ಸಂಸ್ಥೆಗಳು ಬಲವಂತದ ಮತಾಂತರ ಮಾಡುತ್ತಿವೆ ಎನ್ನುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಸಚಿವರ ಮಕ್ಕಳು ಅಂತಹ ಸಂಸ್ಥೆಗಳಲ್ಲೇ ಓದುತ್ತಿಲ್ಲವೇ ” ಎಂದು ಪ್ರಶ್ನೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.