ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಸೌರಾಷ್ಟ್ರ, ಸರ್ವೀಸಸ್ ಸೆಮಿ ಪ್ರವೇಶ
Team Udayavani, Dec 23, 2021, 5:10 AM IST
ಜೈಪುರ: ಸೌರಾಷ್ಟ್ರ ಮತ್ತು ಸರ್ವೀಸಸ್ ತಂಡಗಳು ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿವೆ. ಬುಧವಾರದ ಪಂದ್ಯಗಳಲ್ಲಿ ಈ ತಂಡಗಳು ಕ್ರಮವಾಗಿ ವಿದರ್ಭ ಹಾಗೂ ಕೇರಳವನ್ನು 7 ವಿಕೆಟ್‌ಗಳಿಂದ ಮಣಿಸಿದವು.
ಶುಕ್ರವಾರದ ಸೆಮಿಫೈನಲ್ ಪಂದ್ಯಗಳಲ್ಲಿ ಹಿಮಾಚಲ ಪ್ರದೇಶ-ಸರ್ವೀಸಸ್ ಮತ್ತು ತಮಿಳುನಾಡು-ಸೌರಾಷ್ಟ್ರ ಸೆಣಸಲಿವೆ.
ಸಣ್ಣ ಮೊತ್ತಕ್ಕೆ ಆಲೌಟ್
ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳು ಸಣ್ಣ ಮೊತ್ತಕ್ಕೆ ಕುಸಿದವು. “ಸವಾಯ್ ಮಾನ್‌ಸಿಂಗ್ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖಿಯಲ್ಲಿ ವಿದರ್ಭ 40.3 ಓವರ್‌ಗಳಲ್ಲಿ 150 ರನ್ನಿಗೆ ಆಲೌಟಾದರೆ, ಸೌರಾಷ್ಟ್ರ 29.5 ಓವರ್‌ಗಳಲ್ಲಿ 3 ವಿಕೆಟಿಗೆ 151 ರನ್ ಬಾರಿಸಿ ಸುಲಭ ಜಯ ಸಾಧಿಸಿತು.
ಸೌರಾಷ್ಟ್ರ ಸಂಘಟಿತ ಬೌಲಿಂಗ್ ದಾಳಿಯ ಮೂಲಕ ಮೇಲುಗೈ ಸಾಧಿಸಿತು. ಬೌಲಿಂಗಿಗೆ ಇಳಿದ ಎಲ್ಲ 6 ಮಂದಿ ಯಶಸ್ಸು ಕಂಡರು. ನಾಯಕ ಜೈದೇವ್ ಉನಾದ್ಕತ್, ಚಿರಾಗ್ ಜಾನಿ, ಧರ್ಮೇಂದ್ರಸಿನ್ಹ ಜಡೇಜ ಮತ್ತು ಯುವರಾಜ್ ಚುಡಾಸಮ ತಲಾ 2 ವಿಕೆಟ್ ಕಿತ್ತು ವಿದರ್ಭಕ್ಕೆ ಕಡಿವಾಣ ಹಾಕಿದರು. ವಿದರ್ಭ ಸರದಿಯಲ್ಲಿ ಅಪೂರ್ವ್ ವಾಂಖೇಡೆ ಅವರದು ಏಕಾಂಗಿ ಹೋರಾಟವಾಗಿತ್ತು (72).
ಇದನ್ನೂ ಓದಿ:ಪ್ರೊ ಕಬಡ್ಡಿ: ಬುಲ್ಸ್ ಗೆ ತಿವಿದ ಯು ಮುಂಬಾ
ಸರ್ವೀಸಸ್ ಸಾಹಸ
“ಕೆ.ಎಲ್. ಸೈನಿ ಗ್ರೌಂಡ್’ನಲ್ಲಿ ಸರ್ವೀಸಸ್ ಕೂಡ ಸಂಘಟಿತ ಬೌಲಿಂಗ್ ಮೂಲವೇ ಯಶಸ್ಸು ಕಂಡಿತು. ಎಲ್ಲ 5 ಮಂದಿ ವಿಕೆಟ್ ಉರುಳಿಸಿದರು. ಕೇರಳ 40.4 ಓವರ್‌ಗಳಲ್ಲಿ 175ಕ್ಕೆ ಸರ್ವಪತನ ಕಂಡಿತು. ಇದರಲ್ಲಿ ಆರಂಭಕಾರ ರೋಹನ್ ಕುನ್ನುಮ್ಮಾಳ್ ಗಳಿಕೆಯೇ 85 ರನ್. ವಿ. ಮನೋಹರನ್ 41 ರನ್ ಮಾಡಿದರು. ಜವಾಬಿತ್ತ ಸರ್ವೀಸಸ್ 30.5 ಓವರ್‌ಗಳಲ್ಲಿ 3 ವಿಕೆಟಿಗೆ 176 ರನ್ ಹೊಡೆಯಿತು. ಓಪನರ್ ರವಿ ಚೌಹಾಣ್ 95 ರನ್ ಬಾರಿಸಿದರು.
ಸರ್ವೀಸಸ್ ಬೌಲಿಂಗ್‌ನಲ್ಲಿ ಮಿಂಚಿದವರು ದಿವೇಶ್ ಪಠಾಣಿಯ (19ಕ್ಕೆ 3). ಅಭಿಷೇಕ್ ತಿವಾರಿ ಮತ್ತು ಪುಲ್ಕಿತ್ ನಾರಂಗ್ ತಲಾ 2 ವಿಕೆಟ್ ಕಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.