ಜಾತಿ ಸೋಸುವಿಕೆ ಅವಶ್ಯ: ಮಾಲಗತ್ತಿ
Team Udayavani, Dec 22, 2021, 12:16 PM IST
ಕಲಬುರಗಿ: ಸಮಾಜದಲ್ಲಿನ ಜಾತಿ, ವರ್ಣ, ಧರ್ಮದ ವ್ಯವಸ್ಥೆ ತಪ್ಪಲ್ಲ. ಆದರೆ, ಅದನ್ನು ಬದಲಾದ ಕಾಲಕ್ಕೆ ತಕ್ಕಂತೆ ಸೋಸುವಿಕೆ ಆಗದಿರುವುದು ತಪ್ಪು ಎಂದು ಹಿರಿಯ ಸಾಹಿತಿ ಪ್ರೊ| ಅರವಿಂದ ಮಾಲಗತ್ತಿ ಬೇಸರ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಮುಖಾಮುಖೀ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೆ ಕಾಲದ ಚಿನ್ನ ಭಾರ ಎಂದು ಯಾರೂ ಎಸೆಯುವುದಿಲ್ಲ. ಅದೇ ಚಿನ್ನ ಕರಗಿಸಿ, ಸೋಸಿ ಅದಕ್ಕೆ ಹೊಸ ರೂಪ ಕೊಟ್ಟು ಧರಿಸುತ್ತೇವೆ. ಅದೇ ರೀತಿ ಜಾತಿ, ಧರ್ಮದ ನ್ಯೂನತೆ ಸೋಸಿ ಸರಿಪಡಿಸಿಕೊಳ್ಳುವುದು ಅಗತ್ಯವಿದೆ. ಇಲ್ಲವಾದಲ್ಲಿ ಸಮಾಜ ಜಡವಾಗುತ್ತದೆ ಎಂದರು.
ನಮ್ಮ ಆಲೋಚನೆಗಳ ಜತೆ, ನಡೆಯೂ ಅವಲಂಬನೆ ಆಗಬೇಕು. ಆಚಾರ ಹೇಳಿದರೆ ಸಾಲದು, ಅದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದೂ ಮುಖ್ಯ. ನಮ್ಮ ಕೃತಿಯಲ್ಲಿರುವುದನ್ನು ಅನುಷ್ಠಾನಕ್ಕೂ ತರಬೇಕು. ಹೊಸ ಆಲೋಚನೆ, ಚಿಂತನೆ ಬಂದಾಗ ವಿರೋಧ ವ್ಯಕ್ತವಾಗುವುದು ಸಹಜ. ಆದರೆ, ತೆರೆದ ಹಾಗೂ ಮುಕ್ತ ಆಲೋಚನೆಗಳಿಂದ ಮನಸ್ಸು ಪರಿಶುದ್ಧವಾಗುತ್ತದೆ. ವಿರೋಧ ಮೀರಿ ನಿಲ್ಲುವ ಗುಣವನ್ನು ಕನ್ನಡ ಸಾಹಿತ್ಯ ನೀಡುತ್ತದೆ ಎಂದು ಹೇಳಿದರು.
ಕಂಡ-ಕಂಡಿದ್ದನ್ನೆಲ್ಲ ವಿರೋಧಿಸುವುದು ಬಂಡಾಯ ಸಾಹಿತ್ಯವಲ್ಲ. ಸಮಾಜದಲ್ಲಿನ ಕೆಟ್ಟದ್ದನ್ನು ವಿರೋಧಿಸುವುದೇ ಬಂಡಾಯ ಸಾಹಿತ್ಯ. ಅಲ್ಲದೇ, ಸಾಹಿತ್ಯಗಾರನಿಗೆ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಸತ್ಯಹೇಳುವ ಗುಣ ಇರಬೇಕು. ಆಗ ನಿತ್ಯ ನೂತನವಾಗಿ ಕಾಣುತ್ತದೆ ಎಂದು ತಿಳಿಸಿದರು.
ಸೋಲು-ಗೆಲುವುಗಳು ನಮ್ಮೊಳಗೆ ಇವೆ. ಸೋಲುತ್ತೇವೆ ಅಂತ ನಾವೇ ಅಂದುಕೊಂಡರೆ ಸೋಲುತ್ತೇವೆ. ಗೆದ್ದೇ ಗೆಲ್ಲುತ್ತೇವೆ ಎಂದು ಭಾವಿಸಿದರೆ, ಸೋಲಾದರೂ ಎದ್ದು ಮುಂದೆ ಸಾಗಲು ಸಾಧ್ಯವಾಗುತ್ತದೆ. ಇಂತಹ ಗಟ್ಟಿತನದಿಂದ ಸೋಲು ಗೆಲುವಾಗಿ ಪರಿವರ್ತನೆ ಆಗುತ್ತದೆ ಎಂದರು.
ಜಿಲ್ಲಾ ಸಾಹಿತ್ಯ ಕನ್ನಡ ಸಾಹಿತಿ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸುರೇಶ ಬಡಿಗೇರ, ಶಿವರಾಜ ಅಂಡಗಿ ಹಾಗೂ ಸಾಹಿತ್ಯಾಸ್ತಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.