ಸಂಸ್ಕೃತದಲ್ಲಿ ತೆರೆಗೆ ಬರಲಿದೆ ಮಂಗಳಯಾನದ ಸಾಕ್ಷ್ಯಚಿತ್ರ!
ಜಗತ್ತಿನ ಸಿನಿಮಾ ಇತಿಹಾಸದಲ್ಲಿ ಇಂಥ ಪ್ರಯತ್ನ ಮೊದಲನೇಯದ್ದು; ಫೆಬ್ರವರಿಯಲ್ಲಿ ಚಿತ್ರೀಕರಣ ಶುರು, ಏಪ್ರಿಲ್‌ನಲ್ಲಿ ತೆರೆಗೆ ಬರುವ ನಿರೀಕ್ಷೆ
Team Udayavani, Dec 23, 2021, 7:30 AM IST
ತಿರುವನಂತಪುರ: ಸಂಸ್ಕೃತವೆಂದರೆ ದೇವ ಭಾಷೆಯೆಂದೇ ಪ್ರತೀತಿ. ಅದರಲ್ಲಿ ರಾಕೆಟ್, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳು ಪ್ರಸ್ತಾವನೆ ಇದೆಯೇ ಎಂದು ಅಚ್ಚರಿಗೊಳ್ಳಬೇಕಾದ ಅಗತ್ಯವೇ ಇಲ್ಲ. ಅಂಥ ಒಂದು ಪ್ರಯತ್ನವನ್ನೂ ಈಗ ಮಾಡಲಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ವಿನೋದ್ ಮಂಕ್ರಾ ಅವರು ಸಂಸ್ಕೃತದಲ್ಲಿ ಮಂಗಳ ಗ್ರಹಕ್ಕೆ ಇಸ್ರೋ ಕೈಗೊಂಡಿದ್ದ ಯಶಸ್ವಿ ಯಾನವನ್ನು ಆಧರಿಸಿ ಹೊಸ ಸಾಕ್ಷ್ಯಚಿತ್ರ ನಿರ್ಮಿಸಲಿದ್ದಾರೆ. ವಿಜ್ಞಾನ ವಿಚಾರಕ್ಕೆ ಸಂಬಂಧಿಸಿದಂತೆ ಸಂಸ್ಕೃತದಲ್ಲಿ ಸಿನಿಮಾ ನಿರ್ಮಾಣ ಜಗತ್ತಿನ ಸಿನಿಮಾ ಇತಿಹಾಸದಲ್ಲಿಯೇ ಈ ಪ್ರಯತ್ನ ಮೊದಲನೇಯದ್ದು ಎಂದು ಹೇಳಲಾಗುತ್ತಿದೆ.
ಅಂದ ಹಾಗೆ ವಿನೋದ್ ಮಂಕ್ರಾ ಅವರ ಹೊಸ ಸಾಕ್ಷ್ಯಚಿತ್ರದ ಹೆಸರು “ಯಾನಮ್’. ಒಟ್ಟು 45 ನಿಮಿಷಗಳ ಅವಧಿಯದ್ದಾಗಿರುವ ಸಿನಿಮಾವನ್ನು ಇಸ್ರೋದ ನಿವೃತ್ತ ಮುಖ್ಯಸ್ಥ ಡಾ.ಕೆ.ರಾಧಾಕೃಷ್ಣನ್ ಅವರು ಬರೆದ “ಮೈ ಒಡಿಸ್ಸಿ- ಮೆಮೊರೀಸ್ ಆಫ್ ದ ಮ್ಯಾನ್ ಬಿಹೈಂಡ್ ದ ಮಂಗಲ್‌ಯಾನ್ ಮಿಷನ್ (My Odyssey: Memoirs of the Man Behind the Mangalyaan Mission) ಎಂಬ ಕೃತಿಯನ್ನು ಆಧರಿಸಿ ನಿರ್ಮಿಸಲಾಗಿದೆ.
ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಮಂಕ್ರಾ ಸಿನಿಮಾದಲ್ಲಿನ ಸಂಭಾಷಣೆಗಳು ಪೂರ್ಣ ಪ್ರಮಾಣದಲ್ಲಿ ಸಂಸ್ಕೃತದಲ್ಲಿಯೇ ರಚಿಸಲಾಗಿದೆ. 2022ರ ಫೆಬ್ರವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ. ಏಪ್ರಿಲ್‌ಗೆ ಸಿನಿಮಾವನ್ನು ತೆರೆಗೆ ತರುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಂಸ್ಕೃತದಲ್ಲಿ ಇದೇ ಮೊದಲ ಬಾರಿಗೆ ಇಂಥ ಪ್ರಯತ್ನ ಕೈಗೊಳ್ಳಲಾಗುತ್ತಿದೆ. ಈ ಸಾಹಕಕ್ಕೆ ಕೈ ಹಾಕಲು ತಮ್ಮದೇ ಆದ ಕಾರಣಗಳಿವೆ ಎಂದು ಅವರು “ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಮತ್ತೆ ಕನ್ನಡ ಧ್ವಜ ಸುಟ್ಟ ಶಿವಸೇನೆ
ನಾಸಾದವರಿಗೆ:
ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ನಾಸಾ, ಐರೋಪ್ಯ ಒಕ್ಕೂಟದ ಬಾಹ್ಯಾಕಾಶ ಸಂಸ್ಥೆ, ಸ್ಪೇಸ್ ಎಕ್ಸ್‌ನ ವಿಜ್ಞಾನಿಗಳಿಗೆ ಪ್ರಸ್ತಾವಿತ ಸಿನಿಮಾ ತೋರಿಸಬೇಕೆಂದು ಇದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶ ಸಾಧಿಸಿದ ಪ್ರಧಾನ ಸಾಧನೆಯನ್ನು ಪ್ರಾಚೀನ ಭಾರತದ ಭಾಷೆಯಲ್ಲಿ ಜಗತ್ತಿನ ವಿಜ್ಞಾನಿಗಳು ವೀಕ್ಷಿಸಲಿದ್ದಾರೆ ಎಂದು ನಿರ್ದೇಶಕ ಹೇಳಿಕೊಂಡಿದ್ದಾರೆ.
ಹಲವು ಪರಿಣತರ ಸಾಥ್:
ಸಾಕ್ಷ್ಯ ಚಿತ್ರವನ್ನು ಹಲವು ತಾಂತ್ರಿಕ ಪರಿಣಿತರ ಸಹಾಯದಿಂದ ನಿರ್ಮಿಸಲಾಗುತ್ತದೆ. ಎ.ವಿ.ಅನೂಪ್ ಅವರು ನಿರ್ಮಿಸಲಿದ್ದಾರೆ. 1961ರ ಏ.12ರಂದು ರಷ್ಯಾದ ಯುರಿ ಗಗಾರಿನ್ ಅವರು ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಿ ಮುಂದಿನ ವರ್ಷದ ಏಪ್ರಿಲ್‌ಗೆ 61 ವರ್ಷಗಳು ಪೂರ್ತಿಯಾಗಲಿದೆ. ಆ ದಿನಕ್ಕೆ ಸರಿಯಾಗುವಂತೆ ಬಿಡುಗಡೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ನಿರ್ದೇಶಕ ವಿನೋದ್ ಹೇಳಿದ್ದಾರೆ. ಸಂಸ್ಕೃತ ಭಾಷೆಯಲ್ಲಿ ಸಾಕ್ಷ್ಯಚಿತ್ರ ಇರಲಿದ್ದರೂ, ವೈಜ್ಞಾನಿಕ ಸಾಕ್ಷ್ಯಚಿತ್ರಕ್ಕೆ ಯಾವ ತಾಂತ್ರಿಕ ಅಂಶಗಳು ಬೇಕೋ ಅದನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.