ಮೈಕೊರೆಯುವ ಚಳಿಗೆ ತತ್ತರಿಸುತ್ತಿದೆ ರಾಜ್ಯ; ಮುಂದಿನ 4 ದಿನ ರಾಜ್ಯಾದ್ಯಂತ ತೀವ್ರ ಚಳಿ
ಬೀದರ್‌ನಲ್ಲಿ ನಿನ್ನೆ 80 ವರ್ಷಗಳಲ್ಲೇ ಅತ್ಯಂತ ಕನಿಷ್ಠ ತಾಪಮಾನ ದಾಖಲು
Team Udayavani, Dec 23, 2021, 7:05 AM IST
ಬೆಂಗಳೂರು: ಅಕಾಲಿಕ ಮಳೆಯ ಅವಾಂತರ ಮುಗಿಯುತ್ತಿರುವಂತೆಯೇ ರಾಜ್ಯಾದ್ಯಂತ ಚಳಿ ಮೈಕೊರೆಯ ತೊಡಗಿದೆ. ಉತ್ತರ ಭಾರತದ ಚಳಿಗಾಳಿ ದಕ್ಷಿಣದತ್ತಲೂ ಬೀಸತೊಡಗಿದ್ದು, ರಾಜ್ಯದ ಬೀದರ್‌ನಲ್ಲಿ ಡಿಸೆಂಬರ್ ತಿಂಗಳ ಕನಿಷ್ಠ ತಾಪಮಾನ ದಾಖಲೆ ಮಟ್ಟಕ್ಕೆ ಕುಸಿದಿದೆ. ಇಲ್ಲಿ ಕಳೆದ 80 ವರ್ಷಗಳಲ್ಲೇ ಅತ್ಯಂತ ಕನಿಷ್ಠ ತಾಪಮಾನ ಬುಧವಾರ ದಾಖಲಾಗಿದೆ.
ಅಷ್ಟೇ ಅಲ್ಲ ಮುಂದಿನ 3-4 ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಚಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆಯನ್ನೂ ನೀಡಿದೆ.
ಬೀದರ್‌ನಲ್ಲಿ ಸೋಮವಾರ 9.7 ಡಿ.ಸೆ., ಮಂಗಳವಾರ 9.4 ಡಿ.ಸೆ. ಇದ್ದ ಕನಿಷ್ಠ ತಾಪಮಾನ ಬುಧವಾರ 9.0 ಡಿ.ಸೆ.ಗೆ ಇಳಿದಿದೆ. ಅಂದರೆ ಸಾಮಾನ್ಯ ದಿನಗಳಿಗಿಂತ 6.7 ಡಿ.ಸೆ.ನಷ್ಟು ತಾಪಮಾನ ಕಡಿಮೆಯಾಗಿದೆ. ಇದು ಡಿಸೆಂಬರ್‌ನಲ್ಲಿ ಈವರೆಗೆ ದಾಖಲಾದ ಅತೀ ಕನಿಷ್ಠ ತಾಪಮಾನ.
ಒಟ್ಟಾರೆ ಚಳಿಗಾಲದ ದಾಖಲೆ ಪ್ರಮಾಣವನ್ನು ಲೆಕ್ಕ ಹಾಕಿದರೆ ಬೀದರ್‌ನಲ್ಲಿ ಈವರೆಗಿನ ಕನಿಷ್ಠ ತಾಪಮಾನ 5.6 ಡಿ.ಸೆ.ನಷ್ಟಿದೆ. ಆದರೆ ಡಿಸೆಂಬರನ್ನು ಮಾತ್ರ ಪರಿಗಣಿಸಿದಾಗ ಒಂದಂಕಿಗೆ ಕನಿಷ್ಠ ತಾಪಮಾನ ದಾಖಲಾಗಿರುವ ಉದಾಹರಣೆಗಳಿರಲಿಲ್ಲ. ಆದರೆ ಬುಧವಾರ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಇದನ್ನೂ ಓದಿ:ಆನ್‌ಲೈನ್ ಗೇಮ್ ನಿಷೇಧ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ವಾಹನ ಸಂಚಾರಕ್ಕೂ ಸಮಸ್ಯೆ
ಚಳಿಗಾಲ ಆರಂಭವಾಗಿ 20 ದಿನಗಳು ಕಳೆದಿದ್ದರೂ ಚಳಿ ಸಾಮಾನ್ಯ ವಾಗಿತ್ತು. ಉತ್ತರ ಹಾಗೂ ಈಶಾನ್ಯ ಭಾರತದಿಂದ ಬೀಸುತ್ತಿರುವ ಶೀತಗಾಳಿಯಿಂದ ಈಗ ದಿಢೀರ್ ಹೆಚ್ಚಳವಾಗಿದೆ. ಸಂಜೆಯಾಗುತ್ತಲೇ ಚಳಿಗಾಳಿ ಬೀಸುತ್ತಿರುವುದರಿಂದ ಜನ ಬೇಗನೆ ಮನೆ ಸೇರಿಕೊಳ್ಳುತ್ತಿದ್ದಾರೆ. ಬಯಲುಸೀಮೆ ಪ್ರದೇಶಗಳಲ್ಲಿ ಮೈ ಥರಗುಟ್ಟಿಸುವಂತಹ ರೀತಿಯಲ್ಲಿ ಚಳಿಯ ತೀವ್ರತೆ ಹೆಚ್ಚಳವಾಗಿದೆ. ಸೂರ್ಯ ಮುಳುಗುತ್ತಿದ್ದಂತೆ ಮಂಜು ಕವಿಯುತ್ತಿದ್ದು, ರಾತ್ರಿ ಮತ್ತು ಬೆಳಗಿನ ಜಾವ ಮಂಜು ಕವಿಯುವುದರಿಂದ ವಾಹನ ಸಂಚಾರ ಮತ್ತು ಜನರ ಸಂಚಾರಕ್ಕೆ ಅಡಚಣೆಯಾಗಿದೆ.
ಎಲ್ಲೆಲ್ಲಿ ಎಷ್ಟು ತಾಪಮಾನ?
ಬುಧವಾರ ಚಿಂತಾಮಣಿಯಲ್ಲಿ ಕನಿಷ್ಠ ತಾಪಮಾನ 10.3 ಡಿ.ಸೆ., ಉತ್ತರ ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ 10.8 ಡಿ.ಸೆ., ಬಾಗಲಕೋಟೆ 11.0 ಡಿ.ಸೆ., ದಾವಣಗೆರೆ ಹಾಗೂ ಧಾರವಾಡ 11.3 ಡಿ.ಸೆ., ವಿಜಯಪುರ 11.4, ರಾಯಚೂರು ಹಾಗೂ ಹಾವೇರಿಯಲ್ಲಿ 12.0, ಚಿಕ್ಕಮಗಳೂರು 12.2, ಚಿತ್ರದುರ್ಗ 12.6, ಕೊಪ್ಪಳದಲ್ಲಿ 12.5, ಆಗುಂಬೆ 13.0, ಶಿವಮೊಗ್ಗ 13.4, ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ 13.5, ಗದಗ 13.6, ಬೆಂಗಳೂರು ನಗರದಲ್ಲಿ 14.2ರಷ್ಟು ತಾಪಮಾನ ಕಂಡುಬಂದಿದೆ.
ಶಿಮ್ಲಾವನ್ನೇ ಮೀರಿಸಿದ ದಿಲ್ಲಿ!
ದೇಶಾದ್ಯಂತ ಚಳಿ ತೀವ್ರಗೊಳ್ಳುತ್ತಿದ್ದು ದಿಲ್ಲಿ ಅಕ್ಷರಶಃ ನಡುಗತೊಡಗಿದೆ. ಬುಧವಾರ 4.4 ಡಿ.ಸೆ. ತಾಪಮಾನ ದಾಖ ಲಾಗಿದ್ದು, ಚಳಿಯಲ್ಲಿ ಶಿಮ್ಲಾವನ್ನೇ ಮೀರಿಸಿದೆ. ಶಿಮ್ಲಾದಲ್ಲಿ ತಾಪ ಮಾನ 5.4 ಡಿ.ಸೆ. ಆಗಿತ್ತು. ಉತ್ತರಾಖಂಡ, ಉತ್ತರ ಪ್ರದೇಶ, ಒಡಿಶಾ, ಛತ್ತೀಸ್‌ಗಢ, ಪಂಜಾಬ್, ಹರ್ಯಾಣದಲ್ಲೂ ತೀವ್ರ ಚಳಿ ಮುಂದುವರಿದಿದೆ. ಹೈದರಾಬಾದ್‌ನಲ್ಲಿ ಶೀತಗಾಳಿ ಹೆಚ್ಚು ತ್ತಿರುವ ಕಾರಣ ಮುಂದಿನ 4 ದಿನ ಗಳ ಕಾಲ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.