ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಭಾರೀ ಅವ್ಯವಹಾರ: ರೈತರ ಆರೋಪ

Team Udayavani, Dec 22, 2021, 1:16 PM IST

ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಭಾರೀ ಅವ್ಯವಹಾರ: ರೈತರ ಆರೋಪ

ಕುಳಗೇರಿ ಕ್ರಾಸ್ (ಬಾಗಲಕೋಟೆ) : ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ರೈತರು ಸಂಘದ ಸದಸ್ಯರು ಆರೋಪಿಸಿದರು.

ಪಿಕೆಪಿಎಸ್ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಜನರಲ್ ಮಿಟಿಂಗ್ ನಲ್ಲಿ  ವಾರ್ಷಿಕ ಆದಾಯ ಮತ್ತು ಖರ್ಚು-ಜಮಾ ಓದುತ್ತಿದ್ದ ಸಂದರ್ಭದಲ್ಲಿ ಸದಸ್ಯರು ತಮ್ಮ ಆಕ್ರೋಶ ಹೊರಹಾಕಿದರು.

ಸದಸ್ಯರ ಗಮನಕ್ಕೂ ತರದೆ, ಯಾವುದೆ ದಾಖಲೆ ಪಡೆಯದೆ, ಠರಾವು ಮಾಡದೆ, ಸಾಲದ ಅರ್ಜಿಯನ್ನು ಪಡೇಯದೆ ಸಂಘದಲ್ಲಿ ಜಮಾ ಆಗಿದ್ದ ಸುಮಾರು 22.78 ಲಕ್ಷ ರೂ ತಮ್ಮ ತಮ್ಮ ಹೆಸರಿಗೆ ಪಡೆದುಕೊಂಡಿದ್ದಾರೆ.

ರೈತರು ಮಾತ್ರ ಸಾಲ ಪಡೆಯುವ ಹಕ್ಕಿರುವ ಈ  ಸಂಘದಲ್ಲಿ ಗುಮಾಸ್ತರಿಂದ ಹಿಡಿದು ಶಾಖಾಧಿಕಾರಿ ವರೆಗೂ ಸಾಲ ಪಡೆದು ಅಕ್ರಮ ಎಸಗಿದ್ದಾರೆ ಎಂದು ಆರೋಪ ಮಾಡಿದ ರೈತರು ತನಿಖೆಗೆ ಆಗ್ರಹಿಸಿದ್ದಾರೆ.

ಶಾಖಾಧಿಕಾರಿ, ಸಿಬ್ಬಂದಿ ಹೆಸರಲ್ಲೂ ಸಾಲ: ಅಷ್ಟೇ ಏಕೆ ಸಂಘದ ಸುಪ್ರೋಜರ್ ಸೇರಿದಂತೆ ಗ್ರಾಮದ ಬಿಡಿಸಿಸಿ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಖಾಧಿಕಾರಿಯು ಸಹ ನೀಜವಾದ ರೈತರನ್ನ ಬದಿಗೊತ್ತಿ ತಮ್ಮ ಹೆಸರಲ್ಲಿ ಭೀನ್ ಶೇತ್ಕಿ ಸಾಲ ಪಡೆದುಕೊಂಡಿದ್ದಾರೆ.

ರೈತರ ಹೆಸರಿಗೆ ಮಾತ್ರ ಕೊಡಬೇಕಿದ್ದ ಸಾಲವನ್ನು  ಒಂದೇ ಕುಟುಂಬದಲ್ಲಿ ಇಬ್ಬಿಬ್ಬರು ಸಾಲ ಪಡೆದುಕೊಂಡಿದ್ದಾರೆ ಎಂದು ದಾಖಲೆ ಸಮೇತ ಸಭೇಗೆ ಹಾಜರಿದ್ದ ಕೆಲ ಸದಸ್ಯರು ಆರೋಪಿಸಿದರು.

ಸುಮಾರು ವರ್ಷಗಳಿಂದ ಸಾಲಕ್ಕಾಗಿ ಈ ಸಂಘಕ್ಕೆ ಅಲೇಯುತ್ತಿದ್ದೆವೆ. ಬೇಕಾದ ಎಲ್ಲ ದಾಖಲೆಗಳನ್ನ ಕೈಯಲ್ಲಿ ಹಿಡಿದುಕೊಂಡು ಸಾಲ ಕೇಳಿದರೂ ಸಾಲ ಕೊಟ್ಟಿಲ್ಲ ಯಾವ ದಾಖಲೆ ಇಲ್ಲದೆ ಇವರು ಹೇಗೆ ಸಾಲ ಪಡೆದರು ಎಂದು ಪ್ರಶ್ನಿಸಿದರು.

ಈ ಪಿಕೆಪಿಎಸ್ ನಲ್ಲಿ ದೊರೆಯುವ ರೈತರ  ಯೋಜನೆಗಳು ನೀಜವಾದ ಯಾವ ಒಬ್ಬ ರೈತನಿಗೂ  ಸಿಕ್ಕಿಲ್ಲ. ಎಲ್ಲ ಯೋಜನೆಗಳು ಸಿಬ್ಬಂದಿಗೆ ಮಾತ್ರ ಮಿಸಲಿಟ್ಟಂತಾಗಿದೆ. ಕಾರಣ ಸೂಕ್ತ ತನಿಖೆ ನಡೆಸಿ ರೈತರಿಗಾಗುವ ಅನ್ಯಾಯ ತಡೆಯಬೇಕು ಎಂದರು.

ಸುಮಾರು ವರ್ಷಗಳಿಂದ ಸತ್ತವರ ಹೆಸರಲ್ಲಿ ಸಂಘದವರೇ ಸಾಲ ಪಡೆದುಕೊಂಡು ನುಂಗಿ ಹಾಕಿದ್ದಾರೆ. ವಿಷಯ ಗೊತ್ತಿದ್ದರೂ ಸಂಘದ ಅಧಿಕಾರಿ ವರ್ಗ ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ ರೈತರು ಸಂಬಂದಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಅಸಮಾಧಾನದ ನಡುವೆ ಪಿಕೆಪಿಎಸ್ ಜನರಲ್ ಮಿಟಿಂಗ್  ಚೌ…ಚೌ…ಬಾತ್ ತಿನ್ನುವ ಮೂಲಕ ಮುಕ್ತಾಯವಾಯಿತು. ರೊಚ್ಚಿಗೆದ್ದ ರೈತರೆಲ್ಲ ನಾವು ಶಿರಾ ಉಪ್ಪಿಟ್ಟು ತಿನ್ನೋಕೆ ಬಂದಿಲ್ಲ. ಈ ವಿಷಯ ಇಷ್ಟಕ್ಕೆ ಬಿಡುವುದು ಇಲ್ಲ ಸೂಕ್ತ ತನಿಖೆ ಮಾಡಿಸಿ ನಿಮ್ಮ ಅಕ್ರಮ ಹೊರಗೆ ತಂದು ತಪ್ಪಿಗೆ ಶಿಕ್ಷೆ ಕೊಡಿಸದೆ ಬಿಡುವುದಿಲ್ಲ ಎಂದು ಸಭೆ ಮುಗಿಯುವವರೆಗೂ  ರೋಷದ ಮಾತುಗಳನ್ನಾಡಿದರು.

ಟಾಪ್ ನ್ಯೂಸ್

ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ ಆಪ್: ಕೇಜ್ರಿವಾಲ್ ಹೇಳಿದ್ದೇನು?

AAP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ.. ಕೇಜ್ರಿವಾಲ್ ಹೇಳಿದ್ದೇನು?

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Belve: ಸ್ನಾನಕ್ಕೆಂದು ನದಿಗಿಳಿದಿದ್ದ ಇಬ್ಬರು ಬಾಲಕರು ನೀರುಪಾಲು

Belve: ಸ್ನಾನಕ್ಕೆಂದು ನದಿಗಿಳಿದಿದ್ದ ಇಬ್ಬರು ಬಾಲಕರು ನೀರುಪಾಲು

yatnal

Belagavi: ವಕ್ಫ್ ಹೋರಾಟ ಮಾಡುವುದು ತಪ್ಪಾ..: ವಿಜಯೇಂದ್ರ ದೂರಿನ ಬಗ್ಗೆ ಯತ್ನಾಳ್‌ ಮಾತು

Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ‌; 14 ಕ್ವಿಂಟಲ್‌ ಸಾಮರ್ಥ್ಯದ ಕಂಟೇನರ್‌

Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ‌; 14 ಕ್ವಿಂಟಲ್‌ ಸಾಮರ್ಥ್ಯದ ಕಂಟೇನರ್‌

RAJ-KUNDRA

ED Summons: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಇಡಿ ಸಮನ್ಸ್

BSF Raising Day 2024:ಭಾರತೀಯ ಗಡಿ ರಕ್ಷಕರ ಸ್ಮರಣೆ- ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್

BSF Raising Day 2024:ಭಾರತೀಯ ಗಡಿ ರಕ್ಷಕರ ಸ್ಮರಣೆ- ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rabakavi-Yatnal

Waqf Issue: ಬಸವಣ್ಣನವರ ಕುರಿತ ಹೇಳಿಕೆಗೆ ಬಸನಗೌಡ ಯತ್ನಾಳ್‌ ಕೊಟ್ಟ ಸಮರ್ಥನೆ ಏನು?

pratap-Simha

Waqf Issue: ಪಕ್ಷದ ಕಾರ್ಯಕರ್ತನಾಗಿ ಯಾರೇ ಹೋರಾಟಕ್ಕೆ ಕರೆದರೂ ಹೋಗ್ತಿನಿ: ಪ್ರತಾಪ್‌ ಸಿಂಹ

Mudhol: ಮುಖ್ಯಮಂತ್ರಿ ಕುರ್ಚಿ ಮೇಲೆ‌ 5 ಜನ ಟವೆಲ್… ಸಂಸದ ಗೋವಿಂದ ಕಾರಜೋಳ ಬಾಂಬ್

Mudhol: ಮುಖ್ಯಮಂತ್ರಿ ಕುರ್ಚಿ ಮೇಲೆ‌ 5 ಜನ ಟವೆಲ್… ಸಂಸದ ಗೋವಿಂದ ಕಾರಜೋಳ ಬಾಂಬ್

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

12-

Dharmasthala – 2024ರ ಲಕ್ಷದೀಪೋತ್ಸವಕ್ಕೆ ತೆರೆ

ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ ಆಪ್: ಕೇಜ್ರಿವಾಲ್ ಹೇಳಿದ್ದೇನು?

AAP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ.. ಕೇಜ್ರಿವಾಲ್ ಹೇಳಿದ್ದೇನು?

8

Mangaluru: ಹಳೆಯ ಕಾಲದ ಕಥೆ ಹೇಳಿದ ಚಿತ್ರಗಳು, ಸಾಂಸ್ಕೃತಿಕ ಚಿತ್ರಣ

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Bidar: ಬಸವಣ್ಣಗೆ ಅವಮಾನ ಮಾಡಿದ ಯತ್ನಾಳ್‌ ಮಾನಸಿಕ ರೋಗಿ: ಈಶ್ವರ ಖಂಡ್ರೆ

Priyanka Upendra: 25ರ ಸಂಭ್ರಮದಲ್ಲಿ ʼಉಗ್ರಾವತಾರʼ

Priyanka Upendra: 25ರ ಸಂಭ್ರಮದಲ್ಲಿ ʼಉಗ್ರಾವತಾರʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.